ಕೊಡಗಿನಲ್ಲಿ ಪ್ರಕೃತಿಯ ಮೇಲಾದ ದೌರ್ಜನ್ಯದ ಪರಿಣಾಮ ಭೂಕಂಪನ ( Earthquake ) ಅನ್ನಲಾಗಿದೆ. ಹಾಗಾದರೆ ಕೊಡಗು ಪಕ್ಕದ ಜಿಲ್ಲೆಗಳಿಗೂ ಇದೇ ಸ್ಥಿತಿ ಬರಲಿದೆಯೇ
ಕೊಡಗು : ಜಿಲ್ಲೆಯಲ್ಲಿ ಭೂಮಿ ಕಂಪನ ( earthquake) ಮುಂದುವರಿದಿದ್ದು, ಜುಲೈ 2 ರಂದು 8ನೇ ಬಾರಿಗೆ ಕಂಪಿಸಿದ ಭೂಮಿ, ಜುಲೈ 4 ರಂದು ಮತ್ತೆ ಕಂಪಿಸಿದೆ. ಪದೇ ಪದೇ ಭೂಮಿ ಕಂಪಿಸುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇದೀಗ 9ನೇ ಬಾರಿಗೆ ಮಡಿಕೇರಿ ತಾಲೂಕಿನ ಚೆಂಬು, ಪೆರಾಜೆ ಭಾಗದಲ್ಲಿ ದೊಡ್ಡ ಶಬ್ಧದೊಂದಿಗೆ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ.
ಚೆಂಬು ಗ್ರಾಮದಲ್ಲೇ ಪದೇ ಪದೇ ಭೂಮಿ ಕಂಪಿಸುತ್ತಿರುವ ಹಿನ್ನಲೆಯಲ್ಲಿ ನೈಸರ್ಗಿಕ ವಿಕೋಪ ಅಧ್ಯಯನ ತಂಡ ಭೇಟಿ ಕೊಟ್ಟಿದ್ದು, ಚೆಂಬು ಪ್ರೌಢ ಶಾಲೆಯಲ್ಲಿ seismometer ಅಳವಡಿಸಲಾಗಿದೆ.
ಇದನ್ನೂ ಓದಿ : Baragettava sangha: ಕೊಪ್ಪಳ ಎಸ್ಪಿಯನ್ನೇ ಗಾಬರಿಗೊಳಿಸಿದ ರೌಡಿಗಳ ವಾಟ್ಸಾಪ್ ಗ್ರೂಪ್
ಇನ್ನು ಕೊಡಗು ಭಾಗದಲ್ಲಿ ಸಂಭವಿಸಿದ ಭೂಕಂಪನದ ವಿವರ ಹೀಗಿದೆ
ಜೂನ್ 23 : ಬೆಳಗ್ಗೆ 4:37 – ಹಾಸನ ಸಮೀಪದ ಮಲುಗಾನಹಳ್ಳಿ – 3.4 ತೀವ್ರತೆ
ಜೂನ್ 26 : ಬೆಳಗ್ಗೆ 9:09 – ಕೊಡಗು ಸಮೀಪದ ಕರಿಕೆ – 3.2 ತೀವ್ರತೆ
ಜೂನ್ 28 : ಬೆಳಗ್ಗೆ 7:45 – ಕೊಡಗು ಸಮೀಪದ ಚೆಂಬು – 3 ತೀವ್ರತೆ
ಜೂನ್ 28 : ಸಂಜೆ 4: 40 – ಕೊಡಗು ಸಮೀಪದ ಚೆಂಬು – 3ರಷ್ಟು ತೀವ್ರತೆ
ಜೂನ್ 30 : ರಾತ್ರಿ 1:40 – ಸುಳ್ಯ ಸಮೀಪದ ಸಂಪಾಜೆ, ಪೆರಾಜೆ, ಗೂನಡ್ಕ – 1.8ರ ತೀವ್ರತೆ
ಜುಲೈ 1 : ಬೆಳಗ್ಗೆ – ಕೊಡಗು ಮತ್ತು ಸುಳ್ಯದ ಹಲವು ಗಡಿ ಭಾಗಗಳಲ್ಲಿ 1.8ರಷ್ಟು ತೀವ್ರತೆ
ಜುಲೈ 2 : ಮಧ್ಯಾಹ್ನ 1.21 – ಚೆಂಬು, ಕರಿಕೆ, ಪೆರಾಜೆ ಭಾಗಗಳಲ್ಲಿ 1.8ರಷ್ಟು ತೀವ್ರತೆ
ಜುಲೈ 2 : ರಾತ್ರಿ 8 :30 – ಚೆಂಬು, ಕರಿಕೆ, ಪೆರಾಜೆ ಪ್ರದೇಶಗಳಲ್ಲಿ 1.8ರ ತೀವ್ರತೆ
ಜುಲೈ 4 : ರಾತ್ರಿ 9.20 – ಚೆಂಬು, ಪೆರಾಜೆ ಪ್ರದೇಶಗಳಲ್ಲಿ ಭೂಕಂಪನ
Eknath shinde trust vote : ಮಹಾರಾಷ್ಟ್ರದಲ್ಲಿ ಇಂದು ವಿಶ್ವಾಸ ಪರೀಕ್ಷೆ : ಸುಲಭವಾಗಿ ಬಹುಮತ ಸಾಬೀತು ಸಾಧ್ಯತೆ
ಮುಂಬೈ : ಮಹಾರಾಷ್ಟ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಏಕನಾಥ ಶಿಂಧೆ ( Eknath shinde trust vote ) ಇಂದು ವಿಶ್ವಾಸ ಮತ ಸಾಬೀತು ಪಡಿಸಲಿದ್ದಾರೆ. ಪ್ರಸ್ತುತ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರಿ ಬಿಜೆಪಿ ಜೊತೆ ಮೈತ್ರಿ ಸರ್ಕಾರ ರಚಿಸಿರುವ ಏಕನಾಥ ಶಿಂಧೆ ( Eknath shinde ) ಪ್ರಸ್ತುತ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾರೆ.
ಈಗಾಗಲೇ ವಿಧಾನಸಭಾ ಸಚಿವಾಲಯ ಶಿವಸೇನೆ ಶಾಸಕಾಂಗ ನಾಯಕನ ಸ್ಥಾನವನ್ನು ಏಕನಾಥ ಶಿಂಧೆಗೆ ಮತ್ತು ಶಾಸಕ ಭರತ್ ಗೊಂಗಾವಲೆಗೆ ಮುಖ್ಯ ಸಚೇತಕನ ಹುದ್ದೆಗೆ ಮಾನ್ಯತೆ ನೀಡಿದೆ. ಇದು ಉದ್ಧವೇ ಠಾಕ್ರೆಯ ಜೊತೆಗಿನ ಹೊಸ ಕಿತ್ತಾಟಕ್ಕೆ ಕಾರಣವಾಗಲಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಏಕನಾಥ ಶಿಂಧೆ ಸೇಫ್ ಆಗಿದ್ದಾರೆ. ಉದ್ಧವ್ ಠಾಕ್ರೆ ಪರಿಸ್ಥಿತಿ ಹೇಗಿದೆ ಅಂದ್ರೆ ಶಿವೇನೆಯ 39 ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರೂ ಶಿಂಧೆ ಮ್ಯಾಜಿಕ್ ಸಂಖ್ಯೆ ಗಡಿ ದಾಟಲಿದ್ದಾರೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಈಗ 1 ಸ್ಥಾನ ಖಾಲಿ ಇದೆ. ಹೀಗಾಗಿ ಬಹುಮತಕ್ಕೆ 144 ಸ್ಥಾನಗಳು ಬೇಕು. ಶಿಂಧೆ ಪರ 164 ಮತಗಳಿವೆ. ಈ ಪೈಕಿ 39 ಮತಗಳು ತಪ್ಪಿದರೆ, ಸಂಖ್ಯಾ ಬಲ 125ಕ್ಕೆ ಕುಸಿಯುತ್ತದೆ. ಆಗ ಸದನದ ಬಲ 248ಕ್ಕೆ ಬರುತ್ತದೆ. ಆ ವೇಳೆ ಬಹುಮತಕ್ಕೆ 125 ಮತಗಳು ಸಾಕಾಗುವುದರಿಂದ ಏಕನಾಥ ಶಿಂಧೆ ( Eknath shinde ) ಸರ್ಕಾರ ಸೇಫ್ ಆಗಿರುತ್ತದೆ.
ಈ ನಡುವೆ ಶಿಂಧೆ ಬಣದ 16 ಶಾಸಕರನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ಉದ್ಧವ್ ಠಾಕ್ರೆಯ ಶೀವಸೇನೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದೆ. ಆದರೆ ಅಲ್ಲಿ ಅರ್ಜಿ ವಿಚಾರಣೆ ಇನ್ನೂ ನಡೆದಿಲ್ಲ. ಒಂದು ವೇಳೆ 16 ಶಾಸಕರೂ ಅನರ್ಹಗೊಂಡರೆ ಸದನದ ಸಂಖ್ಯಾ ಬಲ 148ಕ್ಕೆ ಕುಸಿಯುತ್ತದೆ. ಆಗ ಸದನದ ಬಲ 271ಕ್ಕೆ ಬಂದು ನಿಲ್ಲುತ್ತದೆ. ಆಗ ಬಹುಮತಕ್ಕೆ 136 ಮತಗಳು ಸಾಕಾಗುತ್ತದೆ.
Discussion about this post