ಪುಲ್ವಾಮದಲ್ಲಿ ಪಾಪಿ ಉಗ್ರರ ಅಟ್ಟಹಾಸಕ್ಕೆ ದೇಶ ವೀರಯೋಧರು ಉಸಿರು ಚೆಲ್ಲಿದ್ದಾರೆ. ಪಾಕಿಸ್ತಾನವೇ ಉಗ್ರರನ್ನು ಸಾಕುತ್ತಿದೆ. ಹೀಗಾಗಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ದೇಶ ಆಗ್ರಹಿಸುತ್ತಿದೆ.
ಯೋಧರ ರಕ್ತ ಚೆಲ್ಲಿದವರ ರುಂಡ ಚೆಂಡಾಡಬೇಕು ಎಂದು ಭಾರತೀಯರು ಆಗ್ರಹಿಸುತ್ತಿದ್ದಾರೆ. ಅದರೇನು ಮಾಡುವುದು ಶತ್ರುಗಳು ನಮ್ಮ ದೇಶದಲ್ಲೇ ಕೂತಿದ್ದಾರೆ. ಅವರನ್ನು ಹೊಡೆದುರುಳಿಸುವುದೇ ದೊಡ್ಡ ಸಮಸ್ಯೆ.
ಅತ್ತ ಭಾರತಮಾತೆಯ ರಕ್ಷಣೆಗೆ ಪ್ರತಿಜ್ಞೆ ಸ್ವೀಕರಿಸಿದ್ದ ಯೋಧರು ತುಂಡು ತುಂಡಾಗಿ ಬಿದ್ದಿದ್ದಾರೆ. ಇತ್ತ ನಮ್ಮದೇ ನೆಲದ ಸೋಷಿಯಲ್ ಮೀಡಿಯಾ ಉಗ್ರರು ಅಟ್ಟಹಾಸಗೈಯುತ್ತಿದ್ದರು. ಯೋಧರಿಗಾಗಿ ಒಂದು ಹನಿ ಕಣ್ಣೀರು ಚೆಲ್ಲುವ ಬದಲು ಕೆಲವರು ಉಗ್ರರರ ಬೆಂಬಲಕ್ಕೆ ನಿಂತಿದ್ದರು. ಇನ್ನು ಕೆಲವರು ಪ್ರಧಾನಿಯನ್ನು ಟೀಕಿಸುವುದರಲ್ಲಿ ನಿರತರಾಗಿದ್ದರು.ದುರಂತ ಅಂದರೆ ಅದರಲ್ಲಿ ಬಹುತೇಕರು ಪತ್ರಕರ್ತರೇ ಆಗಿದ್ದರು.
ಈ ಪೈಕಿ NDTV ಪತ್ರಕರ್ತೆ, ನಿಧಿ ಸೇತಿ ಕೂಡಾ ಒಬ್ಬಳು. NDTV ನ್ಯೂಸ್ ಎಡಿಟರ್ ಆಗಿರುವ ಈಕೆ “Where a grisly 44 has been proven to be greater than the mythical 56.” With this, she added the hashtag #HowstheJaish.ಎಂದು ಬರೆದುಕೊಂಡಿದ್ದಳು.
HowstheJaish ಅನ್ನುವುದು Jaish-e-Mohammed ಅನ್ನು ಬೆಂಬಲಿಸಿ ಮಾಡಿದ್ದು ಅನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.ಹೀಗಾಗಿ ಸಿಡಿದೆದ್ದ ದೇಶಭಕ್ತರು, ನಿಧಿಯನ್ನು ಹಿಗ್ಗಾ ಮುಗ್ಗಾ ಜಾಡಿಸಿದರು. ವಾಹಿನಿಯ ಬಾಗಿಲ ತನಕ ದೇಶ ಭಕ್ತರ ಆಕ್ರೋಶ ತಲುಪಿತು.
ಆಕ್ರೋಶ ಕಂಡ NDTV ಆಡಳಿತ ಮಂಡಳಿ, ತನ್ನ ಪತ್ರಕರ್ತೆಯನ್ನು ಎರಡು ವಾರಗಳ ಮಟ್ಟಿಗೆ ಕೆಲಸದಿಂದ ಅಮಾನತು ಮಾಡಿದೆ.
ಎಲ್ಲಾ ಸರಿ ಈಕೆ ಮಾಡಿದ ಕೃತ್ಯಕ್ಕೆ ಕೇವಲ ಎರಡು ದಿನ ಶಿಕ್ಷೆ ಸಾಕೇ ಅನ್ನುವುದು ದೇಶ ಕೇಳುತ್ತಿರುವ ಪ್ರಶ್ನೆ.
Discussion about this post