ಆಂಧ್ರಪ್ರದೇಶ : ಕರ್ನಾಟಕ ಹಾಲು ಒಕ್ಕೂಟ ( KMF) ಗೆ ಆಂಧ್ರ ಸರ್ಕಾರವು ₹ 130 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಬಾಕಿ ಹಣದ ತ್ವರಿತ ಪಾವತಿಗಾಗಿ ಪತ್ರದ ಮೇಲೆ ಪತ್ರ ಬರೆದರೂ ಆಂಧ್ರದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೆಎಂಎಫ್ ವತಿಯಿಂದ ಆಂಧ್ರ ಮಹಿಳಾ ಮತ್ತು ಮಕ್ಕಲ ಅಭಿವದ್ಧಿ ಇಲಾಖೆಯ Principal Secretary ಎ. ಆರ್ ಅನುರಾಧ ಅವರಿಗೂ ಬರೆದ ಪತ್ರಕ್ಕೆ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಆಂಧ್ರ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಬಾಕಿ ಮೊತ್ತ ಪಾವತಿಸದಿದ್ದಲ್ಲಿ ಹಾಲು ಪೂರೈಕೆ ನಿಲ್ಲಿಸಲಾಗುವುದು ಅಂದಿದ್ದಾರೆ.
ಹಾಲು ಪೂರೈಕೆ ಸಂಬಂಧ ಒಕ್ಕೂಟ ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವೆ 2020ರ ಜೂನ್ ತಿಂಗಳಲ್ಲಿ ಒಪ್ಪಂದವಾಗಿತ್ತು. ಲೀಟರಿಗೆ 5 ರೂಪಾಯಿಯಂತೆ ಪೂರೈಕೆಯಾಗುತ್ತಿದ್ದ ಹಾಲನ್ನು ಆಂಧ್ರದ ಅಂಗನವಾಡಿಗಳಲ್ಲಿ Sampoorna Poshana scheme ಸಂಪೂರ್ಣ ಪೋಷಣಾ ಯೋಜನೆಯಡಿಯಲ್ಲಿ ವಿತರಿಸಲಾಗುತ್ತಿತ್ತು.
ಆಧ್ರಪ್ರದೇಶ ಸರ್ಕಾರ ಸಂಪೂರ್ಣ ಪೋಷಣಾ ಯೋಜನೆಗಾಗಿ ಒಕ್ಕೂಟದಿಂದ ಪ್ರತೀ ತಿಂಗಳು 110 ಲಕ್ಷ ಲೀಟರ್ ಹಾಲು ಖರೀದಿಸುತ್ತಿದೆ. ಆದರೆ ಇದೀಗ ಕಳೆದ ನಾಲ್ಕು ತಿಂಗಳಿಂದ ಹಣ ಪಾವತಿಸಿಲ್ಲ. ಈ ನಡುವೆ ಖರೀದಿ ದರ, ಇಂಧನ ದರ ಏರಿಕೆಯಾದ ಕಾರಣ ಕಳೆದ ಫೆಬ್ರುವರಿಯಲ್ಲಿ ಲೀಟರ್‌ಗೆ 5ರೂಪಾಯಿ ಏರಿಸಲಾಗಿತ್ತು. ಆದರೆ ಈ ದರ ಏರಿಕೆಗೆ ಆಂಧ್ರದ ಅಧಿಕಾರಿಗಳು ಮೌಖಿಕ ಒಪ್ಪಿಗೆ ನೀಡಿದ್ದಾರೆ. ಆದರೆ ದರ ಪರಿಷ್ಕರಣೆ ಲಿಖಿತವಾಗಿ ಆಗಿಲ್ಲ. ಹೀಗಾಗಿ ಮೇ 2021ರ ತನಕ ಹಳೆಯ ದರದಲ್ಲೇ ಬಿಲ್ ನೀಡುವಂತೆ ಕೇಳಿಕೊಂಡಿದ್ದಾರೆ.
ಇನ್ನು ಆಂಧ್ರದ ಅಧಿಕಾರಿಗಳು ಹಣಕಾಸು ಇಲಾಖೆಗೆ ಕೆಎಂಎಫ್ ಗೆ ಬಾಕಿ ಪಾವತಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಹಣ ಬಿಡುಗಡೆಯಾಗಿಲ್ಲ ಎಂದು economictimes ಅಧಿಕಾರಿಗಳ ಮಾತು ಉಲ್ಲೇಖಿಸಿ ವರದಿ ಮಾಡಿದೆ.
Discussion about this post