ಕರ್ನಾಟಕದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. Karnataka Rain ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಅನೇಕ ಭಾಗಗಳಲ್ಲಿ ಮಳೆಯಿಂದ ಸಿಕ್ಕಾಪಟ್ಟೆ ಹಾನಿಯಾಗಿದೆ.
ಚಿಕ್ಕಮಗಳೂರು : ಮಳೆಯ (Karnataka Rain) ಅಬ್ಬರದ ನಡುವೆ ಗದ್ದೆಯ ಮಧ್ಯ ಭಾಗದಲ್ಲಿ ಭೂಮಿ ಕುಸಿದ ಘಟನೆ ಚಿಕ್ಕಮಗಳೂರಿನ ಕಳಸ ತಾಲೂಕಿನ ನೆಲ್ಲಿಬೀಡು ಎಂಬಲ್ಲಿ ನಡೆದಿದೆ.
ಮನೋಜ್ ಅನ್ನುವವರಿಗೆ ಸೇರಿದ ಗದ್ದೆ 60 ರಿಂದ 70 ಅಡಿ ಕುಸಿದಿದ್ದು ಆತಂಕಕ್ಕೆ ಕಾರಣವಾಗಿದೆ. ನಾಟಿಗಾಗಿ ಸಿದ್ದಗೊಂಡ ಗದ್ದೆಯೇ ಕುಸಿದು ಬಿದ್ದಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ನಾಳೆ ಮತ್ತೆಲ್ಲಿ ಕುಸಿಯುತ್ತದೋ, ಎಲ್ಲಿ ಕಾಲಿಟ್ರೆ ಕಾಲು ಹೂತು ಹೋಗುತ್ತದೋ ಅನ್ನುವ ಆತಂಕ ಎದುರಾಗಿದೆ.
ಇದನ್ನೂ ಓದಿ : Eliminate fastag & toll plaza : ಕೆಲ ವರ್ಷಗಳಲ್ಲಿ ಟೋಲ್ ಗೇಟ್ ಗಳೇ ಮಾಯ
ನಿನ್ನೆಯಷ್ಟೇ ನಾಟಿ ಸಲುವಾಗಿ ಭೂಮಿ ಕುಸಿದ ಜಾಗದಲ್ಲೇ ಮನೋಜ್ ಟಿಲ್ಲರ್ ನಲ್ಲಿ ಉಳುಮೆ ಮಾಡಿದ್ದರು. ಒಂದು ವೇಳೆ ಆಗ ಏನಾದರೂ ಭೂಮಿ ಕುಸಿಯುತ್ತಿದ್ರೆ ನಾನು ಮತ್ತು ಟಿಲ್ಲರ್ ವಸುಂಧರೆಯ ಪಾಲಾಗುತ್ತಿದ್ದೆವು ಅನ್ನುವುದು ಮನೋಜ್ ಅವರ ಮಾತು.
ಮೂರು ತಲೆಮಾರುಗಳಿಂದ ಈ ಗದ್ದೆಯಲ್ಲಿ ಸಾಗುವಳಿ ಮಾಡುತ್ತಿದ್ದೇವೆ. ಇಂತಹ ಘಟನೆ ಎಂದಿಗೂ ನಡೆದಿರಲಿಲ್ಲ. ಮೊದಲು ಭೂಮಿ ಕಂಪಿಸಿದ ಅನುಭವವಾಯ್ತು. ಕೆಲವೇ ಹೊತ್ತಿನಲ್ಲಿ ಭೂಮಿ ಕುಸಿಯಿತು ಅಂದಿದ್ದಾರೆ. ಹಾಗಾದ್ರೆ ಇಂತಹ ಘಟನೆಗಳಿಗೆ ಕಾರಣವೇನು ಅನ್ನುವ ಪ್ರಶ್ನೆಗೆ ಭೂಗರ್ಭ ಶಾಸ್ತ್ರಜ್ಞರೇ ಉತ್ತರಿಸಬೇಕು.
Discussion about this post