ರಾಜಕೀಯ ಕಾರಣಕ್ಕಾಗಿ ವಿರೋಧಕ್ಕೆ ಗುರಿಯಾಗಿದ್ದ ಅಗ್ನಿಪಥ ಯೋಜನೆಗೆ ಕರ್ನಾಟಕದ ಯುವಕರು ಹೇಗೆ ಸ್ಪಂದಿಸುತ್ತಾರೆ
ಹಾಸನ : ಅಗ್ನಿಪಥ ಯೋಜನೆಯಡಿಯಲ್ಲಿ ಅಗ್ನಿವೀರರನ್ನು ನೇಮಿಸಿಕೊಳ್ಳಲು ವಾಯು ಸೇನೆ ಈಗಾಗಲೇ ಕೆಲಸ ಪ್ರಾರಂಭಿಸಿದ್ದು, ಆಸಕ್ತಿ ಉಳ್ಳವರಿಂದ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ವಾಯು ಸೇನೆ ಸೇರಲು ಯುವಕರು ಉತ್ಸಾಹ ತೋರಿದ್ದು, ಲಕ್ಷ ಲಕ್ಷ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದೆ.
ಈ ನಡುವೆ ಭೂಸೇನೆ ಕೂಡಾ ಅಗ್ನಿ ವೀರರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಆಗಸ್ಟ್ 10 ರಿಂದ ಆಗಸ್ಟ್ 22ರವರೆಗೆ ಹಾಸನ ಜಿಲ್ಲಾ ಕ್ರೀಡಾಂಗಣ ಮೈದಾನದಲ್ಲಿ ನೇಮಕಾತಿ Rally ನಡೆಯಲಿದೆ.
ಈ Rallyಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಚಿತ್ರದುರ್ಗ, ಮತ್ತು ವಿಜಯನಗರದ ಪುರುಷ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಜನರಲ್ ಡ್ಯೂಟಿ, ಅಗ್ನೀವರ ತಾಂತ್ರಿಕ, ಹತ್ತನೆ ತರಗತಿ ಮತ್ತು ಎಂಟನೇ ತರಗತಿ ಪಾಸ್ ಆದವರಿಗೆ ಅಗ್ನಿ ವೀರ ಕುಶಲಕರ್ಮಿ, ಅಗ್ನಿವೀರ ಕ್ಲರ್ಕ್, ಮತ್ತು ಸ್ಟೋರ್ ಕೀಪರ್ ಹುದ್ದೆಗಳು ಸಿಗಲಿದ.
ಜುಲೈ 1 ರಿಂದ ಆನ್ ಲೈನ್ ನೋಂದಣಿ ಕಾರ್ಯ ನಡೆಯಲಿದ್ದು, ಜುಲೈ 30ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಆಸ್ತಕ ಆಭ್ಯರ್ಥಿಗಳು joinindianarmy.nic.in ವೆಬ್ ಸೈಟ್ ನಲ್ಲಿ ಹೆಸರು ನೋಂದಾಯಿಸಬಹುದಾಗಿದೆ.
Discussion about this post