ಚೀನಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದು ಮೇಲೆ ಮತ್ತೆ ಮುಂದಿನ ಮೂರು ತಿಂಗಳವರೆಗೆ ಭಾರತ ಸರ್ಕಾರ ನಿಷೇಧ ಹೇರಿದೆ.
ಚೀನಾದಿಂದ ಆಮದಾಗುವ ಕ್ಷೀರ ಉತ್ಪನ್ನಗಳಲ್ಲಿ ಪ್ಲಾಸ್ಟಿಕ್ ಹಾಗೂ ರಸಗೊಬ್ಬರಗಳ ತಯಾರಿಕೆಗೆ ಬಳಸುವ ‘ಮೆಲಾಮೈನ್’ ಎಂಬ ಹಾನಿಕಾರಕ ರಾಸಾಯನಿಕ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಬುಧವಾರ ಸಂಜೆಯಿಂದಲೇ ಈ ಆದೇಶ ಜಾರಿಗೆ ಬಂದಿದ್ದು, ಈ ಹಿಂದೆ 2008ರ ಅಕ್ಟೋಬರ್ 24ರಂದು ಭಾರತ ನಿಷೇಧ ಹೇರಿತ್ತು. ಈ ನಿಷೇಧ ಕಾಲ ಕಾಲಕ್ಕೆ ವಿಸ್ತರಣೆಯಾಗುತ್ತ ಬಂದಿತ್ತು.
ಈ ಉತ್ಪನ್ನಗಳ ಮೇಲಿನ ನಿರ್ಬಂಧಗಳನ್ನು 2018ರ ಡಿಸೆಂಬರ್ 24ರಂದು ಮಾರ್ಪಾಡು ಮಾಡಲಾಗಿತ್ತು. ಇದು ಏಪ್ರಿಲ್ 23ಕ್ಕೆ ಕೊನೆಗೊಂಡಿತ್ತು.
ಇನ್ನು ಆಮದು ನಿಷೇಧಕ್ಕೆ ಒಳಪಟ್ಟಿರುವ ಹಾಲಿನ ಉತ್ಪನ್ನಗಳಲ್ಲಿ ಚಾಕೊಲೇಟ್, ಕ್ಯಾಂಡಿ ಮತ್ತಿತರ ಪದಾರ್ಥಗಳು ಸೇರಿವೆ.
Discussion about this post