ವಾಷಿಂಗ್ಟನ್ : ಯುವತಿಯೊಬ್ಬಳು ಆರ್ಡರ್ ಮಾಡಿದ ಬರ್ಗರ್ ನಲ್ಲಿ ಮನುಷ್ಯನ ಕೈ ಬೆರಳು ಸಿಕ್ಕ ಘಟನೆ ಬೊಲಿವಿಯಾದಲ್ಲಿ ನಡೆದಿದೆ.
ಯುವತಿ ಆರ್ಡರ್ ಮಾಡಿ ತರಿಸಿಕೊಂಡ ಬರ್ಗರ್ನಲ್ಲಿ ಮನುಷ್ಯನ ಕೈ ಬೆರಳು ಪತ್ತೆಯಾಗಿದೆ. ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು ವೈರಲ್ ಆಗಿದೆ.
ಇದೀಗ ಗ್ರಾಹಕರ ಸಂರಕ್ಷಣೆ ಸಚಿವಾಲಯದ ಉಪ ಸಚಿವ ಜಾರ್ಜ್ ಸಿಲ್ವಾ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಬರ್ಗರ್ ತಯಾರಿಕಾ ಘಟಕದಲ್ಲಿ ಮಾಂಸ ರುಬ್ಬುವ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಕೈ ಬೆರಳು ಯಂತ್ರಕ್ಕೆ ಸಿಲುಕಿ ತುಂಡಾಗಿತ್ತು. ಹೀಗಾಗಿ ಈ ಅವಾಂತರ ನಡೆದಿದ್ದು ತನಿಖೆ ಆದೇಶಿಸಲಾಗಿದೆ ಅಂದಿದ್ದಾರೆ. ಕೆಲಸಗಾರನ ಎರಡು ಬೆರಳು ತುಂಡಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ದುರಾದೃಷ್ಟವಶಾತ್ ಈ ಮನುಷ್ಯನ ಬೆರಳು ಮಹಿಳೆ ಆರ್ಡರ್ ಮಾಡಿದ ಬರ್ಗರ್ನಲ್ಲಿ ಸಿಕ್ಕಿದೆ. ಆದರೆ ಕೈ ಬೆರಳು ತುಂಡಾದ ಮೇಲೂ ಅದೇ ಮಾಂಸವನ್ನು ಬರ್ಗರ್ಗೆ ಬಳಕೆ ಮಾಡಿದ್ದು ಹೇಗೆ ಅನ್ನುವ ಕುರಿತಂತೆ ತನಿಖೆ ನಡೆಯುತ್ತಿದೆ.
A HORRIFIED woman discovered a human finger inside a burger she was eating.
Discussion about this post