2023ರ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಅನ್ನುವ ಮೂಲಕ ಮತ್ತೆ ತಾವು ಸಿಎಂ ಆಗೋದು ಖಚಿತ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ಅವರು ಜೆಡಿಎಸ್ ಪಕ್ಷವನ್ನು ಅಷ್ಟು ಸುಲಭವಾಗಿ ನಾಡಿನಿಂದ ಮರೆ ಮಾಡಲು ಸಾಧ್ಯವಿಲ್ಲ. ನಮ್ಮ ಹೋರಾಟ ಪ್ರಾಮಾಣಿಕವಾಗಿದೆ. ಜೆಡಿಎಸ್ ಹೋರಾಟ ಮಾಡುತ್ತಿರುವುದು ಅಧಿಕಾರಕ್ಕಾಗಿ ಅಲ್ಲ. ಜನರ ಗೌರವಯುತ ಬದುಕು ಹಾಗೂ ನಾಡಿನ ಸಮಸ್ಯೆ ಬಗೆ ಹರಿಸಲು ನಮ್ಮ ಹೋರಾಟ ನಡೆದಿದೆ. ಹೀಗಾಗಿಯೇ 2023ರಲ್ಲಿ ಜನ ನಮ್ಮನ್ನು ಆಶೀರ್ವದಿಸಲಿದ್ದಾರೆ ಅಂದರು.
ಕೊರೋನಾ ಕಾರಣದಿಂದ ನಮ್ಮ ರಾಜಕೀಯ ಹೋರಾಟಕ್ಕೆ ತಡೆ ಹಾಕಿದ್ದೇವೆ. ಸಂಕಷ್ಟ ಸಂದರ್ಭದಲ್ಲಿ ರಾಜಕೀಯ ಮಾಡಬಾರದೆಂದು ಮೌನವಾಗಿದ್ದೇವೆ ಎಂದು ಎಚ್.ಡಿ.ಕೆ ಹೇಳಿದ್ದಾರೆ.
ಇದೇ ವೇಳೆ ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ವಿಶ್ವನಾಥ್ ರಕೊಟ್ಟಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ.ವಿಶ್ವನಾಥ್ ಮಗ ಜಿಲ್ಲಾ ಪಂಚಾಯತ್ ಸದಸ್ಯನಲ್ವ, ವಿಶ್ವನಾಥ್ ಮಗ ಡಿಸಿಸಿ ನಿರ್ದೇಶಕನಲ್ವಾ, ಅದು ಕುಟುಂಬ ರಾಜಕಾರಣ ಅಲ್ವಾ ಎಂದು ಪ್ರಶ್ನಿಸಿದರು.
ವಿಶ್ವನಾಥ್ ಅವರಿಗೆ ಬೇಕಾಗಿರುವುದು ದುಡ್ಡು ಹಾಗೂ ಅಧಿಕಾರ ಅದು ಸಿಕ್ಕಿಲ್ಲ ಅಂದ್ರೆ ಎಲ್ಲರನ್ನೂ ಬೈಕೊಂಡು ಓಡಾಡುತ್ತಿರುತ್ತಾರೆ. ಈ ವಿಶ್ವನಾಥ್ ಜಾಯಾಮಾನ ಎಂತಹುದು ಅಂದ್ರೆ, ನರಿಗೆ ದ್ರಾಕ್ಷಿ ಎಟುಕದೇ ಹೋದ್ರೆ ಹುಳಿ ಅನ್ನೋದಿಲ್ವ ಹಾಗೇ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.
Discussion about this post