ಕೆಲವರಿಗೆ ಸೆಲೆಬ್ರೆಟಿ ಅನ್ನೋ ಪಟ್ಟ ಸಿಕ್ಕಿದ್ರೆ ಅದನ್ನು ಬೇಗೆ ನಿಭಾಯಿಸಬೇಕು ಅಂತಾನೇ ಗೊತ್ತಿರುವುದಿಲ್ಲ. ಅದರಲ್ಲೂ ಬಿಗ್ ಬಾಸ್ ಮನೆಗೆ ಹೋಗಿ ಬಂದ ಕೆಲ ಮಂದಿಯ ಆಟಾಟೋಪ ಅಬ್ಬಬ್ಬ.
ಹೀಗೆ ಇದೇ ಪರಿಸ್ಥಿತಿ ಇದೀಗ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್ ಅವರಿಗೆ ಬಂದಿದೆ. ಮಂಗಳವಾರ ರಾತ್ರಿ ನೈಟ್ ಕರ್ಫ್ಯೂ ಇದೆ ಮನೆಗೆ ಹೋಗಿ ಎಂದು ಬುದ್ದಿ ಹೇಳಲು ಬಂದ ಪೊಲೀಸರ ಮೇಲೆಯೇ ಎಗರಾಡಿದ ದಿವ್ಯಾ ಸುರೇಶ್, ಮಾಧ್ಯಮದಳ ಕ್ಯಾಮಾರ ಕಿತ್ತುಕೊಳ್ಳಲು ಯತ್ನಿಸಿದ ಘಟನೆಯೂ ನಡೆದಿದೆ.
ಮಂಗಳವಾರ ರಾತ್ರಿ 10 ಗಂಟೆಯಾಗುತ್ತಿದ್ದಂತೆ ರಸ್ತೆಗಿಳಿದ ಪೊಲೀಸರು ನಿಯಮದನ್ವಯ ಅಂಗಡಿಗಳನ್ನು ಮುಚ್ಚಿಸಲು ಮುಂದಾಗಿದ್ದಾರೆ. ಜೊತೆಗೆ ಬಾರ್ ಪಬ್ ಗಳ ಕಡೆಗೂ ತೆರಳಿ ಬಾಗಿಲು ಹಾಕುವಂತೆ ಸೂಚಿಸಿದ್ದಾರೆ. ಈ ವೇಳೆ ಸುದ್ದಿ ಮಾಡುವ ಸಲುವಾಗಿ ಸ್ಥಳಕ್ಕೆ ಮಾಧ್ಯಮಗಳು ಕೂಡಾ ತೆರಳಿತ್ತು.
ಈ ನಡುವೆ ಎಂಜಿ ರೋಡ್ ನಲ್ಲಿ ಪೊಲೀಸರ ಕಾರ್ಯಾಚರಣೆಯನ್ನು ಮಾಧ್ಯಮಗಳು ಚಿತ್ರೀಕರಿಸುತ್ತಿದ್ದ ಸಂದರ್ಭದಲ್ಲಿ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್ ತಮ್ಮ ಗೆಳೆಯರೊಂದಿಗೆ ಪಬ್ ನಿಂದ ಹೊರ ಬಂದಿದ್ದಾರೆ. ಬಂದವರು ಸೈಲೆಂಟ್ ಆಗಿ ಗಾಡಿ ಹತ್ತಿ ಹೋಗಿರುತ್ತಿದ್ರೆ ಸುದ್ದಿಯಾಗುತ್ತಿರಲಿಲ್ಲ.
ಬದಲಾಗಿ ಮಾಧ್ಯಮಗಳ ಕ್ಯಾಮಾರ ಕಂಡು ನನ್ನ ಯಾಕೆ ಶೂಟ್ ಮಾಡ್ತೀರ ಎಂದು ಕ್ಯಾತೆ ತೆಗೆದಿದ್ದಾರೆ.ಅಷ್ಟು ಹೊತ್ತಿನ ತನಕ ಟಿವಿ ವಾಹಿನಿಯ ಕ್ಯಾಮಾರಮನ್ ಗಳಿಗೂ ಇವರು ದಿವ್ಯಾ ಸುರೇಶ್ ಅಂತಾ ಗೊತ್ತಿರಲಿಲ್ಲ. ಯಾವಾಗ ದನಿ ಏರಿಸಿದ್ರೋ, ಇದು ದಿವ್ಯಾ ಸುರೇಶ್ ಅಂತಾ ಗೊತ್ತಾಯ್ತು. ಹೀಗಾಗಿ ಅಲ್ಲಿದ್ದ ಎಲ್ಲಾ ಕ್ಯಾಮಾರಗಳು ದಿವ್ಯಾ ಅವರನ್ನು ಫೋಕಸ್ ಮಾಡಿದೆ.
ಈ ವೇಳೆ ನೈಟ್ ಕರ್ಫ್ಯೂ ಇದೆ ಮನೆಗೆ ಹೋಗಿ ಎಂದು ಪೊಲೀಸರು ಹೇಳಿದಾಗ ಕಿರಿಕ್ ಮಾಡಿದ ದಿವ್ಯಾ ಸುರೇಶ್ ಮಾಧ್ಯಮಗಳ ಕ್ಯಾಮಾರ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಅವರ ಸ್ನೇಹಿತನೊಬ್ಬ ಸಮಾಧಾನ ಮಾಡಿದ್ದಾನೆ. ಬಳಿಕ ಆಟೋ ಹತ್ತಿ ಎಸ್ಕೇಪ್ ಆಗಿದ್ದಾರೆ.
Discussion about this post