ಅಕ್ಕಿ ಬೇಳೆ ಕಾಳು ಹಾಲು ಮೊಸರು ಹೀಗೆ ನಿತ್ಯ ಉಪಯೋಗಿಸುವ ವಸ್ತುಗಳ ಮೇಲಿನ GST ಪರಿಣಾಮ ಜನಸಾಮಾನ್ಯನ ಮೇಲಾಗಿದೆ. GST rates hiked for numerous items
ಬೆಂಗಳೂರು : ಆಚ್ಛೇ ದಿನ್ ಬರುತ್ತದೆ ಎಂದು ಕಾದಿದ್ದ ಮಂದಿಗೆ ಆಷಾಢ ತಿಂಗಳಲ್ಲೇ ಸರ್ಕಾರ ಶಾಕ್ ಕೊಟ್ಟಿದೆ. ಸೋಮವಾರದಿಂದ ಮತ್ತೊಂದು ಸುತ್ತಿನ ದುಬಾರಿ ದುನಿಯಾ ಪ್ರಾರಂಭವಾಗಿದ್ದು, ನಿತ್ಯ ಬಳಸುವ ವಸ್ತುಗಳು ತುಟ್ಟಿಯಾಗಿದೆ. ( GST rates hiked for numerous items ) ಈಗಾಗಲೇ ಗ್ಯಾಸ್, ಪೆಟ್ರೋಲ್ ದರ ಏರಿಕೆಯಿಂದ ತರ್ಕಾರಿ ಸೇರಿದಂತೆ ಅನೇಕ ನಿತ್ಯ ಬಳಕೆಯ ವಸ್ತುಗಳು ದುಬಾರಿಯಾಗಿದೆ. ಅದಕ್ಕೆ ಇದೀಗ GST ಹೆಸರಿನಲ್ಲಿ ಮತ್ತೊಂದು ದರಾಸುರನ ಸೇರ್ಪಡೆಯಾಗಿದೆ.
ಪ್ಯಾಕ್ ಮಾಡಿದ ವಸ್ತುಗಳಿಂದ ಹಿಡಿದು ಆಸ್ಪತ್ರೆಯ ಬಿಲ್ ತನಕ GST ಹಾಕಲಾಗಿದೆ. ಈ ಕಾರಣದಿಂದ ಅಕ್ಕಿ ಬೇಳೆ ಕಾಳು ಹಾಲು ಮೊಸರಿನ ದರವೂ ಏರಿಕೆಯಾಗಿದೆ. ಅದರಲ್ಲೂ ಅಕ್ಕಿ ಮತ್ತು ಬೇಳೆ ಕಾಳುಗಳನ್ನು ಮದ್ಯಮ ವರ್ಗದ ಮಂದಿ ಖರೀದಿಸಲು ಸಾಧ್ಯವೇ ಇಲ್ಲ. ಹೀಗಾಗಿ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಒಂದು ಕಡೆ ಲಂಚ ಕೊಟ್ಟರೆ ಕೆಲಸವಾಗೋದಿಲ್ಲ, ಮತ್ತೊಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗಾದ್ರೆ ದುಡಿದ ಹಣದಲ್ಲಿ ಉಳಿತಾಯ ಮಾಡೋದಾದ್ರೂ ಹೇಗೆ ಅನ್ನುವುದು ಜನರ ಪ್ರಶ್ನೆಯಾಗಿತ್ತು.
ಈ ನಡುವೆ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ಯಾಕ್ ಮಾಡಿದ ವಸ್ತುಗಳ ದರ ಏರಿಸುವ ಅಗತ್ಯವಿಲ್ಲ. ಇದು ಉತ್ಪಾದಕರ ಮೇಲೆ ಹಾಕುವ GSTಯಾಗಿದೆ. ಇದನ್ನು ಉತ್ಪಾದಕರೇ ಕ್ಲೇಮ್ ಮಾಡಿಕೊಂಡು ವಾಪಾಸ್ ಪಡೆಯಲು ಅವಕಾಶವಿದೆ. ಹಾಗಿರುವಾಗ ಇದನ್ನು ಗ್ರಾಹಕರಿಗೆ ವರ್ಗಾಯಿಸುವುದರಲ್ಲಿ ಅರ್ಥವಿಲ್ಲ. ಈ ಸಂಬಂಧ GST ಕೌನ್ಸಿಲ್ ನಿಂದಲೇ ಆದೇಶವೊಂದನ್ನು ಹೊರಡಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : gold in beach sand : ಮಲ್ಪೆ ಕಡಲ ತೀರದ ಕಸದ ರಾಶಿಯಲ್ಲಿ ಬಂಗಾರದ ಬೇಟೆ
ಈ ಮೂಲಕ ಶೀಘ್ರದಲ್ಲೇ ಏರಿದ ಬೆಲೆಗಳು ಇಳಿಯುವಂತಾಗಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳು ಆಗಿರುವ ಲೋಪವನ್ನು ಪತ್ತೆ ಹಚ್ಚಿ ಸರಿಪಡಿಸುವುದಾಗಿ ಹೇಳಿದ್ದಾರೆ. ಸಿಟಿ ರವಿ, ಈಶ್ವರಪ್ಪ ಸೇರಿದಂತೆ ಅನೇಕ ಬಿಜೆಪಿ ನಾಯಕರು ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ನಡುವೆ ಈ ಹಿಂದೆ ನರೇಂದ್ರ ಮೋದಿಯವರು ಅಕ್ಕಿ ಕಾಳು ಬೇಳೆಗಳ ಮೇಲೆ ತೆರಿಗೆ ಹಾಕುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಟೀಕಿಸಿ ಮಾಡಿದ ಭಾಷಣ ವೈರಲ್ ಆಗುತ್ತಿದೆ. ಅವತ್ತು ನೀವು ಹೇಳಿದ್ದೇನು ಇವತ್ತು ನೀವು ಮಾಡುತ್ತಿರುವುದೇನು ಎಂದು ಪ್ರಶ್ನಿಸುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶಾಲೆಗೆ ಬಾಂಬ್ ಬೆದರಿಕೆ : ಶಾಲೆಗೆ ದೌಡಾಯಿಸಿದ ಡಿಕೆಶಿ ಪುತ್ರಿ ಐಶ್ವರ್ಯ
ಆರ್ ಆರ್ ನಗರದಲ್ಲಿರುವ ಡಿಕೆ ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ.
ಬೆಂಗಳೂರು : ನಗರದ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆ ( national hill view public school ) ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಆರ್ ಆರ್ ನಗರದಲ್ಲಿರುವ ( RR Nagara ) ಈ ಶಾಲೆಗೆ ಬಾಂಬ್ ಇಟ್ಟಿರುವುದಾಗಿ ಇ ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ.
ನಿನ್ನೆ ಸಂಜೆ ವೇಳೆ ಇ ಮೇಲ್ ಬಂದಿದ್ದು, ಇಂದು ಬೆಳಿಗ್ಗೆ ಶಾಲೆಗೆ ಬಂದಾಗ ಈ ವಿಷಯ ಬಹಿರಂಗವಾಗಿದೆ. ತಕ್ಷಣ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರ್ ಆರ್ ನಗರ ಠಾಣೆ ಪೊಲೀಸರು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದು,. ಯೂನಿಟ್ 1, ಯೂನಿಟ್ 2ಗೆ ಒಂದೂವರೆ ಸಾವಿರ ಮಕ್ಕಳನ್ನ ಶಿಫ್ಟ್ ಮಾಡಲಾಗಿದೆ.
ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಕೂಡಾ ಪರಿಶೀಲನೆ ನಡೆಸುತ್ತಿದೆ. ಹಿರಿಯ ಪೊಲೀಸರು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿತ್ತಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಡಿಕೆಶಿ ಪುತ್ರಿ ಐಶ್ವರ್ಯಾ ಕೂಡಾ ಶಾಲೆಗೆ ಆಗಮಿಸಿದ್ದಾರೆ.
Discussion about this post