ನವದೆಹಲಿ : ಸ್ವದೇಶಿ ನಿರ್ಮಿತ ಲಸಿಕೆ ಕೋವ್ಯಾಕ್ಸಿನ್ ವುಹಾನ್ ವೈರಸ್ ಸೋಲಿಸುವ ನಿಟ್ಟಿನಲ್ಲಿ ಸಮರ್ಥ ಲಸಿಕೆ ಎಂದು ಹಲವು ಸಂಶೋಧನೆಗಳು ಸಾರಿದೆ. ನಮ್ಮ ದುರಾದೃಷ್ಟ ಈ ಭಾರತದಲ್ಲಿ ತಯಾರಾದ ಲಸಿಕೆ ಭಾರತೀಯರಿಗೆ ಸಿಗುತ್ತಿಲ್ಲ. ಅದ್ಯಾಕೆ ಸಿಗುತ್ತಿಲ್ಲ ಅಂದ್ರೆ ಉತ್ತರ ಯಾರಲ್ಲೂ ಇಲ್ಲ.
ಈ ನಡುವೆ ಕೋವ್ಯಾಕ್ಸಿನ್ಸ್ ವಸಿಕೆ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ಧ ಸಮರ್ಥವಾಗಿ ಹೋರಾಡಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ( ICMR ) ಹೇಳಿದೆ. ಈ ಲಸಿಕೆಯನ್ನು ಐಸಿಎಂಆರ್ ಹಾಗೂ ರಾಷ್ಟ್ರೀಯ ವೈರಾಲಜಿ ಇನಿಸ್ಟಿಟ್ಯೂಟ್ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
![modi](https://torrentspree.com/wp-content/uploads/2021/04/modi-covaxin.jpg)
ICMR ನಡೆಸಿದ ಸಂಶೋಧನೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಕೊರೋನಾ ವೈರಸ್ ವಿರುದ್ಧ ಶೇ77.8 ಹಾಗೂ ಡೆಲ್ಟಾ ವಿರುದ್ಧ ಶೇ65.2ರಷ್ಟು ಪರಿಣಾಮಕಾರಿ ಎಂದು ಗೊತ್ತಾಗಿತ್ತು. ಇದೀಗ ಹೊಸ ಸಂಶೋಧನೆಯಲ್ಲಿ ಕೋವ್ಯಾಕ್ಸಿನ್ Delta plus ವಿರುದ್ಧ ಸಮರ್ಥವಾಗಿ ಹೋರಾಡಬಲ್ಲುದು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಈ ನೆಲದ ಲಸಿಕೆಯೊಂದು ಚೀನಾ ನಿರ್ಮಿತ ವೈರಸ್ ವಿರುದ್ಧ ಹೋರಾಡಬಲ್ಲುದು ಎಂದು ಗೊತ್ತಾಯ್ತಲ್ಲ ಅದು ನೆಮ್ಮದಿಯ ವಿಷಯ.
Discussion about this post