ಮಂಡ್ಯ : ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದಾರೆ. ಈ ಸಂಬಂಧ ಇಂದು ಗುದ್ದಲಿ ಪೂಜೆ ನೆರವೇರಿದ್ದು, ಇನ್ನು 9 ತಿಂಗಳ ಒಳಗಾಗಿ ಗೃಹಪ್ರವೇಶ ಮಾಡುವ ಸಾಧ್ಯತೆಗಳಿದೆ. ಈ ನಡುವೆ ಸುಮಲತಾ ಅವರು ಮಂಡ್ಯದಲ್ಲಿ ಅದರಲ್ಲೂ ಮದ್ದೂರಿನ ಹನಕೆರೆಯಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿರುವುದು ದಳಪತಿಗಳಲ್ಲಿ ನಡುಕ ಹುಟ್ಟಿಸಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ ಕುಮಾರಸ್ವಾಮಿ ಮಾತನಾಡಿದ್ದಾರೆ.
ಇನ್ನು ಮಂಡ್ಯದ ಬದಲು, ಮದ್ದೂರಿನಲ್ಲಿ ಮನೆ ನಿರ್ಮಿಸುವ ಮೂಲಕ ಪುತ್ರ ಅಭಿಯ ರಾಜಕೀಯ ಪ್ರವೇಶಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ ಅನ್ನುವ ಮಾತುಗಳು ಕೇಳಿ ಬಂದಿದೆ. ಈಗಾಗಲೇ ದಳಪತಿಗಳ ಕಾಟದಿಂದ ಬೇಸತ್ತಿರುವ ಸುಮಲತಾ ರಾಜಕೀಯವಾಗಿ ಎಲ್ಲವನ್ನೂ ಎದುರಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಸುಮಲತಾ ಬಗ್ಗೆ ಕೇವಲವಾಗಿ ಮಾತನಾಡಿದ್ದ ಮದ್ದೂರು ಶಾಸಕರ ವಿರುದ್ಧವೇ ನೇರ ಸಮರ ಹೂಡುವ ಲಕ್ಷಣಗಳು ಕಾಣಿಸುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಭಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಪಕ್ಕಾ ಆಗಿದೆ.
ಇನ್ನು ಅಭಿ ರಾಜಕೀಯ ಬಗ್ಗೆ ಕೇಳಿದ್ರೆ ಸುಮಲತಾ ಯಾವುದೇ ಕಾರಣಕ್ಕೂ ಅಭಿಷೇಕ್ ಅವರನ್ನು ಸಿನಿಮಾ ರಂಗದಲ್ಲಿ ಬೆಳೆಸುತ್ತೇನೆ ಅನ್ನಲಿಲ್ಲ, ಬದಲಿಗೆ ಮಂಡ್ಯದಲ್ಲಿ ಮನೆ ಮಾಡಬೇಕು ಅನ್ನುವುದು ನನ್ನ ಹಾಗೂ ಅಭಿಯ ಆಸೆಯಾಗಿತ್ತು. ಎರಡು ವರ್ಷಗಳ ಜಾಗ ಹುಡುಕಾಡಿದ್ದೇವೆ. ಈಗ ಜಾಗ ದೊರೆತಿದೆ. ಮನೆ ನಿರ್ಮಿಸುತ್ತೇವೆ. ಅಭಿ ರಾಜಕೀಯ ಪ್ರವೇಶದ ಬಗ್ಗೆ ಅವನನ್ನೇ ಕೇಳಬೇಕು. ನನ್ನ ಒಪ್ಪಿಗೆ ಇದೆಯೋ ಇಲ್ಲವೋ, ಸಂದರ್ಭ, ಸಮಯ ಹೇಗಿರುತ್ತದೋ ನೋಡೋಣ. ನಮ್ಮ ಕೈಯಲ್ಲಿ ಏನೂ ಇಲ್ಲ. ದೇವರು ಬರದಂತೆ ಭವಿಷ್ಯ ಇರುತ್ತದೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.
Discussion about this post