ಸಾಮಾನ್ಯವಾಗಿ ಬಿಗ್ ಬಾಸ್ ಮನೆಗೆ ಆಯಾ ಭಾಷೆಯ ಸೆಲೆಬ್ರೆಟಿಗಳನ್ನು ಕರೆಸುವುದು ವಾಡಿಕೆ. ಆದರೆ ಕೆಲವೊಮ್ಮೆ ಪರಭಾಷೆಯ ಮಂದಿಯೂ ಆಯಾ ಭಾಷೆಯಲ್ಲಿ ಗುರುತಿಸಿಕೊಂಡ ಕಾರಣದಿಂದ ಪಕ್ಕದ್ಮನೆ ಅನ್ನುವಂತೆ ಮಹಾಮನೆ ಪ್ರವೇಶಿಸುತ್ತಾರೆ.
ನಿಮ್ಮ ಮನೆಯ ಗಾರ್ಡನ್ ಹೇಗಿದ್ದರೆ ಚೆಂದ ಗೊತ್ತಾ…?
ಹಾಗೇ ಇದೀಗ ಅಪ್ಪಟ ಕನ್ನಡದ ನಟಿ ತಮಿಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆ ನಟಿ ಬೇರಾರೂ ಅಲ್ಲ, ಶೆರೀನ್. ಈ ಶೆರೀನ್ ಈ ಹಿಂದೆ ದರ್ಶನ್ ಅಭಿನಯದ “ಧ್ರುವ ‘ ಚಿತ್ರದಲ್ಲಿ ದರ್ಶನ್ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ದರ್ಶನ್ ಅವರ 25 ನೇ ಚಿತ್ರ “ಭೂಪತಿ’ಯಲ್ಲೂ ನಾಯಕಿಯಾಗಿ ನಟಿಸಿದ್ದರು.
ಮತ್ತೆ ಬಂಪರ್ ಆಫರ್ ಘೋಷಿಸಿದ AMAZON
ಆ ಬಳಿಕ ಅವರು “ಸಿಹಿಗಾಳಿ’ ಮತ್ತು “ಎಕೆ 57′ ಚಿತ್ರಗಳಲ್ಲೂ ನಟಿಸಿದ್ದರು. ಆ ಬಳಿಕ ಕನ್ನಡದ ತೆರೆಯಲ್ಲಿ ಶೆರೀನ್ ಕಾಣಿಸಿಕೊಂಡಿರಲಿಲ್ಲ.
ಹಾಗಂತ, ಅವರಿಗೆ ಅವಕಾಶಗಳು ಇರಲಿಲ್ಲವೆಂದಲ್ಲ, ಅಷ್ಟು ಹೊತ್ತಿಗೆ ತಮಿಳು ಕೈ ಬೀಸಿ ಕರೆಯಿತು. ಅಲ್ಲಿ ಅಭಿನಯಿಸಿದ ಸಿನಿಮಾಗಳು ಅವರ ಕೈ ತುಂಬಿತು. ಜೊತೆಗೆ ಮಲಯಾಳಂ ಚಿತ್ರಗಳಲ್ಲೂ ನಟಿಸುವ ಅವಕಾಶ ಹುಡುಕಿ ಬಂತು. ಈ ಕಾರಣದಿಂದ ಅವರು ಇತ್ತ ತಿರುಗಿ ನೋಡಲಿಲ್ಲ.
paytm mall ಗೆ ನೀವು ಭೇಟಿ ಕೊಟ್ಟಿದ್ದೀರಾ
ಈಗ ಅವರು ತಮಿಳಿನ ಮೂರನೇ ಆವೃತ್ತಿಯ ಬಿಗ್ಬಾಸ್ ರಿಯಾಲಿಟಿ ಶೋಗೂ ಎಂಟ್ರಿಕೊಟ್ಟಿದ್ದಾರೆ.
ಆಲಿ ಎಕ್ಸ್ ಪ್ರೆಸ್ ಶಾಪಿಂಗ್ ಖುಷಿಯೇ ಬೇರೆ ಅಲ್ವಾ…?
ಬೆಂಗಳೂರಿನ ಹುಡುಗಿಯಾಗಿರುವ ನಟಿ ಶೆರೀನ್, ಕನ್ನಡದಲ್ಲಿ ಬೆರಳೆಣಿಕೆ ಚಿತ್ರಗಳಲ್ಲಿ ನಟಿಸಿದರೂ ತಕ್ಕಮಟ್ಟಿಗೆ ಗುರುತಿಸಿಕೊಂಡು, ತಮಿಳು, ತೆಲುಗು ಚಿತ್ರರಂಗದತ್ತ ಮುಖ ಮಾಡಿದರು. ಈಗ ಶೆರೀನ್ ಇತ್ತೀಚೆಗಷ್ಟೇ ಶುರುವಾಗಿರುವ ತಮಿಳು ಬಿಗ್ಬಾಸ್ ಮನೆ ಪ್ರವೇಶಿಸಿದ್ದಾರೆ ಎಂಬುದೇ ವಿಶೇಷ.
Discussion about this post