ಇರಲಾರದೆ ಇರುವೆ ಬಿಟ್ಟುಕೊಂಡರು ಎಂದು ಹಿರಿಯರು ಸುಮ್ನೆ ಹೇಳಿಲ್ಲ. ಅತೀ ಬುದ್ದಿವಂತರಾಗಿ ಹೋದಾಗಲೆಲ್ಲಾ ಎನಾದರೊಂದು ಎಡವಟ್ಟು ನಡೆಯುತ್ತಿರುತ್ತದೆ. ಹೀಗೆ ನ್ಯೂಯಾರ್ಕ್ ನಲ್ಲಿ ಅತೀ ಬುದ್ದಿವಂತರಾಗಲು ಹೊರಟ ದಂಪತಿ ಕಂಗಲಾಗಿ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.
ಉತಾಹ್ನ ಡೊನ್ನಾ ಹಾಗೂ ವೆನ್ನರ್ ಜಾನ್ಸನ್ ದಂಪತಿ ಕೃತಕ ಗರ್ಭಧಾರಣೆ ಮೂಲಕ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. ಮೊದಲ ಮಗುವಿಗೆ 12 ವರ್ಷವಾದರೆ ಎರಡನೇ ಮಗುವಿಗೆ 10 ವರ್ಷ. ಇತ್ತೀಚೆಗೆ ದಂಪತಿ ತಮಾಷೆಗಾಗಿ ಮಕ್ಕಳ DNA ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ಆದರೆ ಇದೀಗ ಬಂದಿರುವ ಡಿಎನ್ಎ ವರದಿ ದಂಪತಿಯನ್ನು ಸಂಕಷ್ಟಕ್ಕೆ ಈಡು ಮಾಡಿದೆ.
ಪರೀಕ್ಷೆಯಲ್ಲಿ ಮಕ್ಕಳ ಡಿಎನ್ಎ ಅಪ್ಪನಿಗೆ ಮ್ಯಾಚ್ ಆಗುತ್ತಿಲ್ಲ. ಅಂದ್ರೆ ಕೃತಕ ಗರ್ಭಧಾರಣೆ ಸಂದರ್ಭದಲ್ಲಿ ಆಸ್ಪತ್ರೆಯವರು ಕೊಟ್ಟ ವಿರ್ಯಾಣು ಬಳಸುವ ಬದಲು ಇನ್ಯಾರದ್ದೋ ವಿರ್ಯಾಣು ಬಳಸಿದ್ದಾರೆ. ಹೀಗಾಗಿ ಅಪ್ಪ ಮಕ್ಕಳ ಡಿಎನ್ಎ ಬೇರೆ ಬೇರೆ. ಇದೀಗ ದಂಪತಿ ಆಸ್ಪತ್ರೆ ವಿರುದ್ಧ ಕೇಸ್ ಜಡಿದಿದ್ದು, ತಪ್ಪನ್ನು ಒಪ್ಪಿಕೊಂಡಿರುವ ಆಸ್ಪತ್ರೆ ಯಾರದ್ದೋ ಅಂಡಾಣು ಇನ್ಯಾರದ್ದೋ ವಿರ್ಯಾಣು ಹೀಗೆ ಮಿಕ್ಸ್ ಆಗುತ್ತಿರುತ್ತದೆ ಅಂದಿದೆ. ಅಲ್ಲಿಗೆ ಕೃತಕ ಗರ್ಭಧಾರಣೆ ಮೂಲಕ ಮಗು ಪಡೆದವರ ಕಥೆಯನ್ನು ಊಹಿಸಿ.
Discussion about this post