ಇಂದು ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದು, ಲಾಕ್ ಡೌನ್ ಬದಲು ಕಠಿಣ ಕ್ರಮಗಳನ್ನು ಮೊದಲ ಹಂತದಲ್ಲಿ ಪ್ರಯೋಗಿಸುವ ಸಾಧ್ಯಗಳಿದೆ. ಜನ ಇದಕ್ಕೆ ಕ್ಯಾರೆ ಅನ್ನದಿದ್ರೆ ಲಾಕ್ ಡೌನ್ ಗ್ಯಾರಂಟಿ
ಬೆಂಗಳೂರು : ದೇಶದಲ್ಲಿ ಪ್ರಾರಂಭವಾಗಿರುವ ಕೊರೋನಾ ಸೋಂಕಿನ ಮೂರನೇ ಅಲೆ, ರಾಜ್ಯದಲ್ಲೂ ಭೀತಿ ಹುಟ್ಟಿಸಿದೆ. ಈಗಾಗಲೇ ಕರುನಾಡಿನಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ಏರಲಾರಂಭಿಸಿದ್ದು ಸಹಜವಾಗಿಯೇ ಒಮಿಕ್ರೋನ್ ಅಬ್ಬರವೂ ಜೋರಾಗಿದೆ.
ವಾರದ ಹಿಂದೆ 300 ರಿಂದ 400 ಹೊಸ ಪ್ರಕರಣಗಳು ಪತೀ ನಿತ್ಯ ಪತ್ತೆಯಾಗುತ್ತಿತ್ತು. ಆದರೆ ಈಗ ಈ ಸಂಖ್ಯೆ 1200ರ ಗಡಿ ದಾಟಿದೆ. ಇದೇ ವೇಗ ಮುಂದುವರಿದರೆ ಜನವರಿ 15ರ ಹೊತ್ತಿಗೆ ನಿತ್ಯ 5 ಸಾವಿರ ಪ್ರಕರಣಗಳು ಪತ್ತೆಯಾಗಲಿದೆ. ಜನವರಿಗೆ ಅಂತ್ಯಕ್ಕೆ ಈ ಸಂಖ್ಯೆ 20 ಸಾವಿರ ತಲುಪಿದರೂ ಅಚ್ಚರಿ ಇಲ್ಲ. ಒಂದು ವೇಳೆ ಈ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರಿದರೆ ಆರೋಗ್ಯ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ.
ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೊರೋನಾ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಸಭೆ ಕರೆದಿದ್ದು, ಸೋಂಕು ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚೆ ನಡೆಸಲಿದ್ದಾರೆ.
ಈಗಾಗಲೇ ತಜ್ಞರ ಸಮಿತಿ ವರದಿಯೊಂದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಯಲ್ಲೋ, ಆರೆಂಜ್, ರೆಡ್ ಎಂದು ಮೂರು ವಲಯಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಹೇಳಿದೆ. ಪಾಸಿಟಿವಿಟಿ ಶೇ 1 ರಷ್ಟು ಇರುವ ಪ್ರದೇಶವನ್ನು ಹಳದಿ ವಲಯ ಎಂದು ಗುರುತಿಸಿ, ಶೇ50ರ ನಿಯಮವನ್ನು ಜಾರಿಗೆ ತರಬೇಕು, ಇದರಲ್ಲಿ ಚಿತ್ರಮಂದಿರ, ಶಾಲೆ, ರೆಸ್ಟೋರೆಂಟ್ ಗಳು ಸೇರಿದೆ. ಜೊತೆಗೆ ಮಾಲ್, ಮಳಿಗೆಗಳಿಗೆ ಸಮಯದ ಮಿತಿ ಅಳವಡಿಸಿಕೊಳ್ಳಿ ಅಂದಿದೆ.
ಪಾಸಿಟಿವಿಟಿ ದರ ಶೇ 2ರಷ್ಟಿದ್ರೆ, ಕಿತ್ತಳೆ ವಲಯವೆಂದು ಗುರುತಿಸಿ, ಶಾಲಾ ಕಾಲೇಜುಗಳನ್ನು ಮುಚ್ಚಿ ಆನ್ ಲೈನ್ ತರಗತಿ ಪ್ರಾರಂಭಿಸಬೇಕು, ಸಿನಿಮಾ, ಮಾಲ್ ಸೇರಿ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಮತ್ತು ಜಿಮ್, ಬ್ಯೂಟಿ ಪಾರ್ಲರ್, ಈಜುಕೊಳ, ಪಾರ್ಕ್ ಗಳನ್ನೂ ಬಂದ್ ಮಾಡುವಂತೆ ಹೇಳಿದೆ.
ಪಾಸಿಟಿವಿಟಿ ದರ ಶೇ 3ರಷ್ಟು ಇದ್ರೆ ಅದನ್ನು ರೆಡ್ ಆಲರ್ಟ್ ವಲಯ ಎಂದು ಗುರುತಿಸಿ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಸಲಹೆ ನೀಡಲಾಗಿದೆ.
ಈ ರೀತಿ ಕಠಿಣ ಕ್ರಮಗಳನ್ನು ಕೈಗೊಂಡರೆ ಉತ್ತುಂಗಕ್ಕೆ ಏರಬೇಕಾದ ಸೋಂಕಿತರ ಸಂಖ್ಯೆನ್ನು 20 ಸಾವಿರಕ್ಕೆ ತಗ್ಗಿಸಬಹುದಾಗಿದೆ. ಹೀಗಾಗಿ ಫೆಬ್ರವರಿ ಕೊನೆಯ ವಾರದಲ್ಲಿ ಕೊರೋನಾ ಉಚ್ಚ್ರಾಯ ಸ್ಥಿತಿ ತಲುಪಿದಾಗ ದೊಡ್ಡ ಸಮಸ್ಯೆಯಾಗದು ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿದೆ.
ಕೊರೋನಾ ಏರಿಕೆ : ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ : ಮತ್ತೆ ಆನ್ ಲೈನ್ ಕಾಟ
ನವದೆಹಲಿ : ದೇಶದ ವಿವಿಧ ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಲಾರಂಭಿಸಿದೆ. ಹಲವು ರಾಜ್ಯಗಳ ರಾಜಧಾನಿಗಳಲ್ಲೇ ಕೊರೋನಾ ಸೋಂಕು ಅಟ್ಟಹಾಸಗೈಯುತ್ತಿದೆ. ಹೀಗಾಗಿ ಕಠಿಣ ಕ್ರಮಗಳಿಗೆ ಮುಂದಾಗಿರುವ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ.
ಮಕ್ಕಳನ್ನು ಕೊರೋನಾ ಸೋಂಕಿನಿಂದ ರಕ್ಷಿಸುವ ನಿಟ್ಟಿನಲ್ಲಿ ಗೋವಾ ರಾಜ್ಯ ಸರ್ಕಾರ ಜನವರಿ 26ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಜನವರಿಗೆ 31ರವರೆಗೆ ಮುಂಬೈ ನಲ್ಲಿ ಪ್ರಾಥಮಿಕ ಶಾಲೆ ಹಾಗೂ ಹೈಸ್ಕೂಲ್ ಗಳಿಗೆ ರಜೆ ನೀಡಿದೆ. ಗೋವಾದಲ್ಲಿ 10 ರಿಂದ 12 ತರಗತಿವರೆಗಿನ ವಿದ್ಯಾರ್ಥಿಗಳು ಲಸಿಕೆ ಪಡೆಯಲು ಮಾತ್ರ ಶಾಲೆಗೆ ಆಗಮಿಸಲು ಅವಕಾಶ ನೀಡಲಾಗಿದೆ.
ಮತ್ತೊಂದು ತೆಲಂಗಾಣದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜನವರಿ 8 ರಿಂದ 16ರವರೆಗೆ ರಜೆ ಘೋಷಿಸಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಆದೇಶಿಸಿದ್ದಾರೆ.
Discussion about this post