ವಿಜಯಪುರ : ಮಹಾಮಾರಿ ಕೊರೋನಾ ಸೋಂಕಿಗೆ ವಿಜಯಪುರದಲ್ಲಿ 2 ವರ್ಷದ ಮಗು ಮೃತಪಟ್ಟಿದೆ. ನಗರದ 2 ವರ್ಷದ ಮಗುವನ್ನು ತೀವ್ರ ಜ್ವರದ ಕಾರಣ ಕೆಲ ದಿನಗಳ ಹಿಂದಷ್ಟೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಳೆದ ವಾರ ಮೃತಪಟ್ಟಿತ್ತು.
ಆಗಸ್ಟ್ 14 ರಂದು ಹೆಣ್ಣು ಮಗುವನ್ನು ಕೊರೋನಾ ಸೋಂಕು ಲಕ್ಷಣ ಹೊಂದಿದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಮಗು ಚಿಕಿತ್ಸೆಗೆ ಸ್ಪಂದಿಸದೆ ಆಗಸ್ಟ್ 24 ರಂದು ಮೃತಪಟ್ಟಿದೆ. ಆದರೆ ಮಗುವಿನ ಕೊರೋನಾ RTPCR ಫಲಿತಾಂಶ ನೆಗೆಟಿವ್ ಬಂದಿದೆ. ಹಾಗಿದ್ದರೂ ನಿಯಮಗಳ ಅನ್ವಯ ಇದನ್ನು ಕೊರೋನಾ ಡೆತ್ ಎಂದು ಜಿಲ್ಲಾಡಳಿತ ಘೋಷಿಸಿದೆ.
ವಿಜಯಪುರದಲ್ಲಿ ಈ ವರೆಗೆ ಸಾಕಷ್ಟು ಮಕ್ಕಳಿಗೆ ಕೊರೋನಾ ಸೋಂಕು ತಗುಲಿದೆ. ಆದರೆ, ಮಗುವೊಂದು ಸೋಂಕಿಗೆ ಮಗು ಬಲಿಯಾಗಿರುವುದು ಇದೇ ಮೊದಲು ಎನ್ನಲಾಗಿದೆ.
Discussion about this post