ಬಿಗ್ ಬಾಸ್ ಮನೆಗೆ ಬಂದ ಜ್ಯೋತಿಷಿ ಅನಾಹುತ ಮಾಡಿಬಿಟ್ರಲ್ಲ ಪ್ರತಾಪ್
ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಮನೆಯ ಸದಸ್ಯರು ಮೃಗಗಳಂತೆ ವರ್ತಿಸಿರುವುದನ್ನು ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ. ಸ್ಪರ್ಧಿಗಳ ಹುಚ್ಚಾಟದ ಕಾರಣದಿಂದ ಇಬ್ಬರು ಸದಸ್ಯರು ಕಣ್ಣು ಕಳೆದುಕೊಳ್ಳುವ ಆತಂಕವೂ ಎದುರಾಗಿತ್ತು.
ಇನ್ನು ಹುಲಿ ಉಗುರಿನ ಕಾರಣದಿಂದ ವರ್ತೂರ್ ಸಂತೋಷ್ ಜೈಲು ನಿ ಬಂದ್ರೆ, ಇದೇ ಕಾರಣದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಚಾರವನ್ನೂ ಗಿಟ್ಟಿಸಿಕೊಂಡಿದ್ದು ಸುಳ್ಳಲ್ಲ. ವರ್ತೂರ್ ಸಂತೋಷ್ ಒಬ್ಬರನ್ನು ಬಿಟ್ರೆ ಮತ್ಯಾರನ್ನೂ ಬಂಧಿಸಲು ಅರಣ್ಯಾಧಿಕಾರಿಗಳಿಗೆ ಸಾಧ್ಯವೇ ಆಗಲೇ ಇಲ್ಲ.
ಈ ನಡುವೆ ತನಿಷಾ ಕೂಡಾ ಆಸ್ಪತ್ರೆ ವಾಸ ಮುಗಿಸಿ ಬಂದಿದ್ದು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ದಾಖಲೆಯಾಗಿದೆ.
ಇದನ್ನೂ ಓದಿ : ಶಬರಿಮಲೆಯಲ್ಲಿ ಅರವಣ ಪ್ರಸಾದ ತಯಾರಿ ಮತ್ತೆ ಸ್ಥಗಿತ
ಮತ್ತೊಂದು ಕಡೆ ಇದೀಗ ಡ್ರೋಣ್ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಅನ್ನುವ ಗಾಳಿ ಸುದ್ದಿಗಳು ಹರಿದಾಡಿತ್ತು. ಆದರೆ ಇದೀಗ ವಾಹಿನಿಯೇ ಸ್ಪಷ್ಟನೆ ಕೊಟ್ಟಿದ್ದು, ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಪ್ರತಾಪ್ ಅವರಿಗೆ ಫುಡ್ ಪಾಯಿಸನ್ ಆಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು, ಇದೀಗ ಅವರು ಮತ್ತೆ ಮನೆಗೆ ಮರಳಿದ್ದಾರೆ ಅಂದಿದೆ. ಜೊತೆಗೆ ಪ್ರತಾಪ್ ಚಿಕಿತ್ಸೆ ಪಡೆದ ಆಸ್ಪತ್ರೆ ವೈದ್ಯರೂ ಕೂಡಾ ಮಾತನಾಡಿದ್ದು, ಹೊಟ್ಟೆಯ ಸಮಸ್ಯೆಯ ಕಾರಣದಿಂದ ಅವರನ್ನು ಆಡ್ಮಿಟ್ ಮಾಡಿಕೊಳ್ಳಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದ ಕಾರಣ ಡಿಸಾರ್ಜ್ ಮಾಡಲಾಗಿದೆ ಎಂದು ಡಾ. ಪ್ರತಾಪ್ ಮತ್ತು ಡಾ. ಪೂವರ್ಜ್ ತಿಳಿಸಿದ್ದಾರೆ.
ಹಾಗಾದ್ರೆ ಡ್ರೋಣ್ ಪ್ರತಾಪ್ ಅವರಿಗೆ ಆಗಿದ್ದೇನು, ಪ್ರಾಥಮಿಕ ಮಾಹಿತಿಗಳ ಪ್ರಕಾರ, ಪ್ರತಾಪ್ ಅವರು ದಯಾನಂದ ಸರಸ್ವತಿ ಅನ್ನುವ ಜ್ಯೋತಿಷಿ ಬಿಗ್ ಬಾಸ್ ಮನೆಗೆ ಬಂದು ಭವಿಷ್ಯ ಹೇಳಿ ಹೋದ ನಂತರ ಪ್ರತಾಪ್ ಸರಿಯಾಗಿ ಊಟ ಮಾಡುತ್ತಿಲ್ಲವಂತೆ. ಮತ್ತೆ ಕೆಲ ಮೂಲಗಳ ಪ್ರಕಾರ, ಎರಡು ಮೂರು ದಿನಗಳಿಂದ ಫ್ರಿಡ್ಜ್ ನಲ್ಲಿ ಇಟ್ಟಿದ್ದ ಆಹಾರವನ್ನು ಪ್ರತಾಪ್ ಸೇವಿಸಿದ್ದ ಕಾರಣ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಅನ್ನಲಾಗಿದೆ.
ದಯಾನಂದ ಸರಸ್ವತಿ ಅನ್ನುವ ಜ್ಯೋತಿಷಿ ಬಿಗ್ ಬಾಸ್ ಮನೆಗೆ ಬಂದು, ಮತ್ತೆ ಕುಟುಂಬದೊಂದಿಗೆ ನೀನು ಬದುಕಿದರೆ, ದೋಷವಿದೆ, ಕುಟುಂಬದೊಂದಿಗೆ ಬದುಕೋ ಭಾಗ್ಯವಿಲ್ಲ ಎಂದೆಲ್ಲಾ ಕುಟುಂಬ ಒಡೆಯುವ ಮಾತುಗಳನ್ನಾಡಿದ್ದರು. ಜ್ಯೋತಿಷಿಗಳಾದವರು ಸಂಸಾರ ಒಂದು ಮಾಡೋ ಕೆಲಸ ಮಾಡಬೇಕಾಗಿತ್ತು, ಆದರೆ ದಯಾನಂದ ಸರಸ್ವತಿ ಭಯ ಹುಟ್ಟಿಸುವ ಕೆಲಸ ಮಾಡಿದ್ದರು. ಅಷ್ಟು ಮಾತ್ರವಲ್ಲದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತೀ ಸಮಸ್ಯೆಗಳಿಗೂ ಪರಿಹಾರಗಳಿದೆ. ದಯಾನಂದ ಸರಸ್ವತಿ ಅನ್ನುವ ಜ್ಯೋತಿಷಿ ಪ್ರತಾಪ್ ಅವರಿಗೆ ಪರಿಹಾರವನ್ನಾದರೂ ಸೂಚಿಸಬಹುದಾಗಿತ್ತು. ಆದರೆ ಹಾಗೇ ಮಾಡದೆ TRP ಆಟವಾಡಿದ್ದರು.
ಜ್ಯೋತಿಷಿ ಮಾತಿನ ಬಳಿಕ ಪ್ರತಾಪ್ ಖಿನ್ನತೆಗೆ ಜಾರಿದ್ದರು ಅನ್ನಲಾಗಿದೆ. ಈ ಜ್ಯೋತಿಷಿ ಬರೋ ಕೆಲಸ ದಿನಗಳ ಹಿಂದಷ್ಟೇ, ಬಿಗ್ ಬಾಸ್ ಮನೆಗೆ ಡ್ರೋನ್ ಅವರ ತಂದೆ ತಾಯಿ ಬಂದಿದ್ದರು. ಆಗ ಪ್ರತಾಪ್ ಸಿಕ್ಕಾಪಟ್ಟೆ ಸಂಭ್ರಮಿಸಿದ್ದರು. ಅಪ್ಪ ಅಮ್ಮನ ಅಪ್ಪುಗೆಯಲ್ಲಿ ಕಳೆದು ಹೋಗಿದ್ದರು. ಹಲವು ವರ್ಷಗಳ ಮುನಿಸು ಕೂಡಾ ಈ ವೇಳೆ ಮಾಯವಾಗಿತ್ತು. ಇಡೀ ದಿನ ತನ್ನ ತಂದೆ ತಾಯಿಯ ಜೊತೆ ಹಲವಾರು ವಿಚಾರಗಳನ್ನು ಹಂಚಿಕೊಂಡು ಮತ್ತೆ ಎಲ್ಲರೂ ಒಟ್ಟಿಗೆ ಬದುಕುವ ಭರವಸೆ ನೀಡಿದ್ದರು.
ಈ ಎಲ್ಲಾ ಕನಸುಗಳು ಜ್ಯೋತಿಷ್ಯ ಕೊಳ್ಳಿ ಇಟ್ಟು ಎಳ್ಳು ನೀರು ಬಿಡುವಂತೆ ಮಾಡಿದ್ದರು. ಅವತ್ತಿನಿಂದ ಡ್ರೋನ್ ಪ್ರತಾಪ್ ಸರಿಯಾಗಿ ಊಟ, ತಿಂಡಿ ಮಾಡದೇ ಅದೇ ಗುಂಗಿನಲ್ಲಿ ಇದ್ದರು ಅನ್ನೋದು ಹರಿದಾಡುತ್ತಿರುವ ಸುದ್ದಿ.
ಒಟ್ಟಿನಲ್ಲಿ ಗೆಲವಿನ ಕಡೆಗೆ ಮುಖ ಮಾಡಿದ್ದ, ನೋವಿನ ಮನಸ್ಸು ನಗುವ ಹೊತ್ತಿನಲ್ಲಿ ಜ್ಯೋತಿಷಿ ಹೇಳಿದ ಒಂದು ಮಾತು ಎನೆಲ್ಲಾ ಅನಾಹುತ ಸೃಷ್ಟಿಸಿದೆ ನೋಡಿ.
Discussion about this post