ಬೆಂಗಳೂರು : ವುಹಾನ್ ವೈರಸ್ ಕಾರಣದಿಂದ ಪರೀಕ್ಷೆ ಇಲ್ಲದೆ ಪಾಸ್ ಆಗುವ ಭಾಗ್ಯವನ್ನು ಶಿಕ್ಷಣ ಇಲಾಖೆ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಕರುಣಿಸಿತ್ತು. ಈ ಸೌಲಭ್ಯದಿಂದ ಸುದೀರ್ಘ ಸಮಯದಿಂದ ಪರೀಕ್ಷೆ ಕಟ್ಟುತ್ತಿದ್ದ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ.
ಆದರೆ ಇದೀಗ ಶಿಕ್ಷಣ ಇಲಾಖೆ ಪಾಸ್ ಭಾಗ್ಯವನ್ನು 878 ವಿದ್ಯಾರ್ಥಿಗಳು ತಿರಸ್ಕರಿಸಿದ್ದು, ನಿರೀಕ್ಷೆಯಷ್ಟು ಅಂಕ ಬಂದಿಲ್ಲ, ಬದಲಾಗಿ ಪರೀಕ್ಷೆ ಬರೆದ್ರೆ ಹೆಚ್ಚು ಅಂಕ ಪಡೆಯುತ್ತೇವೆ ಎಂದು ನಿರ್ಧರಿಸಿದ್ದಾರೆ. ಹೀಗಾಗಿ ಶಿಕ್ಷಣ ಇಲಾಖೆ ನೀಡಿರುವ ಪರೀಕ್ಷೆ ಬರೆಯುವ ಅವಕಾಶದ ಮೂಲಕ ಗೆದ್ದು ತೋರಿಸಲು ಹೊರಟಿದ್ದಾರೆ. ಈ ಹಿಂದೆ ಫಲಿತಾಂಶ ತೃಪ್ತಿಯಾಗದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶವಿದೆ ಎಂದು ಈ ಹಿಂದೆ ಶಿಕ್ಷಣ ಇಲಾಖೆ ಹೇಳಿತ್ತು.
ಹೀಗಾಗಿ ಇದೀಗ ಪರೀಕ್ಷೆ ತಿರಸ್ಕರಿಸಿರುವ 878 ವಿದ್ಯಾರ್ಥಿಗಳಿಗೆ ಆಗಸ್ಟ್ 19 ರಂದು ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ. ಈ ಪೈಕಿ ವಿಜಯನಗರ ಜಿಲ್ಲೆಯ ಒಂದೇ ಕಾಲೇಜಿನ 104 ವಿದ್ಯಾರ್ಥಿಗಳು ಸೇರಿದ್ದಾರೆ. ಮತ್ತೂ ವಿಶೇಷ ಅಂದ್ರೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲೇ 220ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದು ಪಾಸ್ ಆಗ್ತೇವೆ ಎಂದು ಡಿಸೈಡ್ ಮಾಡಿದ್ದಾರೆ.
ವಿಜಯನಗರ ಕೊಟ್ಟೂರಿನ ಅನುದಾನ ರಹಿತ ಪಿಯು ಕಾಲೇಜು ಪ್ರತೀ ವರ್ಷ ಉತ್ತಮ ಫಲಿತಾಂಶ ತೋರಿಸುತ್ತಿತ್ತು. ಪ್ರತೀ ವರ್ಷ ಕಾಲೇಜಿನ ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್ ಕಟ್ಟಿಟ್ಟ ಬುತ್ತಿ. ಅದರಲ್ಲೂ ಆರ್ಟ್ಸ್ ವಿಭಾಗ Rank ಪಡೆಯುತ್ತಿತ್ತು. ಇಡೀ ರಾಜ್ಯ ಈ ಕಾಲೇಜಿನ ಕಲಾ ವಿಭಾಗ ಮೊದಲ ಸ್ಥಾನದಲ್ಲಿ ಇರುತ್ತಿತ್ತು. ಆದರೆ ಈ ಬಾರಿ 6 ವಿದ್ಯಾರ್ಥಿಗಳು ಮಾತ್ರ 600 ಅಂಕ ಗಳಿಸಿದ್ದಾರೆ. ಹೀಗಾಗಿ 104 ವಿದ್ಯಾರ್ಥಿಗಳು ಆಗಸ್ಚ್ 19 ರಂದು ಪರೀಕ್ಷೆ ಬರೆಯಲಿದ್ದಾರೆ.
Discussion about this post