ಮಂಕಿಪಾಕ್ಸ್ ಲಕ್ಷಣಗಳೊಂದಿಗೆ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿರುವುದನ್ನು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ದೃಢಪಡಿಸಿದ್ದಾರೆ. ( kerala monkeypox ) ಗುರುವಾರ ಸಂಜೆ ಈ ವ್ಯಕ್ತಿಯ ವರದಿ ಬಂದಿದ್ದು ಸೋಂಕು ದೃಢ ಪಟ್ಟಿದೆ
ಕೇರಳ : ಕೊರೋನಾ ಸೋಂಕಿನ ಅಬ್ಬರ ಒಂದಿಷ್ಟು ಕಡಿಮೆಯಾಯ್ತು ಎಂದು ನಿಟ್ಟುಸಿರುಬಿಡುವ ಹೊತ್ತಿಗೆ ಮಂಕಿಪಾಕ್ಸ್ ಅನ್ನುವ ಮಹಾಮಾರಿ ವಕ್ಕರಿಸಿಕೊಂಡಿದೆ. ಈಗಾಗಲೇ ಯುರೋಪ್ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಸೋಂಕು ದೊಡ್ಡ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ. ಭಾರತಕ್ಕೆ ಮಂಕಿಪಾಕ್ಸ್ ನಿಂದ ಆತಂಕವಿಲ್ಲ ಅನ್ನುವ ಮಾತುಗಳೂ ಕೇಳಿ ಬಂದಿತ್ತು. ಆದರೆ ಈಗ ಕೇರಳದಲ್ಲಿ ಮಂಕಿ ಪಾಕ್ಸ್ ಆತಂಕ ಶುರುವಾಗಿದೆ.
ಮೂರು ದಿನಗಳ ಹಿಂದೆ ಯುಎಇ ನಿಂದ ಕೇರಳಕ್ಕೆ ಆಗಮಿಸಿದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್ ಲಕ್ಷಣ ಕಾಣಿಸಿಕೊಂಡಿದೆ. ಜುಲೈ 12 ರಂದು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಬೆಳವಣಿಗೆ ಸಾಕಷ್ಟು ಆತಂಕ ಮೂಡಿಸಿದೆ. ಹಾಗಿದ್ದರೂ ಪರಿಸ್ಥಿತಿಯನ್ನು ಎದುರಿಸಲು ಕೇರಳ ಆರೋಗ್ಯ ಇಲಾಖೆ ಸಜ್ಜಾಗಿದೆ.
ಸೋಂಕಿನ ಲಕ್ಷಣ ಹೊಂದಿದ ವ್ಯಕ್ತಿಯ ವಿವಿಧ ಮಾದರಿಗಳನ್ನು National Institute of Virology in Puneಗೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ವರದಿ ಬಂದಿದ್ದು, ಪಾಸಿಟಿವ್ ಎಂದು ಗೊತ್ತಾಗಿದೆ. ಇನ್ನು ಸೋಂಕಿನ ಲಕ್ಷಣಗಳನ್ನು ಹೊಂದಿದ್ದ ವ್ಯಕ್ತಿ ಯುಎಇನಲ್ಲಿ ಮಂಕಿ ಪಾಕ್ಸ್ ಸೋಂಕಿತನ ಸಂಪರ್ಕದಲ್ಲಿದ್ದರು ಎಂದು ಗೊತ್ತಾಗಿದೆ.
ಈ ಮೂಲಕ ಭಾರತದ ಮೊದಲ ಮಂಕಿ ಪಾಕ್ಸ್ ಪ್ರಕರಣ ಕೇರಳ ಕೊಲ್ಲಂ ಜಿಲ್ಲೆಯಿಂದ ವರದಿಯಾದಂತಾಗಿದೆ. ಇನ್ನು ಕೇಂದ್ರ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ಆರೋಗ್ಯ ಇಲಾಖೆ ವಿಶೇಷ ತಂಡವನ್ನು ಕೇರಳಕ್ಕೆ ತುರ್ತಾಗಿ ರವಾನಿಸಿದೆ.
ನಿತ್ಯದ ಬದುಕಲ್ಲಿ ಬಳಸುವ ಪದಗಳು ಆಸಂಸದೀಯವಂತೆ : ಪ್ರತಿಪಕ್ಷಗಳು ಇನ್ಮುಂದೆ ಬೈಯೋ ಹಾಗಿಲ್ಲ
ಜುಲೈ 18 ರಿಂದ ಪ್ರಾರಂಭವಾಗುವ ಮುಂಗಾರು ಅಧಿವೇಶನಕ್ಕೂ ಮುನ್ನವೇ ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಸಿದ್ದತೆಗಳಾಗಿದೆ. ಪಟ್ಟಿ ನೋಡಿದರೆ ಸಂಸತ್ ನಲ್ಲಿ ಮಾತನಾಡುವುದೇ ಕಷ್ಟ.
ನವದೆಹಲಿ : ಕೋವಿಡ್ ಸ್ಪ್ರೆಡರ್, ( covid spreader ) ಭ್ರಷ್ಟ, (corrupt) ಅಸಮರ್ಥ, ಸರ್ವಾಧಿಕಾರಿ, ಕತ್ತೆ, ನಾಟಕ ( drama ) ಹೀಗಾಗಿ ನೂರಾರು ಪದಗಳನ್ನು ಬಳಸುವಂತಿಲ್ಲ ಅವೆಲ್ಲವೂ ಅಸಂಸದೀಯ ಪದಗಳು ಎಂದು ಲೋಕಸಭೆ ಸೆಕ್ರಟೇರಿಯಟ್ ಬಿಡುಗಡೆಗೊಳಿಸಿದ ಪುಸ್ತಕದಲ್ಲಿ ಹೇಳಲಾಗಿದೆ.
ಒಂದು ವೇಳೆ ಈ ಅಸಂಸದೀಯ ಪದಗಳನ್ನು ಬಳಸಿದರೆ ಲೋಕಸಭೆಯ ನಿಯಮ 380ರ ಪ್ರಕಾರ ಸ್ಪೀಕರ್ ಅವರನ್ನು ಕಲಾಪದಿಂದ ಹೊರಗೆ ಹಾಕುತ್ತಾರೆ ಎಂದು ಇದೇ ಪುಸ್ತಕದಲ್ಲಿ ಮಾಹಿತಿ ನೀಡಲಾಗಿದೆ. ಜೊತೆಗೆ ಸ್ಪೀಕರ್ ಅಥವಾ ರಾಜ್ಯಸಭೆಯ ಅಧ್ಯಕ್ಷರು ಅ ಪದಗಳನ್ನು ತೆಗೆದು ಹಾಕುತ್ತಾರೆ ಎಂದು ಹೇಳಲಾಗಿದೆ.
ಇನ್ನು ಈ ಕ್ರಮಕ್ಕೆ ಕಾಂಗ್ರೆಸ್ ಮತ್ತು ಟಿಎಂಸಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ತೃಣಮೂಲ ಕಾಂಗ್ರೆಸ್ ಸಂಸದೆ ಮೆಹುವಾ ಮೊಯಿತ್ರಾ ಒಂದು ಹೆಜ್ಜೆ ಮುಂದೆ ಹೋಗಿ ನಾವು ಈ ಪದಗಳನ್ನು ಬಳಸುತ್ತೇವೆ, ಅಮಾನತು ಮಾಡಿ ಅಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಬಿಜೆಪಿ ಭಾರತವನ್ನು ಹೇಗೆ ನಾಶ ಮಾಡುತ್ತದೆ ಅನ್ನುವುದು ಇದರಿಂದ ಗೊತ್ತಾಗುತ್ತದೆ. ಪ್ರತಿಪಕ್ಷಗಳು ಬಳಸುತ್ತಿದ್ದ ಶಬ್ಧವನ್ನೇ ಹೆಕ್ಕಿ ನಿಷೇಧಿಸಲಾಗಿದೆ, ಇದು ನಾಚಿಕೆಗೇಡು ಅಂದಿದ್ದಾರೆ.
ಹಾಗಾದ್ರೆ ಯಾವುದೇ ಅಸಂಸದೀಯ ಪದಗಳು ಎಂದು ನೋಡುವುದಾದರೆ ರಕ್ತಪಾತ, ರಕ್ತಸಿಕ್ತ, ದ್ರೋಹ, ವಂಚನೆ, ಚಮ್ಚಾ, ಚಮ್ಚಾಗಿರಿ, ಚೇಲಾನ್, ಬಾಲಿಶ, ಹೇಡಿ, ಕ್ರಿಮಿನಲ್, ಮೊಸಳೆ ಕಣ್ಣೀರು,ಅವಮಾನ, ಕತ್ತೆ, ನಾಟಕ, ಕಣ್ಣೊರೆಸುವ ತಂತ್ರ, ಗೂಂಡಾಗಿರಿ, ಅಸಮರ್ಥ, ಸುಳ್ಳು, ಗದ್ದಾರ್, ಗಿರ್ಗಿಟ್, ಗಢಿಯಾಲಿ ಅಂಸು, ಅಪಮಾನ್, ಅಸತ್ಯ, ಅಹಂಕಾರ, ಕಾಲಾ ದಿನ್, ಕಾಲಾ ಬಜಾರ್, ದಂಗ, ದಲಾಲ್, ದಾದಾಗಿರಿ, ಬೆಚಾರ, ಬಾಯ್ಕಟ್, ಲಾಲಿಪಪ್, ಸಂವೇದನಾ ಹೀನ್, ಸರ್ವಾದಧಿಕಾರಿ, ಶಕುನಿ, ತಾನಾಶಾಹಿ, ಜೈಚಂದ್, ವಿನಾಶ್ ಪುರುಷ್, ಖೂನ್ ಸೇ ಖೇತಿ ಹೀಗೆ ಸಾವಿರಾರು ಪದಗಳನ್ನು ಹೇಳಲಾಗಿದೆ.
Discussion about this post