ಬೆಂಗಳೂರು : ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಮಾನ ಮರ್ಯಾದೆ ಎಲ್ಲವನ್ನೂ ಹರಾಜಿಗಿಟ್ಟು ಜನರ ರಕ್ತ ಹೀರುತ್ತಿದ್ದಾರೆ. ಸರ್ಕಾರಿ ಕೆಲಸ ಅಂದ್ರೆ ದೇವರ ಕೆಲಸ ಅನ್ನುವುದನ್ನು ಬಿಟ್ಟು ಲೂಟಿಕೋರರಾಗಿ ಹೋಗಿದ್ದಾರೆ.
ಈ ನಡುವೆ ಶುಕ್ರವಾರ 21 ಅಧಿಕಾರಿಗಳ ಕೋಟೆಗೆ ಎಸಿಬಿ ದಾಳಿ ನಡೆಸಿದ್ದು, 251 ಎಕರೆ ಜಮೀನು, 13.5 ಕೆಜಿ ಚಿನ್ನ ಮತ್ತು 1.34 ಕೋಟಿ ನಗದು ಜಪ್ತಿ ಮಾಡಿಕೊಂಡಿದೆ. ಬಿಡಿಎ ಗಾರ್ಡನರ್ ಒಬ್ಬ ಅಕ್ರಮ ಮಾರ್ಗದಲ್ಲಿ 3 ಸೈಟ್ ಮಾಡಿಕೊಂಡಿದ್ದ ಅಂದ ಮೇಲೆ, ಅಧಿಕಾರಿಗಳು ಅದೆಷ್ಟು ಮಾಡಿರಬಹುದು.
ಶುಕ್ರವಾರ ಬೆಂಗಳೂರು, ಬೆಳಗಾವಿ, ಬಾಗಲಕೋಟೆ, ಕಾರವಾರ, ಕೋಲಾರ, ಕೊಪ್ಪಳ, ಕೊಡಗು, ಹಾಸನ, ಬೀದರ್, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಉಡುಪಿ, ವಿಜಯನಗರ ಮತ್ತು ಗದಗದಲ್ಲಿ ಈ ದಾಳಿ ನಡೆದಿದೆ. 80 ಕಡೆ ನಡೆದ ದಾಳಿಯಲ್ಲಿ 555 ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಇನ್ನು ಕೊಪ್ಪಳದ ಪೊಲೀಸ್ ಇನ್ಸ್ ಪೆಕ್ಟರ್ ಉದಯರವಿ, 79 ಎಕರೆ ಜಮೀನು ಹೊಂದಿರುವುದು ಪತ್ತೆಯಾಗಿದೆ. ಭಾಗಲಕೋಟೆ ಆರ್ ಟಿ ಓ ಅಧಿಕಾರಿ ಯಲ್ಲಪ್ಪ ಪಡಸಾಲಿ ಮನೆಯಲ್ಲೇ 30 ಲೀಟರ್ ಮದ್ಯ ಇಟ್ಟುಕೊಂಡಿದ್ದ. ಬಿಡಿಎ ಗಾರ್ಡನರ್ ಶಿವಲಿಂಗಯ್ಯ ಬೆಂಗಳೂರಿನಲ್ಲಿ 3 ನಿವೇಶನ, ಹಾಗೂ 2 ಮನೆಗಳನ್ನು ಮತ್ತು ಚನ್ನಪಟ್ಟಣದಲ್ಲಿ ಕೃಷಿ ಭೂಮಿಯನ್ನು ಹೊಂದಿರುವುದು ಗೊತ್ತಾಗಿದೆ.
ದಾಳಿಗೆ ಒಳಗಾದ ಅಧಿಕಾರಿಗಳ ವಿವರ ಹೀಗಿದೆ…
- ಜಿ. ಮಂಜುನಾಥ್ ,ಬೆಂಗಳೂರು PWD (Rtd )
- ಡಾ.ಕೆ. ಜನಾರ್ಧನ್ , ಬೆಂಗಳೂರು ರಿಜಿಸ್ಟಾರ್ (Rtd )
- ಶಿವಲಿಂಗಯ್ಯ, ಗಾರ್ಡನರ್ ಬೆಂಗಳೂರು , ಬಿಡಿಎ
- ವಿ. ಮಧುಸೂಧನ್, ಐಜಿಆರ್ ಆಯುಕ್ತ ಕಚೇರಿ, ಬೆಂಗಳೂರು
- ಡಿ.ಸಿದ್ದಪ್ಪ, ಉಪ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್, ಬೆಂಗಳೂರು
- ಹರೀಶ್, ಜೆಇ, ಸಣ್ಣ ನೀರಾವರಿ ಇಲಾಖೆ ಉಡುಪಿ
- ಬಿ.ಜಿ. ತಿಮ್ಮಯ್ಯ , ಎಸ್ಡಿಎ, ಅಜ್ಜಂಪುರ ಪಟ್ಟಣ ಪಂಚಾಯತಿ
- ಬಿಎಸ್ ಶ್ರೀಧರ್, ಜಿಲ್ಲಾ ನೋಂದಣಾಧಿಕಾರಿ, ಉತ್ತರಕನ್ನಡ
- ರಾಜೀವ್ ಪಿ ನಾಯಕ್, ಎಇ, ಪ್ರಧಾನಮಂತ್ರಿ ಗ್ರಾಮ ಸಡಕ್ ವಿಭಾಗ, ಉತ್ತರಕನ್ನಡ
- ಎ. ಮೋಹನ್ ಕುಮಾರ್, ನೀರಾವರಿ ಇಲಾಖೆ ಎಇ, ಚಿಕ್ಕಬಳ್ಳಾಪುರ
- ತಿಪ್ಪಣ್ಣಸಿರಸಗಿ, ಮಹಿಳಾ ಮಕ್ಕಳ ಅಭಿವೃದ್ಧಿ ನಿಗಮ, ಬೀದರ್
- ಮೃತ್ಯಂಜಯ ತಿರಾಣಿ, ಹಿರಿಯ ಸಹಾಯಕ, ಬೀದರ್ ಪಶು ವಿವಿ
- ಉದಯ ರವಿ, ಪೊಲೀಸ್ ಇನ್ಸ್ ಪೆಕ್ಟರ್ ಕೊಪ್ಪಳ
- ಪರಮೇಶ್ವರ, ಸಣ್ಣ ನೀರಾವರಿ ಎಇ ಹೂವಿನಹಡಗಲಿ
- ಎಚ್. ಇ. ರಾಮಕೃಷ್ಣ ,ಎಇ ಸಣ್ಣ ನೀರಾವರಿ ಇಲಾಖೆ ಹಾಸನ
- ಓಬ್ಬಯ್ಯ , ಎಇ, ಜಿಪಂ ವಿರಾಜಪೇಟೆ ಕೊಡಗು
- ಚಂದ್ರಪ್ಪ ಓಲೇಕಾರ್ , ತುಂಗಾ ಮೇಲ್ದಂಡೆ ಎಇ ಹಾವೇರಿ
- ಭೀಮರಾವ್ ಪವಾರ, ಇಂಜಿನಿಯರ್, ಬೆಳಗಾವಿ
- ಪ್ರದೀಪ ಶಿವಪ್ಪ ಆಲೂರು , ಕಾರ್ಯದರ್ಶಿ ಅಸುಂಡಿ ಗ್ರಾಮ ಪಂಚಾಯತ್
- ಶಂಕರಲಿಂಗ ನಾಗಪ್ಪ ಗೋಗಿ, ಬಾಗಲಕೋಟೆ ನಿರ್ಮಿತಿ ಕೇಂದ್ರ
- ಯಲ್ಲಪ್ಪ ಪಡಸಾಲಿ , RTO ಬಾಗಲಕೋಟೆ
Discussion about this post