ಆದ್ಯಾಕೋ ಈ ಎಲೆಕ್ಟ್ರಾನಿಕ್ ಸ್ಕೂಟರ್, ಎಲೆಕ್ಟ್ರಾನಿಕ್ ಕಾರು, ಇದೀಗ ಎಲೆಕ್ಟ್ರಾನಿಕ್ ವಾಹನದ ಶೋರೂಮ್ ಗ್ರಹಚಾರವೇ ಸರಿ ಇಲ್ಲ ಅನ್ನಿಸುತ್ತದೆ
ಮಂಗಳೂರು : ಇತ್ತೀಚೆಗೆ ಎಲೆಕ್ಟ್ರಾನಿಕ್ ಸ್ಕೂಟರ್ ಗಳು ದೊಡ್ಡ ಸಂಖ್ಯೆಯಲ್ಲಿ ಅಗ್ನಿ ಅನಾಹುತಕ್ಕೆ ಒಳಗಾಗಿತ್ತು. ಈ ನಡುವೆ ಮೊಟ್ಟ ಮೊದಲ ಬಾರಿಗೆ ಇಲೆಕ್ಟ್ರಾನಿಕ್ ಕಾರಿಗೆ ಮುಂಬೈ ನಲ್ಲಿ ಬೆಂಕಿ ಬಿದ್ದಿದೆ. ಈ ಎಲ್ಲದರ ನಡುವೆ ಮಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸ್ಕೂಟರ್ ಶೋರೂಮ್ ಅಗ್ನಿಯ ಕೆನ್ನಾಲೆಗೆಗೆ ಸುಟ್ಟು ಭಸ್ಮವಾಗಿದೆ.
ಈ ಘಟನೆ ಶುಕ್ರವಾರ ಮುಂಜಾನೆ ಮಂಗಳೂರು ಹೊರವಲಯದ ನಾಗುರಿಯಲ್ಲಿ ನಡೆದಿದೆ. ಇಲ್ಲಿನ ಒಕಿನಾವ ಕಂಪನಿಯ ಸ್ಕೂಟರ್ ಮಳಿಗೆಗೆ ಬೆಂಕಿ ಬಿದ್ದಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಸ್ಕೂಟರ್ ಗಳು ಸುಟ್ಟು ಹೋಗಿದೆ.
ಗುರುವಾ ರಾತ್ರಿ ಸ್ಕೂಟರ್ ಗಳ ಬ್ಯಾಟರಿಯನ್ನು ಸಿಬ್ಬದಿ ಜಾರ್ಜ್ ಗೆ ಇಟ್ಟು ಹೋಗಿದ್ದರು. ಅದರಲ್ಲಿ ಶಾರ್ಟಿ ಸರ್ಕ್ಯೂಟ್ ಉಂಟಾಗಿ ಅಗ್ನಿ ಅನಾಹುತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಈ ಕಟ್ಟಡ ಹಮೀದ್ ಅನ್ನುವವರಿಗೆ ಸೇರಿದ್ದು, ಹಮೀದ್ ಅವರು ಇದೇ ಕಟ್ಟದ ಮೇಲಿನ ಮಹಡಿಯಲ್ಲಿ ವಾಸವಾಗಿದ್ದಾರೆ. ಮುಂಜಾನೆ 7 ಗಂಟೆಯ ಹೊತ್ತಿಗೆ ಹಮೀದ್ ಅವರ ಪತ್ನಿ ಕಟ್ಟಡದ ಕೆಳ ಭಾಗದಿಂದ ಹೊಗೆ ಬರುವುದನ್ನು ಗಮನಿಸಿದ್ದಾರೆ. ಆಗ ಪರಿಶೀಲನೆ ನಡೆಸಿದಾಗ ಅಗ್ನಿ ಅನಾಹುತ ಬೆಳಕಿಗೆ ಬಂದಿದೆ.
ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
Discussion about this post