ಕೆಟ್ಟ ಮೇಲೆ ಬಿದ್ದಿ ಬಂತು ಅನ್ನುವಂತಾಗಿದೆ ಈಶಾನಿ ಪರಿಸ್ಥಿತಿ
ಬಿಗ್ ಬಾಸ್ ಮನೆಗೆ ಕೆಲ ಸ್ಫರ್ಧಿಗಳ ಜೊತೆಗೆ ಮರು ಎಂಟ್ರಿ ಕೊಟ್ಟಿದ್ದ ಈಶಾನಿ, ಬಿಗ್ ಬಾಸ್ ಮನೆಯೊಳಗಡೆ ನಾಲಗೆ ಹರಿ ಬಿಟ್ಟಿದ್ದರು. ಎಲುಬಿಲ್ಲದ ನಾಲಗೆ ಹೇಗೆ ಬೇಕಾದ್ರೂ ತಿರುಗುತ್ತದೆ ಅನ್ನೋದನ್ನ ಮತ್ತೊಮ್ಮೆ ತೋರಿಸಿಕೊಟ್ಟಿದ್ದರು. ಆದರೆ ಆಕೆಯಾಡಿದ ಮಾತು ಕಿಚ್ಚ ಸುದೀಪ್ ಕೆಂಗಣ್ಣಿಗೂ ಗುರಿಯಾಗಿತ್ತು.
ಇದನ್ನೂ ಓದಿ : ಹನಿ ಟ್ರ್ಯಾಪ್ ದಂಧೆಯ ಫೈಝಲ್ ಲುಬಾ ದಂಪತಿ ಅಂದರ್
ಕಾಗೆ ಕಕ್ಕ ಉದಾಹರಣೆಯನ್ನು ತೆಗೆದುಕೊಂಡು ಡ್ರೋನ್ ಪ್ರತಾಪ್ ಅವರನ್ನು ನಿಂದಿಸಿದ್ದ ಕರ್ಮಕ್ಕೆ ಈಶಾನಿ ಛೀ… ಥೂ ಎಂದು ಉಗಿಸಿಕೊಂಡಿದ್ದರು. ಏನು ಮಾತನಾಡಿದ್ರೂ ನಡೆಯುತ್ತದೆ ಎಂದು ಉಡಾಫೆಯಿಂದ ವರ್ತಿಸಿದ ಈಶಾನಿಯ ಬೆವರಳಿಸಿದ್ದರು ಬಿಗ್ ಬಾಸ್ ಅಭಿಮಾನಿಗಳು.
ಕೆಟ್ಟ ಮೇಲೆ ಬುದ್ದಿ ಬಂತು ಅನ್ನುವಂತೆ ಈಶಾನಿ ಮತ್ತೆ ಪ್ರತಾಪ್ ವಿಚಾರದಲ್ಲಿ ಮಾತನಾಡಿದ್ದಾರೆ. ಡ್ರೋನ್ ಪ್ರತಾಪ್ ಅವರನ್ನು ನಾನು ಕಾಗೆಯೆಂದು ಕರೆಯಬಾರದಿತ್ತು. ನಾನಿನ್ನೂ ಕನ್ನಡ ಕಲಿಯುತ್ತಿದ್ದೇನೆ. ನಾನು ಬೇರೆ ಏನೋ ಹೇಳಬೇಕಿತ್ತು. ಅದು ಈ ಥರ ಆಗಿ ಹೋಯ್ತು, ತಪ್ಪೇ ಮಾಡಿಲ್ಲ ಅನ್ನುವಂತೆ ತಿಪ್ಪೆ ಸಾರುವ ಕೆಲಸ ಮಾಡಿದ್ದಾರೆ.
ನಾನು ಕಾಗೆ ಅಂತ ಕರೆದಿದ್ದು ತಪ್ಪಿತ್ತು. ಆ ಶಬ್ಧ ನಾನು ಬಳಸಬಾರದಿತ್ತು. ಈ ಬಗ್ಗೆ ಈಗಾಗಲೇ ನಾನು ಸುದೀಪ್ ಅವರ ಬಳಿ ಕ್ಷಮೆ ಕೇಳಿದ್ದೇನೆ. ಪ್ರತಾಪ್ ಆವರ ಬಳಿಯೂ ಕ್ಷಮೆಯಾಚಿಸಿದ್ದೇನೆ ಜೊತೆಗೆ ವೀಕ್ಷಕರಗೂ ನಡು ಬಗ್ಗಿ ತಲೆ ಬಾಗಿಸಿ ಕ್ಷಮೆ ಕೇಳಿದ್ದೇನೆ ಅಂದಿದ್ದಾರೆ.
Discussion about this post