ಬೆಂಗಳೂರು : ಕೊರೋನಾ ನಿಯಂತ್ರಣ ವಿಚಾರದಲ್ಲಿ ರಾಜ್ಯ ಸರ್ಕಾರ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಮತ್ತು ವಿಕೇಂಡ್ ಕರ್ಫ್ಯೂ ಘೋಷಿಸಲಾಗಿದೆ. ವೀಕೇಂಡ್ ಕರ್ಫ್ಯೂ ಸಂದರ್ಭದಲ್ಲಿ ಹೋಟೆಲ್ ಪಾರ್ಸೆಲ್ ಸೇವೆ ಸಿಗಲಿದೆ. ಅದರಂತೆ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲೂ ಪಾರ್ಸೆಲ್ ಸಿಗಲಿದೆ ಅನ್ನುವ ನಿರೀಕ್ಷೆ ಇತ್ತು.
ಆದರೆ ಇದೀಗ ಅಬಕಾರಿ ಮೂಲದ ಮಾಹಿತಿಗಳ ಪ್ರಕಾರ ವೀಕೆಂಡ್ ಕರ್ಪ್ಯೂನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇರೋದಿಲ್ಲ ಅನ್ನಲಾಗಿದೆ. ಆದರೆ ಈ ಆದೇಶ ಬೆಂಗಳೂರಿಗೆ ಮಾತ್ರವೇ ಅಥವಾ ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆಯೇ ಅನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
ಒಂದು ವೇಳೆ ಈ ಬಗ್ಗೆ ಅಧಿಕೃತ ಆದೇಶ ಹೊರ ಬಿದ್ರೆ ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ಮದ್ಯ ಸಿಗೋದಿಲ್ಲ. ಮದ್ಯಬೇಕು ಅಂದ್ರೆ ಸೋಮವಾರ 10 ಗಂಟೆಯ ತನಕ ಕಾಯಬೇಕಾಗುತ್ತದೆ.
ಟ್ಯಾಂಕರ್ ನಿಂದ ರಾಸಾಯನಿಕ ಅನಿಲ ಸೋರಿಕೆ : 6 ಮಂದಿ ಸಾವು
ಗುಜರಾತ್ : ಸೂರತ್ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಾಸಾಯನಿಕ ಅನಿಲ ತುಂಬಿದ್ದ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗಿ ಆರು ಮಂದಿ ಮೃತಪಟ್ಟ ಘಟನೆ ಗುರುವಾರ ಮುಂಜಾನೆ ನಡೆದಿದೆ. ದುರ್ಘಟನೆಯಲ್ಲಿ 6 ಮಂದಿ ಉಸಿರುಗಟ್ಟಿ ಮೃತಪಟ್ರೆ, 20ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.
GICD ಯ ರಾಜ ಕಮಲ್ ಚಿಕ್ಕಡಿ ಫ್ಲಾಟ್ ನಂ.362ರ ಹೊರಗೆ ನಿಂತಿದ್ದ ರಾಸಾಯನಿಕ ಅನಿಲ ಟ್ಯಾಂಕರ್ ಪಕ್ಕದಲ್ಲೇ ಎಲ್ಲಾ ಕಾರ್ಮಿಕರು ಮಲಗಿದ್ದರು. ಏಕಾಏಕಿ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾದ ಕಾರಣ ಮಲಗಿದ್ದ ಕಾರ್ಮಿಕರ ಮೇಲೆ ಪರಿಣಾಮ ಬೀರಿದೆ.
ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Discussion about this post