ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸಿದ್ದರಾಮಯ್ಯನಂತ ನಾಯಕರು ಅದನ್ನು ವಾಂಗಿ ಬಾತ್ ಎಂದೆಲ್ಲಾ ಕರೆದು ಎಡವಟ್ಟು ಮಾಡಿಕೊಂಡಿದ್ದರು.
ಆದರೆ ಇದೀಗ ನರೇಂದ್ರ ಮೋದಿಯವರ 73ನೇ ಮನ್ ಕಿ ಬಾತ್ ಕಾರ್ಯಕ್ರಮ ಸಿಕ್ಕಾಪಟ್ಟೆ ಸದ್ದು ಮಾಡಿದೆ. ದೇಶದ ನಾರಿ ಶಕ್ತಿಯ ಬಗ್ಗೆ ಅವರಾಡಿದ ಮಾತು ಸೆಲೆಬ್ರೆಟಿಗಳ ಗಮನ ಸೆಳೆದಿದೆ.
ನರೇಂದ್ರ ಮೋದಿ ಅಂದ್ರೆ ಕೆಂಡ ಕಾರುತ್ತಿದ್ದ ಸೆಲೆಬ್ರೆಟಿಗಳು, ಮೋದಿ ಅಂದರೆ ಮಾರುದ್ದ ನಿಲ್ಲುತ್ತಿದ್ದ ಸೆಲೆಬ್ರೆಟಿಗಳು ಮೋದಿಯವರ ಈ ಮನ್ ಕಿ ಬಾತ್ ಕಾರ್ಯಕ್ರಮವನ್ನು ಸಿಕ್ಕಾಪಟ್ಟೆ ಮೆಚ್ಚಿ ಕೊಂಡಾಡಿದ್ದಾರೆ.
ಜೆಎನ್ಯು ಹುಡುಗರ ಜೊತೆ ಗುರುತಿಸಿಕೊಂಡಿದ್ದ ದೀಪಿಕಾ ಪಡುಕೋಟೆಯ ಬೆನ್ನಲ್ಲೇ ಇದೀಗ ಕರೀನಾ ಕಪೂರ್ ಕೂಡಾ ಮೋದಿಯನರ ಮಾತಿಗೆ ತಲೆ ತೂಗಿದ್ದಾರೆ.
ಇದನ್ನೂ ಓದಿ : ಮೋದಿಯ ಮನದ ಮಾತಿಗೆ ಮನಸೋತ ದೀಪಿಕಾ ಪಡುಕೋಣೆ
ಈ ಸಂಬಂಧ ತಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು ಬರೆದುಕೊಂಡಿರುವ ಅವರು From flying non-stop commercial flights to taking part in Republic Day parades, women’s participation is increasing manifold. Desh ki Beti today is fearless, courageous and an equal participant in nation-building activities,” ಅಂದಿದ್ದಾರೆ.
Discussion about this post