ನವದೆಹಲಿ : ನಮಗೆಲ್ಲಾ ಹೋಲಿಸಿದ್ರೆ ಜಪಾನಿಗರು ಕೆಲಸದ ವಿಚಾರದಲ್ಲಿ ಒಂದಿಷ್ಟು ಕಟ್ಟು ನಿಟ್ಟು.
ಕೆಲಸದ ವಿಚಾರದಲ್ಲಿ ಜಪಾನಿಗರು ನಮ್ಮಷ್ಟು ಸೋಮಾರಿಗಳಲ್ಲ. ಇದಕ್ಕೆ ಅಲ್ಲಿನ ಸರ್ಕಾರಿ ಉದ್ಯೋಗಿಗಳು ಕೂಡಾ ಹೊರತಲ್ಲ.
ಒಂದು ವೇಳೆ ಅಲ್ಲಿ ನಿಗದಿತ ಸಮಯಕ್ಕಿಂತ ಕಡಿಮೆ ಸಮಯ ಕೆಲಸ ಮಾಡಿದ್ರೆ ಸಂಬಳಕ್ಕೆ ಕತ್ತರಿ ಬೀಳುತ್ತದೆ. ಆ ನಿಯಮ ನಮ್ಮಲ್ಲೂ ಇದೆಯಲ್ವ ಅಂದ್ರೆ ಹೌದು.
ಆದರೆ ಜಪಾನ್ ಸರ್ಕಾರಿ ಕಚೇರಿಯಲ್ಲಿ 2 ನಿಮಿಷಕ್ಕಿಂತ ಮೊದಲು ಕಚೇರಿ ತೊರೆದರೆ ಸಂಬಳಕ್ಕೆ ಕತ್ತರಿ ಹಾಕಲಾಗುತ್ತದೆ.
2019ರ ಮೇ ತಿಂಗಳಿನಿಂದ 2021ರ ಜನವರಿ ಅವಧಿಯಲ್ಲಿ 2 ನಿಮಿಷ ಬೇಗ ಕಚೇರಿ ತೊರೆದಿದ್ದ ಶಿಕ್ಷಣ ಇಲಾಖೆಯ 7 ಮಂದಿ ಸಿಬ್ಬಂದಿಗೆ ಸಂಬಳ ಕಡಿತ ಮಾಡಿ ಶಿಕ್ಷೆ ವಿಧಿಸಲಾಗಿದೆ.
ಅಂದ ಹಾಗೇ ಈ ಏಳು ಮಂದಿ 316 ಸಲ ಎರಡು ನಿಮಿಷ ಬೇಗ ಕಚೇರಿ ತೊರೆದಿದ್ದಾರೆ.
2019ರ ಮೇ ತಿಂಗಳಿನಿಂದ 2021ರ ಜನವರಿ ಅವಧಿಯಲ್ಲಿ 2 ನಿಮಿಷ ಬೇಗ
ಈ ಅವಧಿಯಲ್ಲಿ ಸರಿ ಸುಮಾರು 11 ಗಂಟೆಯಷ್ಟು ಮಾನವ ಸಂಪನ್ಮೂಲ ವ್ಯರ್ಥವಾಗಿದೆ ಅನ್ನುವುದು ಇಲಾಖೆಯ ವಾದ.
ಜಪಾನ್ ಮಂದಿಯೇನಾದರೂ ನಮ್ಮ ಸರ್ಕಾರಿ ಕಚೇರಿ ವ್ಯವಸ್ಥೆ ನೋಡಿದರೆ ಮೂರ್ಛೆ ಬೀಳೋದು ಗ್ಯಾರಂಟಿ.
ನಮ್ಮಲ್ಲಿ 10 ಗಂಟೆಗೆ ಸರ್ಕಾರಿ ಕಚೇರಿಗೆ ಬರಬೇಕಾದ ಸಿಬ್ಬಂದಿ ಬರುವಾಗ ಮಧ್ಯಾಹ್ನವಾಗಿರುತ್ತದೆ. ಇನ್ನು ಹೋಗೋದು ಯಾವಾಗ ಎಂದು ಅವರಿಗೆ ಗೊತ್ತಿರೋದಿಲ್ಲ ಬಿಡಿ.
ಜಪಾನ್ ನಿಯಮ ನಮ್ಮಲ್ಲಿ ಜಾರಿಯಾದರೆ ಬೊಕ್ಕಸಕ್ಕೆ ಸಿಕ್ಕಾಪಟ್ಟೆ ಹಣ ಉಳಿತಾಯವಾಗುವುದರಲ್ಲಿ ಸಂಶಯವಿಲ್ಲ…
Discussion about this post