ನವದೆಹಲಿ : ಸಿಕ್ಕಾಪಟ್ಟೆ ನಷ್ಟದಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಮಾರಾಟ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಬಿಡ್ ಪ್ರಕ್ರಿಯೆಗಳು ಕೂಡಾ ನಡೆದಿದ್ದು, ಬಿಡ್ ವಿನ್ನರ್ ಅನ್ನು ಘೋಷಿಸುವುದು ಬಾಕಿ. ಈ ನಡುವೆ ಟಾಟಾ ಕಂಪನಿ ಎರ್ ಇಂಡಿಯಾ ಖರೀದಿಸುವಲ್ಲಿ ಯಶಸ್ವಿಯಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿತ್ತು.
ಕೇಂದ್ರ ಸರ್ಕಾರ ಕರೆದಿದ್ದ ಬಿಡ್ ನಲ್ಲಿ ಪಾಲ್ಗೊಂಡಿದ್ದ ಟಾಟಾ ಗ್ರೂಪ್ 20 ಸಾವಿರ ಕೋಟಿಗೆ ಏರ್ ಇಂಡಿಯಾ ಸಂಸ್ಥೆಯನ್ನ ಖರೀದಿಸಿದೆ. ಈ ಮೂಲಕ 68 ವರ್ಷಗಳ ಬಳಿಕ ಮತ್ತೆ ‘ಏರ್ ಇಂಡಿಯಾ’ ಟಾಟಾ ಗ್ರೂಪ್ ಮಡಿಲಿಗೆ ಸೇರಿದೆ. ಸ್ಪೈಸ್ ಜೆಟ್ ಕೂಡ ಈ ಬಿಡ್ನಲ್ಲಿ ಭಾಗಿಯಾಗಿತ್ತು, ಆದರೆ ಟಾಟಾ ಗ್ರೂಪ್ ಅತೀ ಹೆಚ್ಚು ಮೊತ್ತಕ್ಕೆ ಬಿಡ್ ಮಾಡಿದ ಕಾರಣ ಏರ್ ಇಂಡಿಯಾ ಟಾಟಾ ಪಾಲಾಗಿದೆ ಎಂದು ವರದಿ ಹೇಳಿತ್ತು.
ಆದೆ ಇದೀಗ ಕೇಂದ್ರ ಸರ್ಕಾರ ಈ ವರದಿಯನ್ನು ನಿರಾಕರಿಸಿದ್ದು, ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ಹೇಳಿದೆ.
“Media reports indicating approval of financial bids by Government of India in the AI disinvestment case are incorrect. Media will be informed of the Government decision as and when it is taken.”
Secretary, Department of Investment and Public Asset Management, GoI
Media reports indicating approval of financial bids by Government of India in the AI disinvestment case are incorrect. Media will be informed of the Government decision as and when it is taken. pic.twitter.com/PVMgJdDixS
— Secretary, DIPAM (@SecyDIPAM) October 1, 2021
Media reports indicating approval of financial bids by Government of India in the AI disinvestment case are incorrect. Media will be informed of the Government decision as and when it is taken
Discussion about this post