ಕೆಲ ವಾರಗಳ ಹಿಂದಷ್ಟೇ ನಿರ್ದೇಶಕ ಪ್ರೀತಂ ಶೆಟ್ಟಿ ನಟಿ ಸಿಂಚನ ಪೊನ್ನವ ಜೊತೆಗೆ ಸಪ್ತಪದಿ ತುಳಿದಿದ್ದರು. ಬಹುತೇಕ ಸೆಲೆಬ್ರೆಟಿಗಳ ಮದುವೆ ಸಾಕಷ್ಟು ಸುದ್ದಿಯಾಗುತ್ತದೆ ಆದರೆ 10ಕ್ಕೂ ಹೆಚ್ಚು ಹಿಟ್ ಧಾರವಾಹಿಗಳನ್ನು ಕೊಟ್ಟ ನಿರ್ದೇಶಕನ ಮದುವೆ ಅದ್ಯಾಕೋ ಸುದ್ದಿಯಾಗಲೇ ಇಲ್ಲ. ಆದರೆ ನಾವು ಇವತ್ತು ಈ ಮದುವೆಯ ಹಿಂದಿನ ಪ್ರೇಮ ಕಥೆಯನ್ನು ನಿಮಗಾಗಿ ತಂದಿದ್ದೇವೆ.
ಅದಕ್ಕೂ ಮುಂಚೆ ಈ ಪ್ರೀತಂ ಶೆಟ್ಟಿಯ ಬಗ್ಗೆ ಒಂದೆರೆಡು ಮಾತು ಹೇಳಲೇಬೇಕು. ಮಂಗಳೂರು ಮೂಲದ ಪ್ರೀತಂ ಶೆಟ್ಟಿ ಈ ತನಕ 10 ಧಾರವಾಹಿಗಳನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದಾರೆ. ರಾಧಾ ಕಲ್ಯಾಣ, ಮೀರಾ ಮಾಧವ , ಒಂದೂರಲ್ಲಿ ರಾಜರಾಣಿ , ಮೀನಾಕ್ಷಿ ಮದುವೆ , ಪವಿತ್ರ ಬಂಧನ , ಖುಷಿ, ಕಿನ್ನರಿ, ಕಣ್ಣಣಿ ಇದರಲ್ಲಿ ಪ್ರಮುಖ ಧಾರವಾಹಿ.
ಇನ್ನು ಪ್ರೀತಂ ಶೆಟ್ಟಿಯವರನ್ನು ಮನ ಗೆದ್ದಿರುವ ಸಿಂಚನಾ ಈ ಹಿಂದೆ ಕುಮಾರಸ್ವಾಮಿ ಒಡೆತನದ ಕಸ್ತೂರಿ ವಾಹಿನಿಯಲ್ಲಿ ಸುದ್ದಿ ವಾಚಕಿಯಾಗಿದ್ದರು. ಇದಾದ ಬಳಿಕ ಕಿರುತೆರೆಗೆ ತೆರಳಿದ ಸಿಂಚನಾ ಕೆಲ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಇವರಿಗೆ ಸಿಕ್ಕಿದ್ದು ಪ್ರೀತಂ ಶೆಟ್ಟಿ ನಿರ್ದೇಶಕನ ಕಣ್ಣಣಿ ಧಾರವಾಹಿಯಲ್ಲಿ ಅವಕಾಶ.
ಇದೇ ಧಾರವಾಹಿಯಲ್ಲಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಅನ್ನಲಾಗಿದೆ. ಆದಾದ ಬಳಿಕ ಪಿಂಗಾರ ಅನ್ನೋ ತುಳು ಸಿನಿಮಾ ನಿರ್ದೇಶಿಸಿದ್ದ ಶೆಟ್ಟಿ ರಾಷ್ಟ್ರ ಅಂತರರಾಷ್ಟ್ರೀಯ ಪ್ರಶಸ್ತಿ ಬಾಚಿದ್ದರು. ಈ ಸಿನಿಮಾದಲ್ಲೂ ಸಿಂಚನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಸಿಂಚನ ಹೂಮಳೆ, ರಕ್ಷಾ ಬಂಧನ, ನನ್ ಹೆಂಡ್ತಿ ಕಣ್ಮಣಿ ಹಾಗೂ ಕಾವ್ಯಾಂಜಲಿ ಧಾರವಾಹಿಯಲ್ಲಿ ನಟಿಸಿದ್ದಾರೆ.
Discussion about this post