ನವದೆಹಲಿ : ಸುದ್ದಿಮನೆಯಲ್ಲಿ ಆಗುವ ಎಡವಟ್ಟುಗಳು ಕೆಲವೊಮ್ಮೆ ಕ್ಷಣ ಮಾತ್ರದಲ್ಲಿ ಬಹಿರಂಗವಾಗಿ ಬಿಡುತ್ತದೆ. ಅದೊಂದು ರೀತಿಯಲ್ಲಿ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ. ಅದರಲ್ಲೂ ಸುದ್ದಿ ವಾಹಿನಿ ಮನೆಯವರು ಯಾರಿಗೂ ಗೊತ್ತಾಗಲ್ಲ ಅಂದುಕೊಂಡಿರುತ್ತಾರೆ. ಆದರೆ ಕ್ಯಾಮಾರ ಅದನ್ನು ಸೆರೆ ಹಿಡಿದು ಜಗತ್ತಿನ ಮೂಲೆ ಮೂಲೆಗೂ ಕಳುಹಿಸಿಯಾಗಿರುತ್ತದೆ.
ಹಿಂದೊಮ್ಮೆ ಅಜ್ ತಕ್ ವಾಹಿನಿಯ ಸುದ್ದಿವಾಚಕಿ ಬ್ರೇಕ್ ನಲ್ಲಿ ತಲೆ ಬಾಚೋ ದೃಶ್ಯ ಪ್ರಸಾರವಾಗಿತ್ತು.
ಇದೀಗ ಬಿಬಿಸಿಯ ಸರದಿ, ಟಿಪ್ ಟಾಪ್ ಆಗಿ ಟೈ ಜಾಕೆಟ್ ಧರಿಸಿ ಸುದ್ದಿ ವಾಚಕರೊಬ್ಬರು ಸುದ್ದಿ ಓದುವ ವೇಳೆ ಪ್ಯಾಂಟ್ ಧರಿಸಿರಲಿಲ್ಲ ಅನ್ನುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬಿಬಿಸಿ ನಿರೂಪಕ ಶಾನ್ ಲೇ ಬಿಬಿಸಿ ರೇಡಿಯೋ 4 ರಲ್ಲಿ ದಿ ವರ್ಲ್ಡ್ ದಿಸ್ ವಿಕೇಂಡ್ ಅನ್ನುವ ಕಾರ್ಯಕ್ರಮ ನಿರೂಪಿಸಲು ಸ್ಟುಡಿಯೋಗ ಎಂಟ್ರಿ ಕೊಟ್ಟಿದ್ದರು.
ಇನ್ನೇನು ಸುದ್ದಿ ಪ್ರಾರಂಭವಾಗಬೇಕು ಅನ್ನುವಾಗ ವೈಡ್ ಕ್ಯಾಮಾರ ಚಲಿಸಲು ಪ್ರಾರಂಭಿಸುತ್ತದೆ. ಬಳಿಕ ಸುದ್ದಿ ವಾಚಕರ ಟೇಬಲ್ ಸಮೀಪದಲ್ಲೇ ಹಾದು ಹೋಗುತ್ತದೆ. ನಂತ್ರ ಸುದ್ದಿವಾಚಕರ ಕ್ಲೋಸ್ ಫ್ರೇಮ್ ಪ್ರಸಾರವಾಗುತ್ತದೆ. ವೈಡ್ ಕ್ಯಾಮಾರದಲ್ಲಿ ಶಾನ್ ಲೇ ಚಡ್ಡಿ ಹಾಕಿ ಬಂದಿರುವ ದೃಶ್ಯ ಸೆರೆಯಾಗಿದೆ.
ಇದೀಗ ಶಾನ್ ಲೇ ಮಾಡಿದ ಯಡವಟ್ಟಿನ ಕುರಿತಂತೆ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
Discussion about this post