ಇಷ್ಟು ದಿನಗಳ ಕೊರೋನಾ ಸೋಂಕು ಮಾನವರಿಗೆ ಮಾತ್ರ ಬರುತ್ತದೆ ಅನ್ನಲಾಗಿತ್ತು. ಆದರೆ ಇದೀಗ ಪ್ರಾಣಿಗಳಲ್ಲೂ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಸ್ಫೇನ್ ನ ಬಾರ್ಸಿಲೋನಾದ ಪ್ರಾಣಿ ಸಂಗ್ರಹಾಲಯವೊಂದರಲ್ಲಿ ನಾಲ್ಕು ಸಿಂಹಗಳಿಗೆ ಕೊರೋನಾ ವೈರಸ್ ಇರುವುದು ಪತ್ತೆಯಾಗಿದೆ.
ಈ ಸಿಂಹಗಳಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ.
ಆದರೆ ಸಿಂಹಗಳಿಗೆ ಕೊರೋನಾ ಸೋಂಕು ಹೇಗೆ ಅಂಟಿಕೊಂಡಿತು ಅನ್ನುವುದು ಇನ್ನೂ ಯಕ್ಷ ಪ್ರಶ್ನೆಯಾಗಿದೆ. ಒಟ್ಟು 3 ಹೆಣ್ಣು ಹಾಗೂ 1 ಗಂಡು ಸಿಂಹಕ್ಕೆ ಕೊರೋನಾ ಸೋಂಕು ತಗುಲಿದೆ.
ಇದೀಗ ಸೋಂಕು ತಗುಲಿದ್ದು ಹೇಗೆ ಅನ್ನುವ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ.
Discussion about this post