Karnataka Election ನಲ್ಲಿ ಗೆಲ್ಲಲೇಬೇಕು ಎಂದು ಬಿಜೆಪಿ ಪಣ ತೊಟ್ಟಿದೆ
ಬೆಂಗಳೂರು : ಇನ್ನೇನು ಕರ್ನಾಟಕ ವಿಧಾನಸಭಾ ಕ್ಷೇತ್ರದ ಚುನಾವಣೆ ( Karnataka Election) ಸಮೀಪಸುತ್ತಿದೆ. ಇನ್ನು ಕೇವಲ ಆರು ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹಾಗಾಗಿಯೇ ಎಲ್ಲಾ ಪಕ್ಷಗಳ ಚಟುವಟಿಕೆಗಳು ಗರಿಗೆದರಿದ್ದು ಚುನಾವಣೆಯ ಅಖಾಡ ದಿನೇ ದಿನೇ ರಂಗೇರುತ್ತಿದೆ.
ಕಾಂಗ್ರೆಸ್ ಪಕ್ಷ ಚುನಾವಣಾ ( Karnataka Election) ತಯಾರಿಯಾಗಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದರೆ ಬಿಜೆಪಿ ಮಾತ್ರ ತನ್ನ ಹಳೆಯ ತಪ್ಪನ್ನು ತಿದ್ದಿಕೊಳ್ಳುವ ಯೋಚನೆಯಲ್ಲಿದೆ. ರಾಜ್ಯ ರಾಜಕಾರಣದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ, ಪೇ ಸಿಎಂ ಆರೋಪಗಳು ಬಿಜೆಪಿಯನ್ನು ಮುಜುಗರಕ್ಕೆ ಈಡು ಮಾಡಿರುವ ಕಾರಣಕ್ಕೆ ಈ ಚುನಾವಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಹೈಕಮಾಂಡ್ ನೇರವಾಗಿ ನಿಭಾಯಿಸಲು ನಿರ್ಧರಿಸಿದೆ.
ಇದನ್ನೂ ಓದಿ :Karnataka Politics : ಕಟೀಲ್ ವಿದೂಷಕ : ಸಿದ್ದರಾಮಯ್ಯ ನರಹಂತಕ : ಪಾವನವಾಯ್ತು ಕರ್ನಾಟಕ
ಹಾಗಾಗಿ ಈ ಬಾರಿ ಬಹುತೇಕ ಕ್ಷೇತ್ರಗಳಿಗೆ ಆರು ತಿಂಗಳ ಮೊದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಾಧ್ಯತೆಗಳಿದೆ. ಅದಕ್ಕಾಗಿ ಕರ್ನಾಟಕಕ್ಕೆ ಇನ್ನೆರೆಡು ದಿನದಲ್ಲಿ ಕೇಂದ್ರದಿಂದ 12 ಜನರ ತಂಡವೊಂದು ಭೇಟಿ ನೀಡಲಿದ್ದು ಎಲ್ಲಾ ಅಭ್ಯರ್ಥಿಗಳೊಂದಿಗೆ ನೇರವಾಗಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಿದೆ. ಈ ತಂಡ ಮೂರು ದಿನಗಳ ಕಾಲ ಬೆಂಗಳೂರಿನಲ್ಲೇ ಬೀಡು ಬುಟ್ಟು ಪ್ರತಿ ಮಾಹಿತಿಯನ್ನೂ ಕಲೆ ಹಾಕಿ ಹೈಕಮಾಂಡ್ ಗೆ ಅಂತಿಮ ವರದಿ ಸಲ್ಲಿಸುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಬಹುತೇಕರಿಗೆ ಟಿಕೆಟ್ ಪಕ್ಕಾ ಆಗುವ ಸಾಧ್ಯತೆ ಇದೆ. (Karnataka Election)
ಇದನ್ನೂ ಓದಿ : Arecanut import : ಭೂತಾನ್ ನಿಂದ ಅಡಿಕೆ ಆಮದಿಗೆ ನಿರ್ಧಾರ : ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಕೈ ಕೊಟ್ಟ ಬಿಜೆಪಿ
ಹೊಸಬರಿಗೆ ಅವಕಾಶ : ಸುಮಾರು 100 ವಿಧಾನ ಸಭಾ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲು ಬಿಜೆಪಿ ಯೋಚಿಸುತ್ತಿದ್ದು ಹಲವು ಸಂಘ ಪರಿವಾರದ ನಾಯಕರಿಗೆ, ನಿವೃತ್ತ ಅಧಿಕಾರಿಗಳಿಗೆ, ಸಮಾಜ ಸೇವಕರಿಗೆ ಮತ್ತು ಹಿಂದೂ ಹೋರಾಟಗಾರರಿಗೆ ಈ ಬಾರಿ ಅವಕಾಶ ಸಿಗುವ ಸಾಧ್ಯತೆಗಳು ದಟ್ಟವಾಗಿದೆ.
ಕೇಂದ್ರದ ತಂಡ ಭೇಟಿ ಕೊಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರದ ಆಕಾಂಕ್ಷಿಗಳೂ ಆದಿತ್ಯವಾರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
Discussion about this post