ವಿವಾದದಲ್ಲಿ ಅಂತರ ಕಾಯ್ದುಕೊಳ್ಳಬೇಕಾಗಿದ್ದ ಸಿದ್ದರಾಮಯ್ಯ ಅವಸರಕ್ಕೆ ಬಿದ್ದು ಹೇಳಿಕೆ ಕೊಟ್ಟು ಯಡವಟ್ಟು ಮಾಡಿಕೊಂಡಿದ್ದಾರೆ ( go back Siddu Khan)
ಬೆಂಗಳೂರು : ಸಾವರ್ಕರ್ ಫ್ಲೆಕ್ಸ್ ವಿಚಾರದಲ್ಲಿ ಸಿದ್ದರಾಮಯ್ಯ ಕೊಟ್ಟ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗುವ ಎಲ್ಲಾ ಲಕ್ಷಣಗಳಿದೆ. ಬಿಜೆಪಿಯ ಆಡಳಿತದಿಂದ ಬೇಸತ್ತ ಅನೇಕರು ಕಾಂಗ್ರೆಸ್ ಕಡೆಗೆ ಮುಖ ಮಾಡಿದ್ದರು. ಆದರೆ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರನ್ನು ಓಲೈಸಲು ಕೊಟ್ಟ ಹೇಳಿಕೆಗಳು ಇದೀಗ ಮುಳುವಾಗಿದೆ. ( go back Siddu Khan)
ಮತ್ತೊಂದು ಕಡೆ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಿದ್ದ ಬಿಜೆಪಿಗೆ ಸಿದ್ದರಾಮಯ್ಯ ಹೇಳಿಕೆ ವರವಾಗಿ ಪರಿಣಮಿಸಿದೆ. ಕಾರ್ಯಕರ್ತರು ದೂರ ಸರಿದರು ಅನ್ನುವ ಹೊತ್ತಿಗೆ ಸಿದ್ದರಾಮಯ್ಯ ಹೇಳಿಕೆ ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿದೆ, ಹೀಗಾಗಿ ಸಿದ್ದರಾಮಯ್ಯ ಹೋದ ಕಡೆಗಳಲ್ಲಿ ಗೋ ಬ್ಯಾಕ್ ಸಿದ್ದುಖಾನ್ ಆಂದೋಲನ ಶುರುವಾಗಿದೆ.
ಇದನ್ನು ಓದಿ : Bigg Boss Kannada Ott ಮನೆಯಲ್ಲಿ ಅರ್ಜುನ್ ಆಟಾಟೋಪ : ರಾಜಕಾರಣಿಯ ಅಸಲಿ ಮುಖವಾಡ ಬಯಲು
ಗುರುವಾರ ಅತಿವೃಷ್ಟಿಯಿಂದ ಆಗಿರುವ ಹಾನಿ ಪರಿಶೀಲನೆಗೆ ಕೊಡಗಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರಿಗೆ ಹಿಂದೂ ಸಂಘಟನೆಗಳು ಕಪ್ಪು ಬಾವುಟ ಪ್ರದರ್ಶಿಸಿದೆ. ಜೊತೆಗೆ ಗೋ ಬ್ಯಾಕ್ ಸಿದ್ದುಖಾನ್ ಘೋಷಣೆ ಕೂಗಿದೆ. ಜೊತೆಗೆ ಮೊಟ್ಟೆ ಎಸೆತವೂ ನಡೆದಿದೆ.
ಕೇವಲ ಕೊಡಗು ಮಾತ್ರವಲ್ಲದೆ ಹಾಸನ. ಚಿಕ್ಕಮಗಳೂರಲ್ಲೂ ಗೋ ಬ್ಯಾಕ್ ಸಿದ್ದರಾಮಯ್ಯ ದನಿ ಕೇಳಿಸಿದೆ. ಪರಿಸ್ಥಿತಿ ಗಮನಿಸಿದರೆ Go Back Modi ಆಂದೋಲನದ ರೀತಿಯಲ್ಲಿ Go Back Siddu ಕಾರ್ಯಕ್ರಮ ನಡೆಸಲು ಹಿಂದೂ ಸಂಘಟನೆಗಳು ಯೋಜನೆ ರೂಪಿಸಿದಂತಿದೆ. ಸಿದ್ದರಾಮಯ್ಯ ಹೋಗುವ ಎಲ್ಲಾ ಕಡೆಗಳಲ್ಲಿ Go Back Siddu ಘೋಷಣೆ ಮೊಳಗಿಸಲು ಹಿಂದೂ ಸಂಘಟನೆಗಳು ನಿರ್ಧರಿಸಿದೆ.
ಈ ನಡುವೆ ನಮಗೆ ಮೊಟ್ಟೆ ಎಸೆಯಲು ಬರಲ್ವ, ನಾವು ಹೋರಾಟ ಶುರು ಮಾಡಿದರೆ ಮುಖ್ಯಮಂತ್ರಿ ಎಲ್ಲೂ ಓಡಾಡೋಕೆ ಆಗಲ್ಲ ಅನ್ನುವ ಹೇಳಿಕೆಯನ್ನು ಕೊಡುವ ಮೂಲಕ ಹೋರಾಟವನ್ನು ಮತ್ತೊಂದು ಮೆಟ್ಟಿಲು ಏರಿಸಿದ್ದಾರೆ ಸಿದ್ದರಾಮಯ್ಯ.
ಚುನಾವಣೆ ಸಮೀಪದಲ್ಲಿರುವ ಕಾರಣ ಈ ಹೋರಾಟ ಜೋರಾಗುವ ಲಕ್ಷಣಗಳಿದೆ. ಎಲೆಕ್ಷನ್ ಇಲ್ಲದಿರುತ್ತಿದ್ರೆ ಇವೆಲ್ಲಾ ಒಂದು ದಿನದ ಹೋರಾಟಕ್ಕೆ ಸೀಮಿತವಾಗಿರುತ್ತಿತ್ತು.
Discussion about this post