ನವದೆಹಲಿ : ಮೇಘಾಲಯದಲ್ಲಿ ನಡೆದ ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ಒಂದೇ ಒಂದು ಸ್ಥಾನವನ್ನು ವಿಧಾನಸಭೆಯಲ್ಲಿ ಹೊಂದಿರದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಧಿಕೃತ ವಿಪಕ್ಷವಾಗಿ ಹೊರ ಹೊಮ್ಮಿದೆ. ರಾತ್ರೋ ರಾತ್ರಿ ಕಾಂಗ್ರೆಸ್ ಶಾಸಕರು ಟಿಎಂಸಿ ಸೇರಿದ ಹಿನ್ನಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಮೇಘಾಲದ 17 ಕಾಂಗ್ರೆಸ್ ಶಾಸಕರ ಪೈಕಿ ಮಾಜಿ ಸಿಎಂ ಮುಕುಲ್ ಸಂಗ್ಮಾ ಸೇರಿ 12 ಶಾಸಕರು ಟಿಎಂಸಿ ಜೊತೆಗೆ ಕೈ ಜೋಡಿಸಿದ್ದಾರೆ. ಹೀಗಾಗಿ ಮೇಘಾಲದ ವಿಧಾನಸಭೆಯಲ್ಲಿ ಸದಸ್ಯರನ್ನೇ ಹೊಂದಿರದ ಟಿಎಂಸಿ ಅಧಿಕೃತ ವಿಪಕ್ಷವಾಗಿದೆ. ಮೂರನೇ ಎರಡರಷ್ಟು ಶಾಸಕರು ಅಂದ್ರೆ 17 ಶಾಸಕರ ಪೈಕಿ 12 ಜನ ಪಕ್ಷಾಂತರ ಮಾಡಿರುವುದರಿಂದ ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ.
60 ಸದಸ್ಯ ಬಲದ ಮೇಘಾಲಯ ವಿಧಾನಸಭೆಗೆ 2023ರಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಈ ಬೆಳವಣಿಗೆ ಮಹತ್ವ ಅನ್ನಿಸಿಕೊಂಡಿದೆ.
ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಅನ್ನುವ ಆರೋಪ ಹೊರಿಸಿರುವ ಸಂಗ್ಮಾ ತಮ್ಮ ಬೆಂಬಲಿಗರೊಂದಿಗೆ ಕೈ ಪಾಳಯ ತೊರೆದಿದ್ದಾರೆ. ಪ್ರಸ್ತುತ ಮೇಘಾಲಯದಲ್ಲಿ NDA ಬೆಂಬಲದೊಂದಿಗೆ national people party ಸರ್ಕಾರ ನಡೆಸುತ್ತಿದೆ. NPPಯ ಕಾನ್ಸಾಡ್ ಸಂಗ್ಮಾ ಸಿಎಂ ಆಗಿದ್ದಾರೆ.
Discussion about this post