ಚುನಾವಣೆಗೆ ಮುನ್ನ ಕುಮಾರಸ್ವಾಮಿ ನಾವೇ ಕಿಂಗ್ ಎಂದು ಓಡಾಡುತ್ತಿದ್ದರು. ನಮ್ಮದೇ ಸರ್ಕಾರ ಎಂದು ಸಾರಿದ್ದರು.ಆದರೆ ಫಲಿತಾಂಶ ಬಂದ ಕಿಂಗ್ ಆಗಿದ್ದವರು ಕಿಂಗ್ ಮೇಕರ್ ಆಗೋದಿಲ್ಲ ಎಂದು ಗೊತ್ತಾಗಿತ್ತು. ಆದರೆ ಆಗಿತ್ತು ಮಾತ್ರ ಕಿಂಗ್.
ದೇವೇಗೌಡರ ದೂರದೃಷ್ಟಿಯ ಕಾರಣದಿಂದಲೋ ಎನೋ ಕುಮಾರಸ್ವಾಮಿ ರಾಜ್ಯ ಮುಖ್ಯಮಂತ್ರಿಯಾಗಿದ್ದು ಇದೀಗ ಇತಿಹಾಸ.
ಆದರೆ ಕುಮಾರಸ್ವಾಮಿ ಸಿಎಂ ಆಗಲು ಒಂದು ಉಂಗುರ ಕಾರಣ ಅನ್ನುವ ಸುದ್ದಿ ಹರಿದಾಡುತ್ತಿದೆ.
ಇದಕ್ಕೆ ಸಾಕ್ಷಿ ಅನ್ನುವಂತೆ ಹಲವು ಸ್ಟೋರಿಗಳನ್ನು ಸುದ್ದಿವಾಹಿನಿಗಳು ಬಿತ್ತರಿಸಿದೆ. ಕುಮಾರಸ್ವಾಮಿ ಸಿಎಂ ಆಗೋದೇ ಇಲ್ಲ ಎಂದು ಜನ ಹೇಳಿದ್ದ ಸಂದರ್ಭದಲ್ಲಿ ಅವರೊಬ್ಬರು ಕುಮಾರಸ್ವಾಮಿಯೇ ಮುಂದಿನ ಸಿಎಂ ಎಂದು ಹೇಳಿದ್ದರು. ಹೇಳಿದ್ದು ಬೇರಾರು ಅಲ್ಲ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಗೌರಿಗದ್ದೆಯ ಸ್ವರ್ಣಪೀಠಿಕಾ ದತ್ತಾಶ್ರಮದ ವಿನಯ್ ಗುರೂಜಿ.
ಅದೊಂದು ದಿನ ಅವಧೂತ ಪರಂಪರೆಯಲ್ಲಿ ಗುರುತಿಸಿಕೊಂಡ 27 ವರ್ಷದ ವಿನಯ್ ಗುರೂಜಿ ಅವರನ್ನು ಭೇಟಿಯಾಗಲು ಕುಮಾರಸ್ವಾಮಿ ಹೋಗಿದ್ದರಂತೆ. ಆಗ ನಾನು ಗುರುವಲ್ಲ. ಆದರೂ ದೇವರನ್ನು ಪ್ರಾರ್ಥಿಸಿ ಎಂದು ಕುಮಾರಸ್ವಾಮಿಗೆ ವಿನಯ್ ಗುರೂಜಿ ಹೇಳಿದ್ದರಂತೆ. ವೆಂಕಟೇಶ್ವರ ಸ್ವಾಮಿಯನ್ನು ಕುಮಾರಸ್ವಾಮಿ ಪ್ರಾರ್ಥಿಸಿದಾಗ ಬಲಗಡೆಯಿಂದ ಹೂ ಬಿತ್ತಂತೆ.
Kumaraswamy ವಿಶೇಷ ವಿಮಾನ ಬಳಸುವುದಿಲ್ಲ ಅಂದರೆ Chandrababu Naidu ಹೇಳಿದ್ದೇನು…?
ಆಗ ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿ ಎಂದು ಹೇಳಿದ್ದ ಗುರೂಜಿ, ನೀವೇ ಮುಂದಿನ ಸಿಎಂ, ಸಮ್ಮಿಶ್ರ ಸರ್ಕಾರ ಖಚಿತ ಎಂದಿದ್ದರಂತೆ. ಅದೇ ವೇಳೆ ಉಂಗುರವೊಂದನ್ನು ಕೊಟ್ಟು ಕಳುಹಿಸಿದ್ದರಂತೆ ಗುರೂಜಿ. ಅದೇ ಉಂಗುರದ ಪ್ರಭಾವದಿಂದ ಕುಮಾರಸ್ವಾಮಿ ಸಿಎಂ ಆಗಿದ್ದಾರೆ ಅನ್ನುವುದು ನಮ್ಮ ಮಾತಲ್ಲ. ಶರವಣ ಮಾತು.
ಸಚಿವನಾಗಬೇಕು ಅಂದುಕೊಂಡಿದ್ದ ಶರವಣ ಇದೀಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿದ್ದು ಕೂಡಾ ಇದೇ ಗುರೂಜಿಯ ಅಶೀರ್ವಾದದಿಂದ ಅನ್ನುವ ಮಾತುಗಳು ಕೇಳಿ ಬರುತ್ತಿದೆ.
Kumaraswamy ಕಡೆಯಿಂದ ರಾಮನಗರಕ್ಕೆ ಬಂಪರ್ ಕೊಡುಗೆ
ಯಾವುದು ಸತ್ಯವೋ ಸುಳ್ಳೋ ಗೊತ್ತಿಲ್ಲ. ಒಟ್ಟಿನಲ್ಲಿ ರಾಜಕಾರಣಿಗಳು ವಿನಯ್ ಗುರೂಜಿ ಕಡೆ ಮುಖ ಮಾಡಿರುವುದು ನೋಡಿದರೆ ಅವರೊಬ್ಬರು ಪವರ್ ಫುಲ್ ಅನ್ನುವುದರಲ್ಲಿ ಅನುಮಾನವಿಲ್ಲ. ಯಾಕೆಂದರೆ ಪವರ್ ಇಲ್ಲದ ಕಡೆ ಮುಖ ಮಾಡಿದ ರಾಜಕಾರಣಿ ಯಾರಿದ್ದಾರೆ ಹೇಳಿ.