ದೇಶದಲ್ಲೇ ಮೊದಲ ಬಾರಿಗೆ ಡ್ರೋನ್ ಬಳಸಿ ಗ್ರಾಹಕರಿಗೆ ಅಗತ್ಯ ಔಷಧಗಳನ್ನು ಪೂರೈಸುವ ಯೋಜನೆಯು ಪ್ರಾಯೋಗಿಕ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ 18ರಿಂದ ಆರಂಭವಾಗಲಿದೆ.
ಈ ಸಲುವಾಗಿ ಬೆಂಗಳೂರಿನ ಥ್ರೋಟಲ್ ಏರೋಸ್ಪೇಸ್ ಸಿಸ್ಟಮ್ಸ್ (ಟಿಎಎಸ್) ಸಂಸ್ಥೆ ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಅನುಮತಿಯನ್ನು ಪಡೆದುಕೊಂಡಿದೆ.
ಔಷಧಗಳನ್ನು ಪೂರೈಸಲು ಟಿಎಎಸ್, ಮೆಡ್ಕಾಪ್ಟರ್ ಮತ್ತು ರೇಂಡಿಂಟ್ ಎಂಬ ಎರಡು ಬಗೆಯ ಡ್ರೋನ್ಗಳನ್ನು ಸಂಸ್ಥೆ ಬಳಸಲಿದ್ದು ನಾರಾಯಣ ಹೆಲ್ತ್ನ ಸಂಸ್ಥಾಪಕರಾದ ಡಾ. ದೇವಿ ಶೆಟ್ಟಿ ಈ ಪ್ರಯೋಗಾಲಯದ ಪರಿಶೀಲನೆ ನಡೆಸಲಿದ್ದಾರೆ, ಈ ಸಂಬಂಧ ಟಿಎಎಸ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ನಾರಾಯಣ ಹೆಲ್ತ್, ಡ್ರೋನ್ ಮೂಲಕ ಸರಬರಾಜಾಗುವ ಔಷಧಗಳನ್ನು ಪೂರೈಸಲಿದೆ.
ಮೆಡಿಸಿನ್ ಅಗತ್ಯವಿರುವವರು ಟಿಎಎಸ್ ನ ಸಾಫ್ಟ್ ವೇರ್ ಮೂಲಕ ಬೇಡಿಕೆ ಸಲ್ಲಿಸುತ್ತಾರೆ. ತಕ್ಷಣ ಔಷಧವನ್ನು ಡ್ರೋನ್ ಗೆ ತುಂಬಿಸಲಾಗುತ್ತದೆ. ಗ್ರಾಹಕರು ನೀಡಿದ ಲೊಕೇಶನ್ ಗೆ ಡ್ರೋನ್ 4ಜಿ ತಂತ್ರಜ್ಞಾನ ಸಹಾಯದಿಂದ ತಲುಪಲಿದೆ.
ಇನ್ನು ಡ್ರೋನ್ ಹಾರುವ ಜಾಗದಲ್ಲಿ ಮರ, ಕಟ್ಟಡ ಅಡ್ಡವಿದ್ದರೆ ಇಡೀ ಜಾಗವನ್ನು ಡ್ರೋನ್ ಪರಿಶೀಲನೆ ಮಾಡಿ ತಾನೇ ದಾರಿ ಮಾಡಿಕೊಂಡು ಮುಂದೆ ಸಾಗುತ್ತದೆ. ಈಗಿರುವ ಡ್ರೋನ್ ಗೆ ಧೂಳು ಮಳೆ ಕತ್ತಲು ಅಡ್ಡಿಯಾಗುವುದಿಲ್ಲ.
ನಿಗದಿತ ಸ್ಥಳಕ್ಕೆ ತಲುಪಿದ ಡ್ರೋನ್ 5 ಮೀಟರ್ ಎತ್ತರದಿಂದ ಹಗ್ಗದ ಮೂಲಕ ಔಷಧ ಇಳಿಸುವ ವ್ಯವಸ್ಥೆ ಇದ್ದು, ಕೆಲವೊಮ್ಮೆ ನೆಲಕ್ಕಿಳಿದು ಔಷಧಿಯನ್ನು ಅನ್ ಲೋಡ್ ಮಾಡಲಾಗುತ್ತದೆ.
ಈಗಿರುವ ಎರಡು ಡ್ರೋನ್ ಗಳ ಪೈಕಿ ಒಂ ಡ್ರೋನ್ 1 ಕೆಜಿ ಭಾರವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಮತ್ತೊಂದು ಡ್ರೋನ್ 12 ಕೆಜಿ ಭಾರವನ್ನು ಹೊರಲಿದೆ.
Discussion about this post