ಯಡಿಯೂರಪ್ಪ ಸಂಪುಟದಲ್ಲಿ
ಆರೋಗ್ಯ ಸಚಿವರಾಗಿರುವ ಶ್ರೀರಾಮುಲು, ಸರ್ಕಾರಿ ಆಸ್ಪತ್ರೆಗಳ ಅನಾರೋಗ್ಯ ನಿವಾರಿಸುವ ಸಲುವಾಗಿ
ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಬಡವರಿಗೆ ಚಿಕಿತ್ಸೆ ನೀಡಬೇಕಾಗಿರುವ ಸರ್ಕಾರಿ
ಆಸ್ಪತ್ರೆಗಳ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಆಸ್ಪತ್ರೆ ವಾಸ್ತವ್ಯ ಕೂಡಾ
ಮುಂದುವರಿದಿದೆ.
ಈ ನಡುವೆ
ವಿಶ್ರಾಂತಿ ಇಲ್ಲದ ಓಡಾಟದಿಂದ ಆರೋಗ್ಯ ಸಚಿವರ ಆರೋಗ್ಯದಲ್ಲಿ ಏರುಪೇರಾಗಿದೆ. ಕಾಡುತ್ತಿರುವ ಕಾಲು
ನೋವು ಉತ್ಸಾಹಕ್ಕೆ ಅಡ್ಡಿಯಾಗಿದೆ. ಆದರೂ ಕೆಲಸ ನಿಲ್ಲಬಾರದು ಅನ್ನುವ ಹಠದಿಂದ ಕಾಲು ನೋವಿನ
ಪರಿಹಾರಕ್ಕೆ ಆಯುರ್ವೇದ ಚಿಕಿತ್ಸೆ ಪಡೆಯಲು ಆರೋಗ್ಯ ಸಚಿವರು ನಿರ್ಧರಿಸಿದ್ದಾರೆ.
ಈ ಹಿನ್ನಲೆಯಲ್ಲಿ ಯೋಗ ಗುರು ಶ್ರೀಸೋಹಂ ಅವರನ್ನು ಭೇಟಿಯಾಗಿರುವ ಶ್ರೀರಾಮುಲು ಚರ್ಚೆ ನಡೆಸಿದ್ದರು. ಆ ಸಂದರ್ಭದಲ್ಲಿ ಪಡೆದ ಪ್ರಾಥಮಿಕ ಚಿಕಿತ್ಸೆ ಫಲ ನೀಡಿದ ಹಿನ್ನಲೆಯಲ್ಲಿ ಬೆಂಗಳೂರಿನ ಸೋಹಂ ಆಶ್ರಮಕ್ಕೆ ಭೇಟಿ ಕೊಟ್ಟ ಆರೋಗ್ಯ ಸಚಿವರು ಮುಂದುವರಿದ ಚಿಕಿತ್ಸೆ ಪಡೆದಿದ್ದಾರೆ.ಮರ್ಮ ಮತ್ತು ಕಪ್ಪಿಂಗ್ ಚಿಕಿತ್ಸೆ ಪಡೆದಿರುವ ಶ್ರೀರಾಮುಲು, ಕಾಡುತ್ತಿದ್ದ ಕಾಲು ನೋವು ಒಂದಿಷ್ಟು ಬಿಡುಗಡೆ ಕೊಟ್ಟಿದೆ ಅಂದಿದ್ದಾರೆ.
Discussion about this post