ಕೊರೋನಾ ಆತಂಕದ ನಡುವೆ ನಾಡು ವಿಘ್ನ ನಿವಾರಕನನ್ನು ಭಕ್ತಿ ಭಾವದಿಂದ ಪೂಜಿಸಿದೆ. ಸರ್ಕಾರದ ಯಡವಟ್ಟಿನ ಕಾರಣ ಕೆಲವು ಕಡೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತೊಂದರೆಯಾಗಿದೆ. ಒಟ್ಟಿನಲ್ಲಿ ಪರಿಸ್ಥಿತಿ ಹೇಗಿತ್ತು ಅಂದ್ರೆ ಬಿಜೆಪಿ ಸರ್ಕಾರ ಹಿಂದೂ ವಿರೋಧಿ ಅನ್ನುವ ಭಾವನೆ ಆಸ್ತಿಕರಲ್ಲಿ ಬಂದಂತೆ ತೋರುತ್ತಿದೆ.
ಈ ನಡುವೆ ಸೆಲೆಬ್ರೆಟಿಗಳು ಕೂಡಾ ಸಡಗರದಿಂದ ಗಣೇಶನ ಹಬ್ಬವನ್ನು ಮನೆಯಲ್ಲೇ ಆಚರಿಸಿದ್ದಾರೆ. ಈ ಪೈಕಿ ಗಮನ ಸೆಳೆದದ್ದು ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಅವರ ಗಣೇಶನ ಹಬ್ಬದ ಆಚರಣೆ. ಈ ಬಾರಿ ಮಂಜು ಅವರು ಮಜಾ ಭಾರತ ತಂಡದೊಂದಿಗೂ ಹಬ್ಬ ಆಚರಿಸಿಲ್ಲ, ತಮ್ಮ ಮನೆಯ ಸದಸ್ಯರ ಜೊತೆಗೂ ಗಮನ ಆಚರಿಸಿಲ್ಲ. ಬದಲಾಗಿ ದಿವ್ಯಾ ಸುರೇಶ್ ಅವರ ಜೊತೆಗೆ ಹಬ್ಬ ಆಚರಿಸಿದ್ದಾರೆ.
ಈಗಾಗಲೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ದಿವ್ಯಾ ಹಾಗೂ ಮಂಜು ಅವರ ಸಂಬಂಧದ ಕುರಿತಂತೆ ಸಾಕಷ್ಟು ಗಾಸಿಪ್ ಗಳು ಹರಡಿದ್ದು, ಆ ಬಗ್ಗೆ ಅವರು YES or NO ಅಂತಾ ಹೇಳಿಲ್ಲ. ಅವರಿಬ್ಬರ ಕಡೆಯಿಂದ ಯಾವುದೇ ಸ್ಪಷ್ಟನೆ ಬಾರದ ಹೊರತು ಅದು ಗಾಳಿ ಸುದ್ದಿಯಾಗಿರುತ್ತದೆ.
ಇನ್ನು ದಿವ್ಯಾ ಸುರೇಶ್ ಜೊತೆ ಹಬ್ಬ ಆಚರಿಸಿರುವ ಬಗ್ಗೆ ಫೋಟೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ. ಈ ಫೋಟೋಗಳನ್ನು ನೋಡಿದರೆ ದಿವ್ಯಾ ಸುರೇಶ್ ಮನೆಯಲ್ಲೇ ಮಂಜು ಹಬ್ಬ ಆಚರಿಸಿದಂತಿದೆ.
Discussion about this post