ಬೆಂಗಳೂರು : ಈಗಾಗಲೇ ಸುರಿಯುತ್ತಿರುವ ಮಳೆ ಸಾಕಷ್ಟು ಹಾನಿ ಮಾಡಿದೆ. ಬೆಂಗಳೂರಿನ ಮಟ್ಟಿಗೆ ವ್ಯವಸ್ಥೆಯ ಲೋಪದಿಂದ ಜನ ನಲುಗಿ ಹೋಗಿದ್ದಾರೆ. ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಮಾಡಿದ ತಪ್ಪಿಗೆ ಜನ ನೀರಿನಲ್ಲಿ ಮುಳುಗುವಂತಾಯ್ತು. ಮತ್ತೊಂದು ಕಡೆ ಅಕಾಲಿಕ ಮಳೆಯ ಕಾರಣದಿಂದ ರೈತರು ಕಂಗಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅದರಲ್ಲೂ ಭತ್ತ, ಕಾಫಿ, ಅಡಿಕೆ ಹೀಗೆ ವಿವಿಧ ಬೆಳೆಗಳು ಸಂಪೂರ್ಣ ಹಾಳಾಗಿದೆ.
ಇದೀಗ ಮಳೆ ನಿಂತಿತು ಅನ್ನುವ ಹೊತ್ತಿಗೆ ಶನಿವಾರದಿಂದ ಮತ್ತೆ ಮಳೆ ಅಬ್ಬರಿಸಲಿದೆ ಅನ್ನುವ ಸುದ್ದಿ ಬಂದಿದೆ. ಹವಮಾನ ಇಲಾಖೆ ಈ ಎಚ್ಚರಿಕೆ ನೀಡಿದ್ದು ರಾಜ್ಯದ ಕರಾವಳಿ,ಮಲೆನಾಡು, ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಗುರುವಾರ ಮತ್ತು ಶುಕ್ರವಾರ ಚದುರಿದ ಮಳೆಯಾಗಲಿದೆ. ಶನಿವಾರ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಮಳೆ ಅಬ್ಬರಿಸಲಿದೆಯಂತೆ.
ಬಳ್ಳಾರಿ, ಕೊಪ್ಪಳ, ತುಮಕೂರು, ಬೆಳಗಾವಿ, ಕಲಬುರಗಿ,ಕೋಲಾರ, ಚಿಕ್ಕಬಳ್ಳಾಪುರ ಸೇರಿ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಮುನ್ಸೂಚನೆ ಸಿಕ್ಕ ಹಿನ್ನಲೆಯಲ್ಲಿ ಹವಮಾನ ಇಲಾಖೆ ಈ ಎಚ್ಚರಿಕೆ ನೀಡಿದ್ದು, ಬೆಂಗಳೂರಿನಲ್ಲಿ ಪರಿಹಾರ ಕಾರ್ಯಪ್ರಗತಿಯಲ್ಲಿರುವಾಗಲೇ ಶನಿವಾರದಿಂದ ಮಳೆಯಾಗಲಿದೆ ಅನ್ನುವ ಸುದ್ದಿ ರಾಜಧಾನಿ ವಾಸಿಗಳ ನಿದ್ದೆಗೆಡಿಸಿದೆ.
Discussion about this post