ನವದೆಹಲಿ : ದಕ್ಷಿಣಕನ್ನಡದ ಅಕ್ಷರ ಸಂತ, ಕಿತ್ತಳೆ ವ್ಯಾಪಾರಿ ಹರೇಕಳ ಹಾಜಬ್ಬ ಅವರು ರಾಷ್ಟ್ರಪತಿ ಭವನದಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಬರೀಗಾಲಲ್ಲಿ ಹೆಜ್ಜೆ ಹಾಕುತ್ತ, ಸಂಕೋಚದಿಂದಲೇ ರಾಷ್ಟ್ರಪತಿಗಳತ್ತ ಬಂದ ಹಾಜಬ್ಬ ದೇಶದ ಅತ್ಯುನ್ನತ್ತ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀಯನ್ನು ಸ್ವೀಕರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸೇರಿದಂತೆ ಅನೇಕ ಗಣ್ಯರು ಈ ವೇಳೆ ಉಪಸ್ಥಿತರಿದ್ದರು. ಹಾಜಬ್ಬ ಅವರೊಂದಿಗೆ ಪಿವಿ ಸಿಂಧು ಸೇರಿದಂತೆ 119 ಸಾಧಕರಿಗೆ ಪದ್ಮ ಸರಣಿಯ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು.
Discussion about this post