ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ರಾಜಧಾನಿಯ ಕೆ ಆರ್ ಮಾರ್ಕೆಟ್ ಹಾಗೂ ಕಲಾಸಿಪಾಳ್ಯ ಮಾರ್ಕೆಟ್ ತೆರೆಯಲು ಬಿಬಿಎಂಪಿ ಅನುಮತಿ ನೀಡಿದೆ.
ಲಾಕ್ ಡೌನ್ ಸಡಿಲಿಕೆಗೊಂಡ ಬಳಿಕವೂ ಮಾರುಕಟ್ಟೆಗಳಲ್ಲಿ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ನಗರದಲ್ಲಿ ಪಾಸಿಟಿವಿಟಿ ರೇಟ್ ತುಂಬಾ ಕಡಿಮೆಯಾದ ಹಿನ್ನಲೆಯಲ್ಲಿ ಮಾರುಕಟ್ಟೆ ತೆರೆಯಲು ಅನುಮತಿ ನೀಡಲಾಗಿದೆ.
ಕೊರೋನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದ್ದು, ಗ್ರಾಹಕರು ಹಾಗೂ ವ್ಯಾಪಾರಿಗಳು ಕೊರೋನಾ ನಿಯಮ ಉಲ್ಲಂಘಿಸಬಾರದು ಎಂದು ಹೇಳಲಾಗಿದೆ. ಆದರೆ ಈ ಮಾತನ್ನು ಯಾರು ಕೇಳುತ್ತಾರೆ ಅನ್ನುವುದು ಈಗಿರುವ ಪ್ರಶ್ನೆ.
ವ್ಯಾಪಾರಿಗಳು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು, ಅಂಗಡಿ ಎದುರು ಸಾಮಾಜಿಕ ಅಂತರ ಕಾಪಾಡಲು ಬಾಕ್ಸ್ ರಚಿಸಬೇಕು, ವ್ಯಾಪಾರಿಗಳು ಹಾಗೂ ಗ್ರಾಹಕರು ಕೊರೋನಾ ಟೆಸ್ಟ್ ಹಾಗೂ ಲಸಿಕೆ ಪಡೆದುಕೊಳ್ಳಬೇಕು, ವ್ಯಾಪಾರಿಗಳು ಎಂದು ಸೂಚನೆ ನೀಡಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಕಂಡು ಬಂದರೆ ದಂಡ ವಿಧಿಸಲಾವುದು ಎಂದು ಆದೇಶದಲ್ಲಿ ಹೇಳಲಾಗಿದೆ. ಮೊದಲ ಅಲೆ ಮುಗಿದ ಬಳಿಕ ಮಾರುಕಟ್ಟೆ ತೆರೆದಾಗ ಜನ ಹೇಗೆ ವರ್ತಿಸಿದ್ದರು ಅನ್ನುವುದು ಎಲ್ಲರಿಗೆ ಗೊತ್ತಿದೆ. ಈಗ್ಲೂ ಮಾರುಕಟ್ಟೆ ತೆರೆಯುವುದರಿಂದ ಜನ ಮೈಮರೆತು ಮಾರುಕಟ್ಟೆಗೆ ನುಗ್ಗುತ್ತಾರೆ. ಬಾ…ಬಾ….ಎಂದು ಮೂರನೇ ಅಲೆಯನ್ನು ಸ್ವಾಗತಿಸುತ್ತಾರೆ.
Discussion about this post