ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆ ಜೊತೆ ಸೇರಿ ಬೆಂಗಳೂರಿನಲ್ಲಿ Serviced Apartment ಒಂದನ್ನು ಖರೀದಿಸಿದ್ದಾರೆ ಎಂದು ವಾಣಿಜ್ಯ ಸುದ್ದಿಗಳ ವೆಬ್ ಸೈಟ್ ಸುದ್ದಿ ಪ್ರಕಟಿಸಿದೆ. ಈ ಸಂಬಂಧ Zapkey.com ಗೆ ಲಭಿಸಿದ ದಾಖಲೆಗಳನ್ನು ಉಲ್ಲೇಖಿಸಲಾಗಿದೆ.
6.79 ಕೋಟಿ ಮೊತ್ತದ ವ್ಯವಹಾರ ಇದಾಗಿದ್ದು, ಆಸ್ತಿ ಖರೀದಿ ಸಂಬಂಧ ಆಗಸ್ಟ್ 7 2021 ರಂದು ಸೇಲ್ ಡೀಡ್ ರಿಜಿಸ್ಟರ್ ಮಾಡಿಕೊಳ್ಳಲಾಗಿದ್ದು, 34.64 ಲಕ್ಷ ಸ್ಟಾಂಪ್ ಡ್ಯೂಟಿಯನ್ನು ಸರ್ಕಾರಕ್ಕೆ ಕಟ್ಟಲಾಗಿದೆ. 22 ಮಹಡಿಯೊಂದರ ಕಟ್ಟಡದಲ್ಲಿ ಆಪಾರ್ಟ್ ಮೆಂಟ್ ಖರೀದಿಸಿದ್ದಾರೆ ಎನ್ನಲಾಗಿದೆ.
ಬಳ್ಳಾರಿ ರಸ್ತೆಯಲ್ಲಿರುವ ಗಂಗಾನಗರದಲ್ಲಿ ಈ ಕಟ್ಟಡವಿದ್ದು ಪಡುಕೋಣೆ ಸೇರಿದಂತೆ ಕೆಲವರು ಈ ಪ್ರಾಜೆಕ್ಟ್ ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ. ಇನ್ನು ಈ ಕಟ್ಟಡದ 21 ಮಹಡಿಗಳಲ್ಲಿ ಫೋರ್ ಸೀಸನ್ ಅನ್ನುವ ಹೋಟೆಲ್ ಕಾರ್ಯಾಚರಿಸುತ್ತಿದೆ.
Discussion about this post