ಬೆಂಗಳೂರು : ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲೇ ಅಲ್ಲೋಲ ಕಲ್ಲೋಲ್ಲ ಮಾಡಿದ್ದ ಹಿಜಬ್ ವಿವಾದದ ಕುರಿತಂತೆ ಹೈಕೋರ್ಟ್ ತನ್ನ ತೀರ್ಪು ಪ್ರಕಟಿಸಿದೆ.
ಮೂವರು ನ್ಯಾಯಾಧೀಶರ ಸರ್ವಸಮ್ಮತ ತೀರ್ಪು ಕೊಟ್ಟಿದ್ದು, ಸಮವಸ್ತ್ರ ನಿಗದಿಪಡಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಹೀಗಾಗಿ ಹಿಜಬ್ ಧರಿಸಿ ಶಾಲೆಗಳಿಗೆ ಬರುವಂತಿಲ್ಲ ಎಂದು ಆದೇಶ ನೀಡಿದೆ. ತರಗತಿಗಳಲ್ಲಿ ಇನ್ಮುಂದೆ ಹಿಜಬ್ ಧರಿಸುವಂತಿಲ್ಲ ಎಂದಿರುವ ಹೈಕೋರ್ಟ್ ಈ ಬಗ್ಗೆ ಶಾಲಾ ಆಡಳಿತ ಮಂಡಳಿ ತೀರ್ಮಾನ ಅಂತಿಮ ಅಂದಿದೆ.
ಸಮವಸ್ತ್ರಕ್ಕೆ ಅಸ್ತು ಅಂದಿರುವ ಹೈಕೋರ್ಟ್ ಧರ್ಮವಸ್ತ್ರಕ್ಕೆ ನೋ ಎಂಟ್ರಿ ಅಂದಿದೆ. ಇನ್ನು ಹಿಜಬ್ ಧರಿಸುವುದಕ್ಕೂ ಅವಕಾಶವಿದೆ ಆದರೆ ಶಾಲಾ ಮಂಡಳಿ ಇದಕ್ಕೆ ಸಮ್ಮತಿಸಬೇಕಾಗುತ್ತದೆ.
Discussion about this post