ಬೆಂಗಳೂರು : ಕೊರೋನಾ ಸೋಂಕಿನ ಆತಂಕದಿಂದ ಕೈ ತೊಳೆದಿದ್ದೇ ತೊಳೆದಿದ್ದು, ಸ್ಯಾನಿಟೈಸರ್ ಹಾಕಿದ್ದೇ ಹಾಕಿದ್ದು. ಆದರೆ ಇದೀಗ ಇದೇ ಸ್ಯಾನಿಟೈಸರ್ ತನ್ನ ಅಸಲಿ ರಹಸ್ಯವನ್ನು ಬಿಚ್ಚಿಡಲಾರಂಭಿಸಿದ್ದಾರೆ.
ಮಕ್ಕಳು ಹ್ಯಾಂಡ್ ಸ್ಯಾನಿಟೈಸರ್ ಬಳಸಿದ ಕಾರಣದಿಂದ ಅಮೆರಿಕಾದಲ್ಲಿ ಮಕ್ಕಳ ಕಣ್ಣಿನ ಸಮಸ್ಯೆ 7% ಹೆಚ್ಚಾಗಿದೆಯಂತೆ.
ಸ್ಯಾನಿಟೈಸರ್ ಬಳಸಿದ ಬಳಿಕ ಮಕ್ಕಳನ್ನು ಕಣ್ಣುಗಳನ್ನು ಸ್ಪರ್ಶಿಸುವುದೇ ಈ ಸಮಸ್ಯೆ ಕಾರಣ ಎಂದು ತಜ್ಞರು ಹೇಳಿದ್ದಾರೆ.
ಸ್ಯಾನಿಟೈಸರ್ ಹಚ್ಚಿದ ಕೈಗಳಿಂದ ಕಣ್ಣುಗಳನ್ನು ಮುಟ್ಟಿದಾಗ ಸ್ಯಾನಿಟೈಸರ್ ನಲ್ಲಿರುವ ರಾಸಾಯನಿಕಗಳು ಕಣ್ಣಿನೊಳಗೆ ಸೇರಿಕೊಳ್ಳುತ್ತದೆ. ಇದರಿಂದ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಂಡಿದೆ.
ಹೀಗಾಗಿಯೇ ಮಕ್ಕಳಲ್ಲಿ ಸ್ಯಾನಿಟೈಸರ್ ಬಗ್ಗೆ ಜಾಗೃತಿ ಹಾಗೂ ಮಕ್ಕಳು ಸ್ಯಾನಿಟೈಸರ್ ಹಚ್ಚಿಕೊಂಡ ವೇಳೆ ಪೋಷಕರು ಹೆಚ್ಚಿನ ಕಾಳಜಿ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ.
Discussion about this post