ಭೋಪಾಲ್ : ನಾಯಿಗಳ ಗಂಟಲಿಗೆ ಅಸಿಡ್ ಸುರಿದು ಕೊಂದ ಘಟನೆ ಮಧ್ಯ ಪ್ರದೇಶದ ಉಜೈನ್ನಲ್ಲಿ ನಡೆದಿದೆ. ಈ ಸಂಬಧ ಪ್ರಾಣಿ ದಯಾ ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ FIR ದಾಖಲಿಸಿದ್ದಾರೆ.
ಅಸಿಡ್ ದಾಳಿಯಿಂದ ನರಳಾಡುತ್ತಿದ್ದ ಐದಾರು ನಾಯಿಗಳನ್ನು ನೋಡಿದ ಸ್ಥಳೀಯರು ಪ್ರಾಣಿ ದಯಾ ಸಂಘಟನೆ ಕರೆ ಮಾಡಿದ್ದಾರೆ ತಕ್ಷಣ ಸ್ಥಳಕ್ಕೆ ದೌಡಾಯಿಸಿದರೆ ಕೆಲವು ನಾಯಿಗಳ ಪರಿಸ್ಥಿತಿ ತೀರಾ ಗಂಭೀರವಾಗಿತ್ತು. ಅಸಿಡ್ ನಿಂದ ಗಂಟಲು ಸುಟ್ಟ ಕಾರಣ ಯಮಯಾತನೆ ಅನುಭವಿಸುತ್ತಿತ್ತು. ಹೀಗಾಗಿ ತಕ್ಷಣ ಅವುಗಳನ್ನು ಪಶು ಆಸ್ಪತ್ರೆಗೆ ದಾಖಲಿಸಿದಾರೂ ಚಿಕಿತ್ಸೆ ಫಲಕಾರಿಯಾಗದೇ 5 ನಾಯಿಗಳು ಸಾವನ್ನಪ್ಪಿವೆ.
ಘಟನೆ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಪೀಪಲ್ ಆರ್ ಅನಿಮಲ್ಸ್ ಸಂಘಟನೆಯ ಪ್ರಿಯಾಂಶು, ಇದೊಂದು ಹೇಯ ಕೃತ್ಯವಾಗಿದ್ದು, ಮೃತ ಪಟ್ಟ ನಾಯಿಗಳು 4 ರಿಂದ 8 ವರ್ಷದ ಒಳಗಿನವು. ಈ ಸಂಬಂಧ ನಾವು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಆರೋಪಿಗಳ ಪತ್ತೆಯಾಗದ ಹೊರತು ನಾವು ಬಿಡುವುದಿಲ್ಲ ಅಂದಿದ್ದಾರೆ.
At least five stray dogs died after some unidentified persons poured acid on them in Madhya Pradesh’s Ujjain
Discussion about this post