ಖ್ಯಾತ ಐಫೋನ್ ತಯಾರಿಕಾ ಸಂಸ್ಥೆ ಆ್ಯಪಲ್ ಕೊನೆಗೂ ತನ್ನ ಬಹು ನಿರೀಕ್ಷಿತ ಐಫೋನ್ 11 ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಕುಪರ್ಟಿನೊದ ಆ್ಯಪಲ್ ಕ್ಯಾಂಪಸ್ನ ಸ್ಟೀವ್ ಜಾಬ್ಸ್ ಥಿಯೇಟರ್ನಲ್ಲಿ ನಡೆದ ಆ್ಯಪಲ್ ವಿಶೇಷ ಕಾರ್ಯಕ್ರಮದಲ್ಲಿ ಆ್ಯಪಲ್ ಸಿಇಒ ಟಿಮ್ ಕುಕ್ ನೂತನ ಆ್ಯಪಲ್ ಐಫೋನ್ ಮಾದರಿಗಳನ್ನು ಘೋಷಿಸಿದರು. ಆ್ಯಪಲ್ ಐಫೋನ್ 11, ಆ್ಯಪಲ್ ಐಫೋನ್ 11 ಪ್ರೋ, ಆ್ಯಪಲ್ ಐಫೋನ್ 11 ಪ್ರೋ ಮ್ಯಾಕ್ಸ್ ಫೋನ್ ಗಳನ್ನು ಬಿಡುಗಡೆ ಮಾಡಲಾಯಿತು.
ನಿರೀಕ್ಷೆಯಂತೆ ಆ್ಯಪಲ್ ಹೊಸ ಐಫೋನ್ 11 ಸರಣಿಯಲ್ಲಿ ಮೂರು ಹೊಸ ಐಫೋನ್ ಅನ್ನು ಘೋಷಿಸಿದ್ದು, 699 ಡಾಲರ್ ಆರಂಭಿಕ ಬೆಲೆ ಹೊಂದಿದೆ. ಅಮೆರಿಕದಲ್ಲಿ ಸೆ. 20 ರಿಂದ ಹೊಸ ಐಫೋನ್ ಆ್ಯಪಲ್ ಸ್ಟೋರ್ ಮೂಲಕ ದೊರೆಯಲಿದೆ. ಜತೆಗೆ ಪ್ರಮುಖ ಆನ್ಲೈನ್ ಸ್ಟೋರ್ಗಳ ಮೂಲಕವೂ ಲಭ್ಯವಾಗಲಿದೆ.
ಐಫೋನ್ 11 ಸರಣಿ ಫೋನ್ ಗಳ ವಿಶೇಷತೆ ಏನು?
ಆ್ಯಪಲ್ ಈ ಬಾರಿಯ ಕಾರ್ಯಕ್ರಮದಲ್ಲಿ 7ನೇ ತಲೆಮಾರಿನ ನೂತನ ಐಪ್ಯಾಡ್, ಆ್ಯಪಲ್ ಐವಾಚ್ ಸಿರೀಸ್ 5 ಮತ್ತು ಬಹುನಿರೀಕ್ಷಿತ ಐಫೋನ್ 11 ಮತ್ತು ಐಫೋನ್ 11 ಪ್ರೊ ಹಾಗೂ ಐಫೋನ್ 11 ಪ್ರೊ ಮ್ಯಾಕ್ಸ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.
ಇದರ ಜೊತೆಗೆ ಆ್ಯಪಲ್ ಟಿವಿ+, ಆ್ಯಪಲ್ ಆರ್ಕೇಡ್ ಗೇಮ್ ಅನ್ನು ಕೂಡ ಪರಿಚಯಿಸಲಾಗಿದೆ. ಹಿಂಬದಿಯಲ್ಲಿ ಎರಡು ಕ್ಯಾಮರಾ ಹೊಂದಿರುವ ಐಪೋನ್ 11, 699 ಅಮೆರಿಕನ್ ಡಾಲರ್ ಬೆಲೆ ಹೊಂದಿದೆ. ಆ್ಯಪಲ್ A13 ಬಯೋನಿಕ್ ಚಿಪ್ ಅನ್ನು ಹೊಸ ಐಫೋನ್ 11 ಸರಣಿಯಲ್ಲಿ ಬಳಸಿಕೊಂಡಿದೆ. ಈವರೆಗೆ ಬಿಡುಗಡೆಯಾಗಿರುವ ಯಾವುದೇ ಐಫೋನ್ಗಿಂತ ಅಥವಾ, ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಿಂತ ಆ್ಯಪಲ್ ಐಪೋನ್ 11 ಪ್ರೊ ಫೋನ್ ಅತ್ಯಂತ ಗರಿಷ್ಠ ವೇಗದ ಕಾರ್ಯಾಚರಣೆ ಹೊಂದಿದೆ. ಜತೆಗೆ ಹಿಂಬದಿಯಲ್ಲಿ ಅತ್ಯುತ್ತಮ ತ್ರಿವಳಿ ಕ್ಯಾಮರಾ, ಐಫೋನ್ 11 ಪ್ರೊ ವಿಶೇಷತೆಯಾಗಿದೆ.
ಐಫೋನ್ 11ರ ಸಿರೀಸ್ ನಲ್ಲಿ ಉತ್ತಮ ಸಾಮರ್ಥ್ಯದ ಕ್ಯಾಮಾರ ಅಳವಡಿಸಲಾಗಿದ್ದು, ಐಫೋನ್ ಪ್ರೊ ಮತ್ತು ಐಫೋನ್ 11 ಮ್ಯಾಕ್ಸ್ ಗಳಲ್ಲಿ ಅಲ್ಟ್ರಾವೈಡ್, ವೈಡ್ ಮತ್ತು ಟೆಲಿಫೋಟೋ ಕ್ಯಾಮಾರಗಳು ಇರಲಿವೆ.
ಐಫೋನ್ 11 ಫ್ರೋ 5.8 ಇಂಚಿನ ಡಿಸ್ ಪ್ಲೇ ಹೊಂದಿದ್ದರೆ, ಮ್ಯಾಕ್ಸ್ 6.5 ಇಂಚಿನ ಡಿಸ್ ಪ್ಲೇ ಹೊಂದಿರುತ್ತದೆ.
ಐಫೋನ್ 11 ಫ್ರೋ ಬೆಲೆ 71,860 ರೂಪಾಯಿ ಎಂದು ಅಂದಾಜಿಸಲಾಗಿದ್ದು, ಮ್ಯಾಕ್ಸ್ 79,050 ರೂಪಾಯಿಗೆ ಗ್ರಾಹಕರಿಗೆ ತಲುಪಲಿದೆ.
Discussion about this post