Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Kumaraswamy Corona : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಕೊರೋನಾ ಪಾಸಿಟಿವ್ : ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು, ಸಿಎಂ ಬೊಮ್ಮಾಯಿವರಿಗೆ ಢವ ಢವ

Radhakrishna Anegundi by Radhakrishna Anegundi
12-07-22, 5 : 38 am
in ರಾಜ್ಯ
Kumaraswamy corona former-chief-minister-hd-kumaraswamy-tested-covid-positive-after meet draupadi-murmu
Share on FacebookShare on TwitterWhatsAppTelegram

ಭಾನುವಾರ ಮಾಜಿ ಪ್ರಧಾನಿ ದೇವೇಗೌಡ ಹಾಗೂ ದ್ರೌಪದಿ ಮುರ್ಮು ಭೇಟಿ ಸಂದರ್ಭದಲ್ಲಿ ಕುಮಾರಸ್ವಾಮಿಯವರು ( Kumaraswamy Corona ) ಉಪಸ್ಥಿತರಿದ್ದರು. ಹೀಗಾಗಿ ಇದೀಗ ಕೇಂದ್ರ ಸಚಿವರು ಸೇರಿದಂತೆ ಅನೇಕರು ಕೊರೋನಾ ಪರೀಕ್ಷೆಗೆ ಒಳಗಾಗಬೇಕಾಗಿದೆ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ( Kumaraswamy Corona ) ಈ ಬಗ್ಗೆ ಅವರೇ ಟ್ವೀಟ್ ಮಾಡಿದ್ದು, ಸಣ್ಣ ಪ್ರಮಾಣದ ಜ್ವರ ಮತ್ತು ಮೈಕೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಫಲಿತಾಂಶ ಪಾಸಿಟಿವ್. ಕೊರೋನಾ ಲಕ್ಷಣಗಳು ಇರುವ ಕಾರಣ ಹೋಮ್ ಐಸೋಲೇಷನ್ ಗೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಮನೆಯಲ್ಲೇ ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ.

ಡಾಕ್ಟರ್ ಸೂಚನೆಯಂತೆ 10 ದಿನಗಳ ಕಾಲ ನಾನು ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯಲಿದ್ದು, ದಯಮಾಡಿ ನನ್ನ ಭೇಟಿಗೆ ಯಾರು ಬರಬಾರದೆಂದು ವಿನಂತಿಸಿದ್ದಾರೆ. ಜೊತೆಗೆ 3-4 ದಿನಗಳಿಂದ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರೆಲ್ಲಾ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : Mysore :ಈಕೆ ಐದು ಮನೆಯ ಒಡತಿ ಆದರೆ ಖತರ್ನಾಕ್ ಕಳ್ಳಿ : ನೆರೆ ಹೊರೆಯ ಮನೆಗಳೇ ಈಕೆಯ ಟಾರ್ಗೆಟ್

hdk draupathi presi1

ಕುಮಾರಸ್ವಾಮಿಯವರು ಈ ಟ್ವೀಟ್ ಮಾಡಿರುವುದು ಜುಲೈ 11 ರಾತ್ರಿ 9.34ಕ್ಕೆ. ಜುಲೈ 10 ರಂದು ಭಾನುವಾರ ರಾಷ್ಟ್ರಪತಿ ಚುನಾವಣೆಗೆ ಎನ್.ಡಿ.ಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದ್ರೌಪದಿ ಮುರ್ಮು ಅವರು ದೇವೇಗೌಡರ ಭೇಟಿಗೆ ಬಂದ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಉಪಸ್ಥಿತರಿದ್ದರು. ಕುಮಾರಸ್ವಾಮಿಯವರು ಮಾತ್ರ ಮಾಸ್ಕ್ ಹಾಕಿಕೊಂಡಿದ್ದರು.

hdk draupathi presi

ಕುಮಾರಸ್ವಾಮಿಯವರಿಗೆ ಕೊರೋನಾ ಪಾಸಿಟಿವ್ ಬಂದಿರುವ ಕಾರಣ ದ್ರೌಪದಿ ಮುರ್ಮು,  ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಟಿ ರವಿ, ಮಾಜಿ ಪ್ರಧಾನಿ ದೇವೇಗೌಡರು, ಹೆಚ್.ಡಿ. ರೇವಣ್ಣ ಹೀಗೆ ಸಾಲು ಸಾಲು ವಿಐಪಿಗಳು ಕೊರೋನಾ ಪರೀಕ್ಷೆಗೆ ಒಳಪಡಬೇಕಾಗಿದೆ.

Smt Droupadi Murmu, NDA Presidential Candidate met former Prime Minister H.D.Deve Gowda at the latter’s residence & sought support. She was extended warm reception and felicitated. 1/3 pic.twitter.com/4Vw3BHmby2

— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 11, 2022

ಈ ಹಿಂದೆಯಾಗಿದ್ರೆ ಇದೊಂದು ದೊಡ್ಡ ಸುದ್ದಿ. ಆದರೆ ನಾಲ್ಕನೇ ಅಲೆಯ ಹೊಸ್ತಿಲಲ್ಲಿ, ಇದೇನು ದೊಡ್ಡ ವಿಷಯವಲ್ಲ ಬಿಡಿ.

As per the doctor's advice, I will undergo treatment at home for next 10 days. I appeal all not to visit me. Please do not mean it otherwise. I also request those who came in contact with me in the 3-4 days to get tested for Covid without fail.2/2

— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 11, 2022

ದಾಳಿಯ ಮಾಹಿತಿಗಳು ಮಾಧ್ಯಮಕ್ಕೆ ಸೋರಿಕೆ : ಎಸಿಬಿ ಕಾರ್ಯವೈಖರಿಗೆ ಹೈಕೋರ್ಟ್ ಗರಂ

ಭ್ರಷ್ಟಾಚಾರ ನಿಯಂತ್ರಣದ ವಿಚಾರದಲ್ಲಿ ಎಸಿಬಿಯನ್ನು ಹೈಕೋರ್ಟ್ ಮತ್ತೆ ತರಾಟೆಗೆ ತೆಗೆದುಕೊಂಡಿದೆ. ಇಂದು ವಿಚಾರಣೆ ಸಂದರ್ಭದಲ್ಲಿ ಎಸಿಬಿ ದಾಳಿಯ ಮಾಹಿತಿಗಳು ಮಾಧ್ಯಮಕ್ಕೆ ಸೋರಿಕೆಯಾಗುತ್ತಿರುವ ಬಗ್ಗೆ ನ್ಯಾಯಮೂರ್ತಿಗಳು ಅಸಮಾಧಾನ ಹೊರ ಹಾಕಿದ್ದಾರೆ.

ಬೆಂಗಳೂರು :  ಎಸಿಬಿ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಮತ್ತೆ ಸೋಮವಾರ ಗರಂ ಆಗಿದ್ದಾರೆ. ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಐಎಸ್ ಅಧಿಕಾರಿ ಮಂಜುನಾಥ್ ಲಂಚ ಸ್ವೀಕಾರ ಪ್ರಕರಣ ಕುರಿತ ಪ್ರಕರಣ ಸಂದರ್ಭದಲ್ಲಿ ಎಸಿಬಿ ವಕೀಲರು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಸಂದೇಶ್ ಅವರು, ಅದು ಹೇಗೆ ನೀವು ದಾಳಿ ಮಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಗೌಪ್ಯತೆ ಕಾಪಾಡಿಕೊಳ್ಳಬೇಕು ಅನ್ನುವುದು ನಿಮಗೆ ಗೊತ್ತಿಲ್ವ. ದಾಳಿ ಮಾಡಿದ ವೇಳೆ ಸಿಕ್ಕ ಮಾಹಿತಿಗಳು ನ್ಯಾಯಾಲಯ ಮತ್ತು ಎಸಿಬಿ ನಡುವೆ ತಾನೇ ವಿನಯಮವಾಗಬೇಕು. ಮತ್ತೊಂದು ಪಾರ್ಟಿಗೂ ಕೊಡುವ ಹಾಗಿಲ್ಲ. ಹಾಗಿದ್ದ ಮೇಲೂ ಇದನೆಲ್ಲಾ ಮಾಧ್ಯಮಗಳಿಗೆ ಯಾರು ಕೊಡ್ತಾರೆ.

ಭ್ರಷ್ಟಾಚಾರದಲ್ಲಿ ಬಂಧನವಾಗಿರುವ ಜಿಲ್ಲಾಧಿಕಾರಿಯಾಗಿದ್ದವರು ಬೆಂಗಳೂರು ಸುತ್ತ ಮುತ್ತ 30 ಎಕರೆ ಜಮೀನು ಮಾಡಿದ್ದಾರೆ ಅನ್ನುವುದು ಮಾಧ್ಯಮಗಳಲ್ಲಿ ಬಂದಿದೆ. ಎಸಿಬಿ ದಾಳಿ ಮಾಡಿದಾಗ ಸಂಗ್ರಹವಾದ ಮಾಹಿತಿಗಳು ನ್ಯೂಸ್ ಪೇಪರ್ ನಲ್ಲಿ ಬರುತ್ತದೆ ಅದು ಹೇಗೆ. ಯಾರು ಇದನ್ನು ಲೀಕ್ ಮಾಡ್ತಾರೆ. ಮನೆಯೊಳಗೆ ಹೋಗಿದೆಲ್ಲಾ ಟಿವಿಯಲ್ಲಿ ಬರುತ್ತದೆ. ತನಿಖೆ ಮುಗಿಯೋ ತನಕ ಗೌಪ್ಯವಾಗಿರಬೇಕಲ್ವ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.

Tags: FEATURED
ShareTweetSendShare

Discussion about this post

Related News

ಹಾಸನ ತಹಶೀಲ್ದಾರ್ ಬಂಧನಕ್ಕೆ ಸಿವಿಲ್‌ ಕೋರ್ಟ್ ಆದೇಶ

ಹಾಸನ ತಹಶೀಲ್ದಾರ್ ಬಂಧನಕ್ಕೆ ಸಿವಿಲ್‌ ಕೋರ್ಟ್ ಆದೇಶ

ಉಗ್ರರ ವಿರುದ್ಧ ಕಾರ್ಯಾಚರಣೆ : ಮಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ( mv pranjal ) ಸೇರಿ ನಾಲ್ವರು ಹುತಾತ್ಮ

ಉಗ್ರರ ವಿರುದ್ಧ ಕಾರ್ಯಾಚರಣೆ : ಮಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ( mv pranjal ) ಸೇರಿ ನಾಲ್ವರು ಹುತಾತ್ಮ

ಮಾಜಿ ಶಾಸಕರಿಗೆ ವಿಷದ ಹಾವು ಕಡಿತ : ಸಂಜೀವ ಮಠಂದೂರು ಆಸ್ಪತ್ರೆಗೆ

ಮಾಜಿ ಶಾಸಕರಿಗೆ ವಿಷದ ಹಾವು ಕಡಿತ : ಸಂಜೀವ ಮಠಂದೂರು ಆಸ್ಪತ್ರೆಗೆ

ಖಾಸಗಿ ಬಸ್ ಮಾಲೀಕರಿಗೆ ಶರಣಾದ ಸಿದ್ದರಾಮಯ್ಯ ಸರ್ಕಾರ : Deepavali ಬರೆ

ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡ ( D. B. Chandregowda ) ಇನ್ನಿಲ್ಲ

Yakshagana : ಲೀಲಾವತಿಯವರಿಗೆ leelavathi baipadithaya ಪ್ರಶಸ್ತಿ ಒಲಿದಿದ್ದು ಹೇಗೆ…. ಮಗ ಬಿಚ್ಚಿಟ್ಟ ರಹಸ್ಯ

yakshagana ರಂಗದ ಸಾಧಕಿಗೆ Karnataka Rajyotsava ಪ್ರಶಸ್ತಿ

ಅರ್ಜಿ ಸಲ್ಲಿಸದವರಿಗೂ ಈ ಬಾರಿ ಕನ್ನಡ ರಾಜ್ಯೋತ್ಸವ (Karnataka Rajyotsava) ಪ್ರಶಸ್ತಿ

Bigg Boss ಮನೆಗೆ ವರ್ತೂರು ಸಂತೋಷ್ : ಕಿಚ್ಚ ಕೊಟ್ಟೆ ಬಿಟ್ರು ಸುಳಿವು – varthur santhosh

ಕೊರಗಜ್ಜ koragajja ಸಿನಿಮಾಗೆ ಸಂಕಷ್ಟ : ಕಳಸದಲ್ಲಿ ನಡೆದ ಕಿರಿಕ್ ನ ಅಸಲಿ ಕಥೆಯೇನು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್