ಬೆಂಗಳೂರು : ಜೆಪಿನಗರದ ಮನೆ ತೊರೆದು ರಾಮನಗರದ ತೋಟದ ಮನೆ ಸೇರಿರುವ ಕುಮಾರಸ್ವಾಮಿ ಕುಟುಂಬ ಸದಸ್ಯರು, ಅಲ್ಲೇ ವಾಸ್ತವ್ಯ ಮುಂದುವರಿಸಿದ್ದಾರೆ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಈಗಾಗಲೇ ಕೊರೋನಾ ಸೋಂಕಿಗೆ ತುತ್ತಾದ ಹಿನ್ನಲೆಯಲ್ಲಿ ಎಚ್.ಡಿ.ಕೆ. ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರ.
ತೋಟದ ಮನೆ ಸೇರಿದ್ದರೂ ಪಕ್ಷ ಸಂಘಟನೆ ಕಾರ್ಯವನ್ನು ಕುಮಾರಸ್ವಾಮಿ ನಿಲ್ಲಿಸಿಲ್ಲ. ಇಂದು ಕೂಡಾ ಅನ್ ಲೈನ್ ಮೂಲಕ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.
ಈ ವೇಳೆ ಕುಸಿದಿರುವ ಟೆಸ್ಟಿಂಗ್ ಪ್ರಮಾಣ, ಪರೀಕ್ಷಾ ವರದಿ ವಿಳಂಭ, ಲಸಿಕೆ ಅಭಿಯಾನಕ್ಕೆ ಆಗಿರುವ ಅಡೆ ತಡೆ, ಖಾಸಗಿ ಆಸ್ಪತ್ರೆಗಳ ಹಗಲು ದರೋಡೆ ಕುರಿತಂತೆ ಶಾಸಕರು ಕುಮಾರಸ್ವಾಮಿ ಗಮನ ಸೆಳೆದರು.
ಇದೇ ವೇಳೆ ಹಳ್ಳಿಗಳಿಗೆ ಸೋಂಕು ಹಬ್ಬುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಕುಮಾರಸ್ವಾಮಿ, ಹೇಗಾದರೂ ಸರಿ ಹಳ್ಳಿಗಳನ್ನು ರಕ್ಷಿಸಿ ಎಂದು ಶಾಸಕರಿಗೆ ಸೂಚನೆಗಳನ್ನು ಕೊಟ್ಟಿದ್ದಾರೆ.
ಈ ನಡುವೆ ಡಿ.ಆರ್.ಡಿ.ಒ ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಿರುವ 2 ಡಿಜಿ ಮೆಡಿಸಿನ್ ಪೊಟ್ಟಣ, ಉತ್ತಮವಾಗಿ ಕೆಲಸ ಮಾಡುವುದೇ ಆಗಿದ್ರೆ ಅದನ್ನು ಉಚಿತವಾಗಿ ವಿತರಿಸುವ ಕೆಲಸವನ್ನು ಜೆಡಿಎಸ್ ಮಾಡಲಿದೆ ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ. ಈಗಾಗಲೇ 2ಡಿಜಿ ಬಗ್ಗೆ ಉತ್ತಮ ಅಭಿಪ್ರಾಯ ಕೇಳಿ ಬಂದಿದೆ. ಈಗ ಬಿಡುಗಡೆಯಾಗಿರು ಪೊಟ್ಟಣಗಳು ಹೇಗೆ ಕೆಲಸ ಮಾಡುತ್ತವೆ, ನಿಜಕ್ಕೂ ಇದರಿಂದ ಸೋಂಕಿತರಿಗೆ ಲಾಭವಿದೆಯೇ ಅನ್ನುವುದನ್ನು ಗಮನಿಸೋಣ, ಒಂದು ವೇಳೆ ಇದೊಂದು ಯಶಸ್ವಿ ಮೆಡಿಸಿನ್ ಎಂದು ಸಾಬೀತಾದ್ರೆ, ಸೋಂಕಿತರ ಮನೆ ಮನೆಗೆ ಉಚಿತ 2 ಡಿಜಿ ಪೊಟ್ಟಣ ಹಂಚುವ ಕಾರ್ಯವನ್ನು ಜೆಡಿಎಸ್ ಮಾಡಲಿದೆ ಎಂದಿದ್ದಾರೆ ಕುಮಾರಸ್ವಾಮಿ.
Discussion about this post