ಇತ್ತೀಚೆಗೆ ಬಂದಿರುವ ಅತ್ಯಾಧುನಿಕ ತಂತ್ರಜ್ಞಾನದ ಕಾರುಗಳಲ್ಲಿ ಬ್ರೇಕ್ ಫೇಲ್ ಸಮಸ್ಯೆಗಳು ತೀರಾ ವಿರಳ. ಆದ್ರೂ ಹೇಳಲು ಬರೋದಿಲ್ಲ.
ಹಾಗಾದ್ರೆ ಕಾರಿನ ಬ್ರೇಕ್ ಫೇಲ್ ಆದ ಸಂದರ್ಭದಲ್ಲಿ ಕೇವಲ 8 ಸೆಕೆಂಡ್ ಗಳಲ್ಲಿ ಕಾರುಗಳನ್ನು ನಿಲ್ಲಿಸಲು ಸಾಧ್ಯವೇ. ಖಂಡಿತಾ ಸಾಧ್ಯ ಅನ್ನುತ್ತಾರೆ ತಜ್ಞರು.
ಕಾರಿನ ಬ್ರೇಕ್ ಫೇಲ್ ಆಗಿದೆ ಎಂದು ಅನ್ನಿಸಿದ ತಕ್ಷಣ ಎರಡು ಬಾರಿ ಬ್ರೇಕ್ ಪೆಡಲ್ ಪ್ರೆಸ್ ಮಾಡಿ ನೋಡಬೇಕು. ಕೆಲವೊಮ್ಮೆ ಲಕ್ ಚೆನ್ನಾಗಿದ್ರೆ ಕಾರು ನಿಲ್ಲುವ ಸಾಧ್ಯತೆಗಳಿರುತ್ತದೆ.
ಇಲ್ಲ ಇದು ಕೆಲಸ ಮಾಡುತ್ತಿಲ್ಲ ಅನ್ನಿಸಿದ್ರೆ ತಕ್ಷಣ ಕಾರಿನ ಹ್ಯಾಂಡ್ ಬ್ರೇಕ್ ಅರ್ಧಕ್ಕೆ ಏರಿಸಬೇಕು. ತಕ್ಷಣ ಕಾರಿನ ವೇಗ ಕಡಿಮೆಯಾಗುತ್ತದೆ.
ಇದಾದ ನಂತ್ರ ಕಾರು ಯಾವ ಗೇರಿನಲ್ಲಿದೆ ಅನ್ನುವುದನ್ನು ಗಮನಿಸಿ, ಅದನ್ನು ಕೆಳಗಿನ ಗೇರ್ ಗಳಿಗೆ ಬದಲಾಯಿಸಿಕೊಳ್ಳಬೇಕು ಮತ್ತು ತಕ್ಷಣ ಹ್ಯಾಂಡ್ ಬ್ರೇಕ್ ಅನ್ನು ಪೂರ್ತಿ ಏರಿಸಬೇಕು. ಜರ್ಕ್ ಅನುಭವದೊಂದಿಗೆ ಕಾರು ನಿಂತುಕೊಳ್ಳುತ್ತದೆ.
ಆದರೆ ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಪ್ಯಾನಿಕ್ ಆಗ್ಲೇಬಾರದು. ಹಾಗಾದ್ರೆ ಕೆಲಸ ಕೆಟ್ಟಿತು ಎಂದೇ ಅರ್ಥ.
ಇನ್ನು ಬಹುತೇಕರಿಗೊಂದು ಅಭ್ಯಾಸವಿದೆ. ಕಾರಿನಲ್ಲಿ ಸಾಕಷ್ಟು ಜಾಗವಿದ್ದರೂ, ಹ್ಯಾಂಡ್ ಬ್ರೇಕ್ ಬಳಿ ಬ್ಯಾಗ್, ನೀರಿನ ಬಾಟಲಿ ಹಾಗೂ ಇನ್ನಿತರ ವಸ್ತುಗಳನ್ನು ಇಡೋದು. ಯಾವುದೇ ಕಾರಣಕ್ಕೂ ಹೀಗೆ ಮಾಡಬೇಡಿ. ಹ್ಯಾಂಡ್ ಬ್ರೇಕ್ ಇರೋ ಜಾಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ, ತುರ್ತು ಸಂದರ್ಭದಲ್ಲಿ ಅದು ನಿಮ್ಮನ್ನು ಸೇಫ್ ಆಗಿ ಇರಿಸುತ್ತದೆ.
ಹಾಗಾದ್ರೆ 80km ವೇಗದಲ್ಲಿ ಓಡೋ ಕಾರನ್ನು 8 ಸೆಕೆಂಡ್ ನಲ್ಲಿ ನಿಲ್ಲಿಸೋದು ಹೇಗೆ..ಈ ವಿಡಿಯೋ ನೋಡಿ
Discussion about this post