ಬೆಂಗಳೂರು : ರಾಜ್ಯದ ಹಲವು ಅಕ್ರಮಗಳ ಕುರಿತಂತೆ ನಡೆದ ತನಿಖೆಗಳಿಗೆ ಲೆಕ್ಕವಿಲ್ಲ. ಈ ಕುರಿತಂತೆ ರಚನೆಯಾದ ಸದನ ಸಮಿತಿ ಅವುಗಳು ಕೊಟ್ಟ ವರದಿ ಎನಾಗಿದೆ ಅನ್ನುವುದನ್ನು ಈ ರಾಜ್ಯ ನೋಡಿದೆ. ವಿದ್ಯುತ್ ಖರೀದಿ ಕುರಿತಂತೆ ರಚನೆಯಾದ ಸದನ ಸಮಿತಿಯ ವರದಿಯ ಕಥೆ ಎನಾಗಿದೆ ಅನ್ನುವುದು ಯಾರಿಗೂ ಗೊತ್ತಿಲ್ಲ.
ಈ ನಡುವೆ ಇದೀಗ 40% ಕಮಿಷನ್ ಕುರಿತಂತೆ ಗುತ್ತಿಗೆದಾರರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದ ಕುರಿತಂತೆ ತನಿಖೆ ನಡೆಸಲು ಬೊಮ್ಮಾಯಿ ನೇತೃತ್ವದ ಸರ್ಕಾರ ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಪತ್ರದ ಅಂಶಗಳ ಕುರಿತಂತೆ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ.
ಆದರೆ ಈ ತನಿಖೆಯಿಂದ ಅಸಲಿ ಸತ್ಯ ಹೊರ ಬರುತ್ತದೆ ಅನ್ನುವ ಭರವಸೆ ಖಂಡಿತಾ ಇಲ್ಲ. ಕಾರಣ ಸಿಂಪಲ್, ಎಸಿಬಿ ಅನ್ನುವ ಸಂಸ್ಥೆ ಅನೇಕ ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸಿದೆ. ಹಾಗೇ ದಾಳಿಗೆ ಒಳಗಾದ ಮಂದಿಯೇ ಮಾಧ್ಯಮದ ಮುಂದೆ ಬಂದು ತಮ್ಮ ಮನೆಯಲ್ಲಿ ಸಿಕ್ಕ ಲಕ್ಷ ಲಕ್ಷ ನಗದು, ಚಿನ್ನಾಭರಣಗಳಿಗೆ ಲೆಕ್ಕ ಕೊಡುತ್ತಿದ್ದಾರೆ ಅಂದ್ರೆ ಅವೆರಷ್ಟು ಕೊಬ್ಬಿರಬೇಕು. ಹಾಗೇ ಅವರು ಕೊಬ್ಬಿರುವುದಕ್ಕೆ ಕಾಸು ಎಲ್ಲಿಂದ ಬಂತು.
ಇನ್ನು ಹೀಗೆ ಎಸಿಬಿ ದಾಳಿಗೆ ಒಳಗಾದ ಅಧಿಕಾರಿಗಳು ಮನೆಗೆ ಹೋಗಬೇಕು ತಾನೇ, ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಾರೆ, ಅಂದ್ರೆ ಅವರು ಅದೆಷ್ಟು ಬಲಾಢ್ಯರಾಗಿರಬೇಕು. ಈ ಹಿಂದೆ ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿಗಳ ಪೈಕಿ ಅದೆಷ್ಟು ಮಂದಿಗೆ ಶಿಕ್ಷೆಯಾಗಿದೆ. ಹೀಗೆ ಪರ್ಸೆಂಟೇಜ್ ವ್ಯವಹಾರದಿಂದ ಹಣ ಪಡೆದ ಕರ್ಮಕ್ಕೆ ತಾನೇ ಎಸಿಬಿ ದಾಳಿಯಾಗಿರುವುದು.
ಇನ್ನು ಪರ್ಸೆಂಟೇಜ್ ವಿಚಾರಕ್ಕೆ ಬರುವುದಾದ್ರೆ ಅದೇನು ಬಿಜೆಪಿ ಸರ್ಕಾರಕ್ಕೆ ಗೊತ್ತಿಲ್ಲದ ವಿಚಾರವಲ್ಲ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರವನ್ನು ಪರ್ಸೆಂಟೇಜ್ ಸರ್ಕಾರ ಎಂದು ಬಿಜೆಪಿ ನಾಯಕರೇ ಆರೋಪಿಸಿದ್ದರು. ಪರ್ಸೆಂಟೇಜ್ ವ್ಯವಹಾರದ ಬಗ್ಗೆ ಮಾಹಿತಿ ಇಲ್ಲದೆ ಅವರು ಟೀಕಿಸಲು ಸಾಧ್ಯವೇ. ಹಾಗೇ ನೋಡಿದರೆ ಸಿದ್ದರಾಮಯ್ಯ ಅವರಿಗಿಂತ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಪರ್ಸೆಂಟೇಜ್ ಪ್ರಮಾಣ ಏರಿದೆ ಅಷ್ಟೇ. ಅವತ್ತು ಸಿದ್ದರಾಮಯ್ಯ ಸರ್ಕಾರವನ್ನು ಪರ್ಸೆಂಟೇಜ್ ಸರ್ಕಾರ ಎಂದು ಆರೋಪಿಸಿದವರಿಂದ ಮಾಹಿತಿ ಸಂಗ್ರಹಿಸಿದ್ರೆ ಎಲ್ಲಾ ಸತ್ಯ ಹೊರಬೀಳುತ್ತದೆ.
Discussion about this post