ಭಾನುವಾರ ಮಾಜಿ ಪ್ರಧಾನಿ ದೇವೇಗೌಡ ಹಾಗೂ ದ್ರೌಪದಿ ಮುರ್ಮು ಭೇಟಿ ಸಂದರ್ಭದಲ್ಲಿ ಕುಮಾರಸ್ವಾಮಿಯವರು ( Kumaraswamy Corona ) ಉಪಸ್ಥಿತರಿದ್ದರು. ಹೀಗಾಗಿ ಇದೀಗ ಕೇಂದ್ರ ಸಚಿವರು ಸೇರಿದಂತೆ ಅನೇಕರು ಕೊರೋನಾ ಪರೀಕ್ಷೆಗೆ ಒಳಗಾಗಬೇಕಾಗಿದೆ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ( Kumaraswamy Corona ) ಈ ಬಗ್ಗೆ ಅವರೇ ಟ್ವೀಟ್ ಮಾಡಿದ್ದು, ಸಣ್ಣ ಪ್ರಮಾಣದ ಜ್ವರ ಮತ್ತು ಮೈಕೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಫಲಿತಾಂಶ ಪಾಸಿಟಿವ್. ಕೊರೋನಾ ಲಕ್ಷಣಗಳು ಇರುವ ಕಾರಣ ಹೋಮ್ ಐಸೋಲೇಷನ್ ಗೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಮನೆಯಲ್ಲೇ ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ.
ಡಾಕ್ಟರ್ ಸೂಚನೆಯಂತೆ 10 ದಿನಗಳ ಕಾಲ ನಾನು ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯಲಿದ್ದು, ದಯಮಾಡಿ ನನ್ನ ಭೇಟಿಗೆ ಯಾರು ಬರಬಾರದೆಂದು ವಿನಂತಿಸಿದ್ದಾರೆ. ಜೊತೆಗೆ 3-4 ದಿನಗಳಿಂದ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರೆಲ್ಲಾ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : Mysore :ಈಕೆ ಐದು ಮನೆಯ ಒಡತಿ ಆದರೆ ಖತರ್ನಾಕ್ ಕಳ್ಳಿ : ನೆರೆ ಹೊರೆಯ ಮನೆಗಳೇ ಈಕೆಯ ಟಾರ್ಗೆಟ್
ಕುಮಾರಸ್ವಾಮಿಯವರು ಈ ಟ್ವೀಟ್ ಮಾಡಿರುವುದು ಜುಲೈ 11 ರಾತ್ರಿ 9.34ಕ್ಕೆ. ಜುಲೈ 10 ರಂದು ಭಾನುವಾರ ರಾಷ್ಟ್ರಪತಿ ಚುನಾವಣೆಗೆ ಎನ್.ಡಿ.ಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದ್ರೌಪದಿ ಮುರ್ಮು ಅವರು ದೇವೇಗೌಡರ ಭೇಟಿಗೆ ಬಂದ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಉಪಸ್ಥಿತರಿದ್ದರು. ಕುಮಾರಸ್ವಾಮಿಯವರು ಮಾತ್ರ ಮಾಸ್ಕ್ ಹಾಕಿಕೊಂಡಿದ್ದರು.
ಕುಮಾರಸ್ವಾಮಿಯವರಿಗೆ ಕೊರೋನಾ ಪಾಸಿಟಿವ್ ಬಂದಿರುವ ಕಾರಣ ದ್ರೌಪದಿ ಮುರ್ಮು, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಟಿ ರವಿ, ಮಾಜಿ ಪ್ರಧಾನಿ ದೇವೇಗೌಡರು, ಹೆಚ್.ಡಿ. ರೇವಣ್ಣ ಹೀಗೆ ಸಾಲು ಸಾಲು ವಿಐಪಿಗಳು ಕೊರೋನಾ ಪರೀಕ್ಷೆಗೆ ಒಳಪಡಬೇಕಾಗಿದೆ.
ಈ ಹಿಂದೆಯಾಗಿದ್ರೆ ಇದೊಂದು ದೊಡ್ಡ ಸುದ್ದಿ. ಆದರೆ ನಾಲ್ಕನೇ ಅಲೆಯ ಹೊಸ್ತಿಲಲ್ಲಿ, ಇದೇನು ದೊಡ್ಡ ವಿಷಯವಲ್ಲ ಬಿಡಿ.
ದಾಳಿಯ ಮಾಹಿತಿಗಳು ಮಾಧ್ಯಮಕ್ಕೆ ಸೋರಿಕೆ : ಎಸಿಬಿ ಕಾರ್ಯವೈಖರಿಗೆ ಹೈಕೋರ್ಟ್ ಗರಂ
ಭ್ರಷ್ಟಾಚಾರ ನಿಯಂತ್ರಣದ ವಿಚಾರದಲ್ಲಿ ಎಸಿಬಿಯನ್ನು ಹೈಕೋರ್ಟ್ ಮತ್ತೆ ತರಾಟೆಗೆ ತೆಗೆದುಕೊಂಡಿದೆ. ಇಂದು ವಿಚಾರಣೆ ಸಂದರ್ಭದಲ್ಲಿ ಎಸಿಬಿ ದಾಳಿಯ ಮಾಹಿತಿಗಳು ಮಾಧ್ಯಮಕ್ಕೆ ಸೋರಿಕೆಯಾಗುತ್ತಿರುವ ಬಗ್ಗೆ ನ್ಯಾಯಮೂರ್ತಿಗಳು ಅಸಮಾಧಾನ ಹೊರ ಹಾಕಿದ್ದಾರೆ.
ಬೆಂಗಳೂರು : ಎಸಿಬಿ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಮತ್ತೆ ಸೋಮವಾರ ಗರಂ ಆಗಿದ್ದಾರೆ. ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಐಎಸ್ ಅಧಿಕಾರಿ ಮಂಜುನಾಥ್ ಲಂಚ ಸ್ವೀಕಾರ ಪ್ರಕರಣ ಕುರಿತ ಪ್ರಕರಣ ಸಂದರ್ಭದಲ್ಲಿ ಎಸಿಬಿ ವಕೀಲರು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಸಂದೇಶ್ ಅವರು, ಅದು ಹೇಗೆ ನೀವು ದಾಳಿ ಮಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಗೌಪ್ಯತೆ ಕಾಪಾಡಿಕೊಳ್ಳಬೇಕು ಅನ್ನುವುದು ನಿಮಗೆ ಗೊತ್ತಿಲ್ವ. ದಾಳಿ ಮಾಡಿದ ವೇಳೆ ಸಿಕ್ಕ ಮಾಹಿತಿಗಳು ನ್ಯಾಯಾಲಯ ಮತ್ತು ಎಸಿಬಿ ನಡುವೆ ತಾನೇ ವಿನಯಮವಾಗಬೇಕು. ಮತ್ತೊಂದು ಪಾರ್ಟಿಗೂ ಕೊಡುವ ಹಾಗಿಲ್ಲ. ಹಾಗಿದ್ದ ಮೇಲೂ ಇದನೆಲ್ಲಾ ಮಾಧ್ಯಮಗಳಿಗೆ ಯಾರು ಕೊಡ್ತಾರೆ.
ಭ್ರಷ್ಟಾಚಾರದಲ್ಲಿ ಬಂಧನವಾಗಿರುವ ಜಿಲ್ಲಾಧಿಕಾರಿಯಾಗಿದ್ದವರು ಬೆಂಗಳೂರು ಸುತ್ತ ಮುತ್ತ 30 ಎಕರೆ ಜಮೀನು ಮಾಡಿದ್ದಾರೆ ಅನ್ನುವುದು ಮಾಧ್ಯಮಗಳಲ್ಲಿ ಬಂದಿದೆ. ಎಸಿಬಿ ದಾಳಿ ಮಾಡಿದಾಗ ಸಂಗ್ರಹವಾದ ಮಾಹಿತಿಗಳು ನ್ಯೂಸ್ ಪೇಪರ್ ನಲ್ಲಿ ಬರುತ್ತದೆ ಅದು ಹೇಗೆ. ಯಾರು ಇದನ್ನು ಲೀಕ್ ಮಾಡ್ತಾರೆ. ಮನೆಯೊಳಗೆ ಹೋಗಿದೆಲ್ಲಾ ಟಿವಿಯಲ್ಲಿ ಬರುತ್ತದೆ. ತನಿಖೆ ಮುಗಿಯೋ ತನಕ ಗೌಪ್ಯವಾಗಿರಬೇಕಲ್ವ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.
Discussion about this post