ಹರಿಯಾಣ ಸರ್ಕಾರದ ದಿಟ್ಟ ಕ್ರಮ ( Haryana hospital) : ರಿಯಾಯತಿ ದರದಲ್ಲಿ ಸರ್ಕಾರಿ ಜಾಗ ಪಡೆದ ಆಸ್ಪತ್ರೆಗಳಿಗೆ ಅನ್ವಯ
ಹರಿಯಾಣ : ಸರ್ಕಾರದಿಂದ ರಿಯಾಯತಿ ದರದಲ್ಲಿ ಜಾಗ ಪಡೆದ ಖಾಸಗಿ ಆಸ್ಪತ್ರೆಗಳು ಇನ್ಮುಂದೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇ20ರಷ್ಟು ಬೆಡ್ ಗಳನ್ನು ಮೀಸಲಾಗಿರಿಸಬೇಕು ಹಾಗೂ 5 ಲಕ್ಷ ರೂಪಾಯಿ ತನಕ ಉಚಿತ ಚಿಕಿತ್ಸೆ ನೀಡಬೇಕು ಎಂದು ಹರಿಯಾಣ ರಾಜ್ಯ ಸರ್ಕಾರ ಆದೇಶಿಸಿದೆ.( Haryana hospital)
ಈ ಆದೇಶ ವಾರ್ಷಿಕ 1.8 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಜನರಿಗೆ ಅನ್ವಯವಾಗಲಿದ್ದು, ಚಿಕಿತ್ಸಾ ಶುಲ್ಕ 5 ರಿಂದ 10 ಲಕ್ಷದ ತನಕವಿದ್ದರೆ ಬಿಲ್ ನ 10% ಹಣವನ್ನು ಆಸ್ಪತ್ರೆಗಳು ಪಡೆಯಬಹುದಾಗಿದೆ. ಒಂದು ವೇಳೆ ಈ ಮೊತ್ತ 10 ಲಕ್ಷವನ್ನು ದಾಟಿದರೆ ಶೇ30ರಷ್ಟು ಹಣವನ್ನು ಮಾತ್ರ ಪಡೆಯಬೇಕಾಗುತ್ತದೆ.( Haryana hospital)
Read More : Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
ಹಾಗಂತ ಈ ಆದೇಶ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಅನ್ವಯಿಸೋದಿಲ್ಲ, ಸರ್ಕಾರದಿಂದ ರಿಯಾಯತಿ ದರದಲ್ಲಿ ಭೂಮಿ ಪಡೆದು ಆಸ್ಪತ್ರೆ ನಿರ್ಮಿಸಿರುವ ವೈದ್ಯಕೀಯ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ. ಇನ್ನು ಈ ಸೌಲಭ್ಯ ಜಾರಿಯ ಸಲುವಾಗಿ ಪ್ರತ್ಯೇಕ ಪೋರ್ಟಲ್ ರೂಪಿಸಲಾಗಿದ್ದು, ಬಡ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅವರ ವಿವರಗಳನ್ನು ಅಪ್ ಲೋಡ್ ಮಾಡಬೇಕು. ಜೊತೆಗೆ ನೀಡಿದ ಚಿಕಿತ್ಸೆ ಬಿಲ್ ಮೊತ್ತವನ್ನೂ ನಮೂದಿಸಬೇಕು.
ಇದೇ ಆದೇಶದಲ್ಲಿ ಬಡ ರೋಗಿಗಳಿಗೆ ಆಸ್ಪತ್ರೆಯಲ್ಲೇ ಅಗ್ಗದ ಬೆಲೆಯ ಜೆನರಿಕ್ ಮೆಡಿಸಿನ್ ಒದಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ಮೆಡಿಕಲ್ ನಿರ್ಮಿಸುವಂತೆಯೂ ಸೂಚಿಸಲಾಗಿದೆ.
ಇದು ಉತ್ತಮ ಆದೇಶ ಅನ್ನುವುದರಲ್ಲಿ ಅನುಮಾನವಿಲ್ಲ. ಖಾಸಗಿ ಆಸ್ಪತ್ರೆಗಳು ಕೇವಲ ರಾಜಕಾರಣಿಗಳಿಗೆ, ಸೆಲೆಬ್ರೆಟಿಗಳಿಗೆ ಮತ್ತು ಶ್ರೀಮಂತರಿಗಲ್ಲ. ಚಿಕಿತ್ಸೆ ಎಲ್ಲಾರಿಗೂ ಸಮಾನ ಅನ್ನುವುದನ್ನು ಹರಿಯಾಣ ಸರ್ಕಾರ ಸಾರಿದೆ. ಇಂತಹುದೊಂದು ಆದೇಶವನ್ನು ಹೊರಡಿಸುವ ತಾಕತ್ತು ಬಿಜೆಪಿ ನೇತೃತ್ವದ ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ಇದೆಯೇ.
Discussion about this post